BBMP Service Charge: ನಮ್ಮ ಮೆಟ್ರೋಗೆ ಬಿಬಿಎಂಪಿ ಸೇವಾ ಶುಲ್ಕದ ಹೊರೆ: ಮೆಟ್ರೋ ಟಿಕೆಟ್ ದರ ಹೆಚ್ಚಳ ಸಾಧ್ಯತೆ!

BBMP Service Charge: ಐಟಿ ಬಿಟಿ ಕಂಪನಿಗಳ ಕೇಂದ್ರ ಬಿಂದುವಾಗಿರುವ ರಾಜ್ಯ ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನೀಗಿಸಲು ಸ್ಥಾಪಿಸಿರುವ ನಮ್ಮ ಮೆಟ್ರೋ ಟ್ರಾನ್ಸಿಟ್ ಸಿಸ್ಟಂಗೆ ಇದೀಗ ಬಿಬಿಎಂಪಿಯಿಂದ ಸೇವಾ ಶುಲ್ಕ ವಿಧಿಸಲಿದ್ದು, ಮುಂಬರುವ ದಿನಗಳಲ್ಲಿ ಇದರ ಪರಿಣಾಮ ಪ್ರಯಾಣಿಕರ ಮೇಲೆ ಬೀಳುವ ಸಾಧ್ಯತೆ ಇದೆ. ಬೆಂಗಳೂರಿನ ಅಭಿವೃದ್ಧಿಗೆ ಆದಾಯದ ಮೂಲಗಳನ್ನು ಹುಡುಕುತ್ತಿರುವ ಬಿಬಿಎಂಪಿ, ಇದೀಗ ನಮ್ಮ ಮೆಟ್ರೋದಿಂದ ಆಸ್ತಿ ತೆರಿಗೆ ಬದಲಿಗೆ ಸೇವಾ ಶುಲ್ಕವನ್ನು ಸಂಗ್ರಹಿಸಲು ನಿರ್ಧರಿಸಿದೆ.

Bangalore, Nov 29: ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿನ ಅಭಿವೃದ್ಧಿಗೆ ಬಿಬಿಎಂಪಿ ಶ್ರಮಿಸುತ್ತಿದೆ. ಬೆಂಗಳೂರಿನ ಅಭಿವೃದ್ಧಿಗೆ ಅಗತ್ಯವಿರುವ ಹಣ ಹೊಂದಿಸಲು ಆದಾಯದ ಮೂಲ ಹುಡುಕುತ್ತಿರುವ ಬಿಬಿಎಂಪಿ, ‘ನಮ್ಮ ಮೆಟ್ರೊ’ದ ಸ್ಟೇಷನ್ , ಡಿಪೋ ಮತ್ತಿತರ ಆಸ್ತಿಗಳಿಗೆ ತೆರಿಗೆ ವಿಧಿಸಿ ವಸೂಲಿ ಮಾಡಲು ಮುಂದಾಗಿದೆ. ಇದರಿಂದ ಕೋಟ್ಯಂತರ ರೂ ಆದಾಯ ನಿರೀಕ್ಷಿಸಲಾಗಿದೆ.

BBMP Service Charge

ಬಿಬಿಎಂಪಿಯು 2023-24ನೇ ಸಾಲಿಗೆ ನಗರದ ಅಭಿವೃದ್ಧಿ ಮತ್ತು ಇತರ ವೆಚ್ಚಗಳನ್ನು ಪೂರೈಸಲು 11,163.97 ಕೋಟಿ ರೂ ಬಜೆಟ್ ಅನ್ನು ಹೊಂದಿದೆ. ಇದೀಗ ಬೆಂಗಳೂರಿನ ಸಾರಿಗೆಯ ಪ್ರಮುಖ ಭಾಗವಾಗಿರುವ ನಮ್ಮ ಮೆಟ್ರೋಗೆ ಒಪ್ಪಂದದ ಪ್ರಕಾರ ಆಸ್ತಿ ತೆರಿಗೆ ಬದಲಿಗೆ ಸೇವಾ ತೆರಿಗೆ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ.

ಈಗ ಹೆಚ್ಚುವರಿ ಆದಾಯ ಮಾರ್ಗಗಳನ್ನು ಸೃಷ್ಟಿಸುವ ಮೂಲಕ ಪಾಲಿಕೆಯ ವಾರ್ಷಿಕ ಆದಾಯವನ್ನು ಹೆಚ್ಚಿಸಲು ಬಿಬಿಎಂಪಿ ಹಲವಾರು ಹೊಸ ಕ್ರಮಗಳನ್ನು ಕೈಗೊಂಡಿದೆ.

ಇದನ್ನೂ ಓದಿ; ನ. 29 ರಂದು ಚಿನ್ನ & ಬೆಳ್ಳಿ ದರ ಎಷ್ಟಿದೆ ನೋಡಿ!

ನಮ್ಮ ಮೆಟ್ರೋದಿಂದ ಪಾಲಿಕೆಗೆ ವಾರ್ಷಿಕ ರೂ 2.14 ಕೋಟಿ ಆದಾಯ!

BMRCL ನಿರ್ವಹಿಸುತ್ತಿರುವ ನಮ್ಮ ಮೆಟ್ರೋದಿಂದ BBMPಗೆ ಇಲ್ಲಿಯವರೆಗೆ ಯಾವುದೇ ಆದಾಯವನ್ನು ಹೊಂದಿಲ್ಲ ಮತ್ತು BBMP ಮತ್ತು ನಮ್ಮ ಮೆಟ್ರೋ ನಡುವಿನ ಒಪ್ಪಂದದ ಪ್ರಕಾರ, ನಮ್ಮ ಮೆಟ್ರೋ ಸೇವಾ ಶುಲ್ಕವು ವಾರ್ಷಿಕವಾಗಿ 2.14 ಕೋಟಿ ರೂ.ಗಳನ್ನು BMRCL ಗೆ ಆಸ್ತಿ ತೆರಿಗೆಯ ಬದಲಾಗಿ ಸೇವಾ ಶುಲ್ಕವನ್ನು ಪಾವತಿಸಬೇಕು, ಮತ್ತು ಈ ಸೇವಾ ಶುಲ್ಕವು 9ನೇ ಡಿಸೆಂಬರ್ 2020 ರಿಂದ ಜಾರಿಗೆ ಬರುವಂತೆ ಪಾವತಿಸಬೇಕು.

ತೆರಿಗೆ ವಂಚನೆಗೆ ಕಡಿವಾಣ ಹಾಕಲು ಬಿಬಿಎಂಪಿ ಪ್ಲಾನ್!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆಯೇ ಮುಖ್ಯ ಆದಾಯವಾಗಿದ್ದು, ಆಸ್ತಿ ತೆರಿಗೆ ಪಾವತಿ ವಿಚಾರದಲ್ಲಿ ಬಿಬಿಎಂಪಿಗೆ ಸಾವಿರಾರು ಜನ ವಂಚಿಸುತ್ತಿದ್ದು, ಇದೀಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಕುರಿತು ಮಾಹಿತಿಯನ್ನು ಪಡೆದಿದ್ದು ಎಲ್ಲಆಸ್ತಿಗಳಿಂದ ತೆರಿಗೆ ವಸೂಲಾತಿಗೆ ಸೂಚಿಸಿದ್ದಾರೆ,

ಪಾಲಿಕೆಯ ಕಂದಾಯ ಇಲಾಖೆ ಆಸ್ತಿಗಳ ಡಿಜಿಟಲೀಕರಣ ಪ್ರಕ್ರಿಯೆ ಮತ್ತು ಹಲವಾರು ಆಸ್ತಿಗಳ ಬೌದ್ಧಿಕ ಪರಿಶೀಲನೆ, ಪ್ರತಿ ಅಧಿಕಾರಿ ದಿನಕ್ಕೆ ಕನಿಷ್ಠ 25 ಆಸ್ತಿಗಳನ್ನು ಪರಿಶೀಲಿಸುವುದು, ಕಡಿಮೆ ವಿಸ್ತೀರ್ಣ ಘೋಷಿಸಿಕೊಂಡು ತೆರಿಗೆ ವಂಚಿಸುತ್ತಿರುವವರನ್ನು ಪತ್ತೆ ಮಾಡಲು, ಹೀಗೆ ಹಲವಾರು ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಆಸ್ತಿ ತೆರಿಗೆ ವಂಚನೆ ತಡೆಯಲು ಬಿಬಿಎಂಪಿ ಈಗಾಗಲೇ ಹಲವು ಯೋಜನೆಗಳನ್ನು ರೂಪಿಸಿದೆ.

ಇದನ್ನೂ ಓದಿ;  ಬೆಂಗಳೂರು ಉಪನಗರ ರೈಲು ವಿಸ್ತರಣೆ ಯೋಜನೆಗೆ ನೈಋತ್ಯ ರೈಲ್ವೆಯಿಂದ ತಡೆ

ಆಸ್ತಿ ತೆರಿಗೆ ಬದಲಿಗೆ ಸೇವಾ ಶುಲ್ಕವನ್ನು 9ನೇ ಡಿಸೆಂಬರ್ 2020 ರಿಂದ ಜಾರಿಗೆ ಬರುವಂತೆ, ಪಾವತಿಸಬೇಕಾಗುತ್ತದೆ! 

2019ರಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಆದೇಶದ ಮೇರೆಗೆ ನಡೆದ 35ನೇ ಉನ್ನತ ಮಟ್ಟದ ಸಭೆಯಲ್ಲಿ, ಬಿಎಂಆರ್ ಸಿಎಲ್ ಪಾಲಿಕೆಗೆ ಸಂಬಂಧಿಸಿದ ಆಸ್ತಿ ತೆರಿಗೆಗೆ ಬದಲಾಗಿ ಸೇವಾ ಶುಲ್ಕ ಪಾವತಿ ಕುರಿತು ಒಪ್ಪಂದ ಮಾಡಲಾಗಿತ್ತು. ಈ ಒಪ್ಪಂದದ ಮೇರೆಗೆ, 2020ರಲ್ಲಿ ಬಿಎಂಆರ್ ಸಿಎಲ್ ನಿಗೆ ಸೇವಾ ಶುಲ್ಕ ಪಾವತಿ ಮಾಡಲು ಅಂಗೀಕರಿಸಲಾಗಿತ್ತು.

2022ರ ಫೆಬ್ರವರಿ 16ರಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಬಿಎಂಆರ್‌ಸಿಎಲ್‌ನಿಂದ ಪಾಲಿಕೆಗೆ ಆಸ್ತಿ ಪಾವತಿ ಮತ್ತು ಸೇವಾ ಶುಲ್ಕ ಪಾವತಿಗೆ ಸಂಬಂಧಿಸಿದ ನಿಯಮಗಳ ಅನುಷ್ಠಾನದ ವಿಧಾನಗಳನ್ನು ಪರಿಶೀಲಿಸಲು ನಿರ್ಧರಿಸಲಾಯಿತು. ಮೆಟ್ರೋ ರೈಲು ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಆಸ್ತಿಗಳ ಮೇಲಿನ ಆಸ್ತಿ ತೆರಿಗೆಯ ಶೇಕಡಾವಾರು ಸೇವಾ ಶುಲ್ಕವನ್ನು ಮತ್ತು ಕೆಲವು ಸೇವಾ ತೆರಿಗೆಗಳನ್ನು ಪರಿಷ್ಕರಿಸಲು ನಿರ್ಧರಿಸಲಾಯಿತು.

ಬಳಿಕ, ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರು ಸರಕಾರಕ್ಕೆ ಪತ್ರ ಬರೆದು ಆಸ್ತಿ ತೆರಿಗೆ ಬದಲಾಗಿ ಸೇವಾ ಶುಲ್ಕವನ್ನು ಪಾವತಿಸುವಂತೆ ಸೂಕ್ತ ಸರಕಾರಿ ಆದೇಶ ಹೊರಡಿಸುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ 2023ರ ಆ. 19ರಂದು ಆದೇಶ ಹೊರಡಿಸಿದೆ. ಈ ಒಡಂಬಡಿಕೆಯಂತೆ ಮೆಟ್ರೋ ನಿಗಮವು ವಾಣಿಜ್ಯ ಸಂಚಾರ ಆರಂಭಿಸಿದ ಬಳಿಕ ಸೇವಾ ಶುಲ್ಕ ಪಾವತಿಸಬೇಕಿದೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *