Karnataka KSRTC: ಕರ್ನಾಟಕಕ್ಕೆ KSRTC ಹೆಸರು ಬಳಕೆಗೆ ಮದ್ರಾಸ್ ಹೈಕೋರ್ಟ್ ನಿಂದ ಗ್ರೀನ್ ಸಿಗ್ನಲ್, ಕೇರಳ ರಾಜ್ಯ ಸಾರಿಗೆ ಸಲ್ಲಿಸಿದ ಅರ್ಜಿ ವಜಾ!

Karnataka KSRTC: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ KSRTC ಎಂಬ ಹೆಸರು ಬಳಸುವಂತಿಲ್ಲ ಎಂದು ಕೇರಳ ಸಾರಿಗೆ ಸಂಸ್ಥೆಯು ತಕರಾರು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಗೆ ಸಲ್ಲಿಸಲಾಗಿತ್ತು, ಈ ಕುರಿತು ವಿಚಾರಣೆಯನ್ನು ನಡೆಸಿರುವಂತಹ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಕಟಿಸಿದೆ. ಕೆಎಸ್‌ಆರ್‌ಟಿಸಿ ಹೆಸರು ಮತ್ತು ಲೋಗೋವನ್ನು ಕರ್ನಾಟಕಕ್ಕೆ ಬಳಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದ್ದು, ಆ ಮೂಲಕ ಕೇರಳ ರಾಜ್ಯ ಸಾರಿಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

Karnataka KSRTC

ಎರಡು ವರ್ಷಗಳ ಹಿಂದೆ ಇದೇ ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಮೂಲಕ ಕೆಎಸ್‌ಆರ್‌ಟಿಸಿ ಮಾಲೀಕತ್ವವನ್ನು ಪಡೆದಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕರ್ನಾಟಕ ರಾಜ್ಯ ಸಾರಿಗೆ ಕೆಎಸ್‌ಆರ್‌ಟಿಸಿ ಹೆಸರನ್ನು ಬಳಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು, ಆದರೆ ಕೆಎಸ್‌ಆರ್‌ಟಿಸಿ ಸಂಕ್ಷಿಪ್ತ ರೂಪ ಮೇಲೆ ಕರ್ನಾಟಕ ಸಾರಿಗೆ ಹೆಚ್ಚಿನ ನಿಯಂತ್ರಣವನ್ನು ಹೊಂದಿಲ್ಲ. ಆದ್ದರಿಂದ ಕೇರಳ ಸಾರಿಗೆ ನಿಗಮವು ಚೆನ್ನೈನ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ ಮುಂದೆ ಅರ್ಜಿಯನ್ನು ಸಲ್ಲಿಸಲಾಗಿತ್ತು.

ಇದಾದ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಐಪಿಬಿಐ ರದ್ದುಗೊಳಿಸಿದ್ದರಿಂದ ಅದನ್ನು ಮದ್ರಾಸ್ ಹೈಕೋರ್ಟ್‌ಗೆ ರವಾನಿಸಿದ್ದರಿಂದ ಇದೀಗ ಕರ್ನಾಟಕ ರಾಜ್ಯ ಕೆಎಸ್‌ಆರ್‌ಟಿಸಿ ಹೆಸರು ಮತ್ತು ಲೋಗೋ ಬಳಕೆಗೆ ಯಾವುದೇ ಅಡ್ಡಿ ಇಲ್ಲ ಎಂದು ಮದ್ರಾಸ್ ಕೋರ್ಟ್ ಆದೇಶ ಹೊರಡಿಸಿದೆ, ಮತ್ತು ಕೇರಳ ರಾಜ್ಯ ಸಾರಿಗೆ ಸಲ್ಲಿಸಿದ ವಿವಾದದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ಇದನ್ನೂ ಓದಿ: ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು 1,185 ಕ್ಕೆ ಏರಿಕೆ; ಕೇರಳ ಒಂದೇ ರಾಜ್ಯದಿಂದಲೇ ಶೇ.90 ರಷ್ಟು ಪ್ರಕರಣಗಳು ಪತ್ತೆ!

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಹೋರಾಟಕ್ಕೆ ಜಯ!

ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ ನಂತರ, ಮೈಸೂರು ಸರ್ಕಾರಿ ರಸ್ತೆ ಸಾರಿಗೆ ಸಂಸ್ಥೆ ಎಂದು ಹೆಸರಿಸಲಾದ ಸಾರಿಗೆ ಸಂಸ್ಥೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡಲಾಯಿತು, ಅಂದಿನಿಂದ ಕೇರಳ ರಾಜ್ಯ ಸಾರಿಗೆ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಸಾರಿಗೆ ನಿಗಮದ ನಡುವೆ KSRTC ಎಂಬ ಸಂಕ್ಷಿಪ್ತ ರೂಪಕ್ಕಾಗಿ ಭಾರಿ ಪೈಪೋಟಿ ಪ್ರಾರಂಭವಾಯಿತು.

ಇದನ್ನೂ ಓದಿ:  ಬೆಂಗಳೂರಿನ ಟೆಕ್ಕಿಯೊಬ್ಬರು OLX ನಲ್ಲಿ ಹಾಸಿಗೆ ಮಾರಲು ಹೋಗಿ 68 ಲಕ್ಷ ರೂ ಕಳೆದುಕೊಂಡಿದ್ದಾರೆ; ಹೇಗೆ ಎಂಬುವುದು ಆಶ್ಚರ್ಯಕರ!

ಇಂದಿಗೂ ಈ ಎರಡು ರಾಜ್ಯಗಳ ಕೇರಳ ಮತ್ತು ಕರ್ನಾಟಕ ರಾಜ್ಯಗಳ ಸರ್ಕಾರಿ ಬಸ್‌ಗಳು ಕೆಎಸ್‌ಆರ್‌ಟಿಸಿ ಎಂಬ ಹೆಸರಿನಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಮೂಲಕ ರಿಜಿಸ್ಟ್ರಿ ಮೂಲಕ ಹಕ್ಕುಸ್ವಾಮ್ಯ ಪಡೆದಿರುವ ಕೇರಳ ರಾಜ್ಯ ಸಾರಿಗೆ ಸಂಸ್ಥೆಯು ಕರ್ನಾಟಕ ಸಾರಿಗೆ ”ಕೆ.ಎಸ್.ಆರ್.ಟಿ.ಸಿ” ಎಂಬ ಸಂಕ್ಷಿಪ್ತ ರೂಪ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿತ್ತು.

ಆದರೆ ಇದೀಗ ಮದ್ರಾಸ್ ಹೈಕೋರ್ಟ್ ಕೆ.ಎಸ್.ಆರ್.ಟಿ.ಸಿ ಹೆಸರು ಮತ್ತು ಲೋಗೋ ಬಳಕೆಗೆ ಕರ್ನಾಟಕದ ಅಭ್ಯಂತರವಿಲ್ಲ ಎಂದು ತೀರ್ಪು ನೀಡಿದ್ದು, ಹೀಗಾಗಿ ಇದು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಹೋರಾಟಕ್ಕೆ ಸಂದ ಜಯ ಎಂದೇ ಹೇಳಬಹುದು.

Latest Trending

Follow us on Instagram Bangalore Today

Leave a Reply

Your email address will not be published. Required fields are marked *