Scooty Pep Violating Traffic Rules: ಹೆಲ್ಮೆಟ್ ಧರಿಸದೆ ವಾಹನ ಚಾಲನೆ! ಸ್ಕೂಟಿ ಪೆಪ್ ಗೆ 3.22 ಲಕ್ಷ ರೂ ದಂಡ ವಿಧಿಸಿದ ಪೊಲೀಸರು

Scooty Pep Violating Traffic Rules In Bengaluru: ಬೆಂಗಳೂರಿನ ಆರ್‌ಟಿ ನಗರದ ಗಂಗಾನಗರದ ಬಳಿ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸ್ಕೂಟಿ ಪೆಪ್ ಗೆ ಅಂದಾಜು 3.2 ಲಕ್ಷ ದಂಡ ವಿಧಿಸಲಾಗಿದೆ. ಈ ವಾಹನ ಮಾಲಾ ಎಂಬ ಮಹಿಳೆಗೆ ಸೇರಿದ್ದು ಈ ಸ್ಕೂಟಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಯ 643 ಪ್ರಕರಣಗಳು ದಾಖಲಾಗಿವೆ.

Scooty Pep Violating Traffic Rules In Bengaluru

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ನಗರದ ಸಂಚಾರ ಪೊಲೀಸರು ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಅದರಲ್ಲಿ ಟ್ರಾಫಿಕ್ ಸಿಗ್ನಲ್‌ಗಳು ಮತ್ತು ಆಯಾ ನಿರ್ಬಂಧಿತ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದು ಮುಖ್ಯ ಕ್ರಮವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿಗಳು ಬಿಡುಗಡೆ, ಇಲ್ಲಿವೆ ನೋಡಿ, ತಪ್ಪದೆ ಓದಿ!

ನಗರದಲ್ಲಿ ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪಿಂಗ್, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ 200, 500, 1000 ರೂ.ಗಳ ದಂಡ ವಿಧಿಸಲಾಗುತ್ತಿದ್ದು, ಆದರೆ ಗಂಗಾನಗರದ ಬಳಿ ಅಚ್ಚರಿಯ ದಾಖಲೆ ನಿರ್ಮಾಣವಾಗಿದೆ,

Scooty Pep Violating Traffic Rules In Bengaluru

ಹೌದು ಬರೋಬ್ಬರಿ 643 ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ಮೂಲಕ ಮಾಲಾ ಎಂಬುವರಿಗೆ ಸೇರಿದ ಸ್ಕೂಟಿ ಪೆಪ್ ಗೆ ಬರೋಬ್ಬರಿ 3.2 ಲಕ್ಷಗಳನ್ನು ಬೆಂಗಳೂರು ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ, ಸಿಸಿ ಕ್ಯಾಮರಾ ದಲ್ಲಿ ಒಟ್ಟು 643 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.

ಆರ್ ಟಿ ನಗರದ ಗಂಗಾನಗರ ಬಳಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ಆಧಾರದ ಮೇಲೆ 3.2 ಲಕ್ಷ ದಂಡ ಹೊಂದಿರುವಂತಹ ಸ್ಕೂಟಿ ಬೆಲೆ 80 ಸಾವಿರ ಗಳಾಗಿದ್ದು ಸ್ಕೂಟಿಗಿಂತ ನಾಲ್ಕು ಪಟ್ಟು ಹೆಚ್ಚು ದಂಡದ ಬಿದ್ದಿದೆ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ, KA 04 KF9072 ನಂಬರ್ನ ಸ್ಕೂಟಿಯಲ್ಲಿ ಹೆಲ್ಮೆಟ್ ಧರಿಸದೆ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ ಎಂದು ತಿಳಿದು ಬಂದಿದೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *