Lalbagh Flower Show 2024: ಜ 18 ರಿಂದ ಲಾಲ್​ಬಾಗ್ ಫ್ಲವರ್ ಶೋ; ಶಾಲಾ ಮಕ್ಕಳಿಗೆ ಉಚಿತ ಪ್ರವೇಶ, ಬಸವಣ್ಣನವರ ಅನುಭವ‌ಮಂಟಪ ಈ ಬಾರಿಯ ಮುಖ್ಯ ಆಕರ್ಷಣೆ

Lalbagh Flower Show 2024: ಪ್ರತಿವರ್ಷದಂತೆ ಈ ಬಾರಿಯೂ ಜನವರಿಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್ಬಾಗ್ನಲ್ಲಿ 215 ನೇ ಫ್ಲವರ್ ಶೋ ಆಯೋಜಿಸಲಾಗಿದ್ದು ಜನವರಿ 18 ರಿಂದ 11 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಲಿದೆ, ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟನೆಯನ್ನು ಮಾಡಲಿದ್ದಾರೆ ಎಂದು ಲಾಲ್ಬಾಗ್ ನಿರ್ದೇಶಕ ರಮೇಶ್ ತಿಳಿಸಿದ್ದಾರೆ.

Lalbagh Flower Show 2024

Bangalore, Jan 15, 2024: ಬೆಂಗಳೂರಿನ ಲಾಲ್ಬಾಗ್ನಲ್ಲಿ ಪ್ರತಿ ವರ್ಷವೂ ಗಣರಾಜ್ಯೋತ್ಸವದ ಅಂಗವಾಗಿ ಫ್ಲವರ್ ಶೋ ಆಯೋಜಿಸುವುದು ವಾಡಿಕೆಯಾಗಿದೆ, ಹಾಗೂ ಅದರಂತೆ 2024ರ ಗಣರಾಜ್ಯೋತ್ಸವದ ಅಂಗವಾಗಿ ಜನವರಿ 18 ರಿಂದ 11 ದಿನಗಳ ಕಾಲ ಫಲ ಪುಷ್ಪ ಪ್ರದರ್ಶನವನ್ನು ಲಾಲ್ಬಾಗ್ನಲ್ಲಿ ಆಯೋಜಿಸಲಾಗಿದೆ.

ಲಾಲ್ ಬಾಗ್ ನ 215ನೆ ಫಲಪುಷ್ಪ ಪ್ರದರ್ಶನವನ್ನು ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಉದ್ಘಾಟನೆಯನ್ನು ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಲಾಲ್ಬಾಗ್ನ ನಿರ್ದೇಶಕ ರಮೇಶ್ ರವರು ಈ ಕುರಿತು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಬಸ್ ನಲ್ಲಿ ಉಚಿತ ಟಿಕೆಟ್‌ ನೀಡುವ ವಿಚಾರಕ್ಕೆ ಜಗಳ! ಕಂಡಕ್ಟರ್ ಮುಖವನ್ನು ಪರಿಚಿದ ಮಹಿಳೆ

ಅಲ್ಲದೆ ಮಾಹಿತಿಗಳನ್ನು ತಿಳಿಸಿದ ಅವರು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಫಲ ಪುಷ್ಪ ಪ್ರದರ್ಶನ ಇರಲಿದೆ ಪ್ರತಿವರ್ಷದಂತೆ ಈ ಬಾರಿಯೂ ಸಹ ವಿಶೇಷ ಫ್ಲವರ್ ಶೋ ಆಯೋಜನೆ ಮಾಡಲಾಗಿದೆ ಆ ಮೂಲಕ ಪರಿಸರವನ್ನು ಹೇಗೆ ಪ್ರೀತಿಸಬೇಕು ಎಂಬ ಸಂದೇಶವನ್ನು ನೋಡುಗರು ಕಲಿಯಬಹುದು ಎಂದು ತಿಳಿಸಿದ್ದಾರೆ.

Lalbagh Flower Show 2024

Image Courtesy: Vistara News

ಈ ಬಾರಿ ಫ್ಲವರ್ ಶೋನಲ್ಲಿ ಒಟ್ಟು 68 ಬಗೆಯ ಹೂಗಳು ಹಾಗೂ 22 ವರ್ಣ ರಂಜಿತ ಹೂಗಳು ಇರಲಿವೆ. ಒಟ್ಟಾರೆ 35 ಲಕ್ಷ ಹೂಗಳನ್ನು ಬಳಕೆ ಮಾಡಿ ಈ ಒಂದು ಫಲ ಪುಷ್ಪ ಪ್ರದರ್ಶನವನ್ನು ನಿರ್ಮಿಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ ಹಾಗೂ ಈ ಬಾರಿ ಜಗಜ್ಯೋತಿ ಬಸವಣ್ಣನವರ ಜೀವನ ಆಧಾರಿತವಾದ ಫ್ಲವರ್ ಶೋ ಇರಲಿದೆ ಹಾಗೂ ಅನುಭವ ಮಂಟಪ ಮುಖ್ಯ ಆಕರ್ಷಣೆಯಾಗಿದೆ ಎಂದು ತಿಳಿಸಿದರು.

10 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ:

ಲಾಲ್ ಬಾಗ್ ನಲ್ಲಿ ವರ್ಷಕ್ಕೊಮ್ಮೆ ನಡೆಯುವ ಫಲ ಪುಷ್ಪ ಪ್ರದರ್ಶನವನ್ನು ನೋಡಲು ಕಳೆದ ವರ್ಷ 10 ಲಕ್ಷದಷ್ಟು ಜನ ಸೇರಿದ್ದರು ಹಾಗಾಗಿ ಈ ಬಾರಿ 10 ಲಕ್ಷಕ್ಕೂ ಹೆಚ್ಚು ಜನರು ಸೇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ, ಹಾಗಾಗಿ ಜನಸಂದಣಿಯನ್ನು ನಿಭಾಯಿಸಲು ಈ ಬಾರಿ ಲಾಲ್ಬಾಗ್ನಾನ್ ನಾಲ್ಕು ಗೇಟ್ಗಳಲ್ಲಿ ಪ್ರವೇಶವನ್ನು ನೀಡಲಾಗುತ್ತದೆ, ಹಾಗೂ 400ಕ್ಕೂ ಹೆಚ್ಚು ಟ್ರಾಫಿಕ್ ಪೊಲೀಸರು, 200ಕ್ಕೂ ಹೆಚ್ಚು ತೋಟಗಾರಿಕೆ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜನೆಗೆ ಮಾಡಲಾಗುತ್ತದೆ ಹಾಗೂ ಯಾವುದೇ ಅಹಿತಕರ ಘಟನೆಗಳು ಅಥವಾ ಸಮಸ್ಯೆ ಆಗದಂತೆ ನಿಗಾವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವರಾಮ ಕಾರಂತ ಬಡಾವಣೆಯ 10,000 ನಿವೇಶನಗಳನ್ನು ಮಾರಾಟ ಮಾಡಲು ಬಿಡಿಎ ಸಿದ್ಧತೆ; ದರ ಎಷ್ಟಿದೆ? ಅರ್ಜಿ ಆಹ್ವಾನ ಯಾವಾಗ?

ಫ್ಲವರ್ ಶೋಗೆ ಚಲನಚಿತ್ರರಂಗದ ನಟ ನಟಿಯರು ರಾಜಕೀಯ ನಾಯಕರು ಹಾಗೂ ಇನ್ನಿತರೆ ಪ್ರಮುಖ ಗಣ್ಯರು ಬರುವ ಸಾಧ್ಯತೆ ಇದೆ ಅಲ್ಲದೆ ಸುರಕ್ಷತೆಯ ಭಾಗವಾಗಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ ಹಾಗೂ ಒಂದೆರಡು ಕಡೆ ಎಲ್ಇಡಿ ಸ್ಕ್ರೀನ್ಗಳನ್ನು ಸಹ ಅಳವಡಿಸಲಾಗುತ್ತದೆ ಎಂದು ಲಾಲ್ಬಾಗ್ ನಿರ್ದೇಶಕ ರಮೇಶ ರವರು ತಿಳಿಸಿದ್ದಾರೆ.

ಈ ಸುದ್ದಿಗೋಷ್ಠಿಯಲ್ಲಿ ತೋಟಗಾರಿಕಾ ಇಲಾಖೆ ಕಾರ್ಯದರ್ಶಿ ಶಮ್ಲ ಇಕ್ಬಾಲ್ ಲಾಲ್ಬಾಗ್ ನಿರ್ದೇಶಕ ರಮೇಶ್ ಡಿಎಸ್ ಜಂಟಿ ನಿರ್ದೇಶಕ ಜಗದೀಶ್ ಭಾಗಿಯಾಗಿದ್ದರು.

Latest Trending

Follow us on Instagram Bangalore Today

Leave a Reply

Your email address will not be published. Required fields are marked *