Passenger Attack On BMTC Conductor: ಬಿಎಂಟಿಸಿ ಬಸ್ ನಲ್ಲಿ ಉಚಿತ ಟಿಕೆಟ್‌ ನೀಡುವ ವಿಚಾರಕ್ಕೆ ಜಗಳ! ಕಂಡಕ್ಟರ್ ಮುಖವನ್ನು ಪರಿಚಿದ ಮಹಿಳೆ

Female Passenger Attack On BMTC Conductor: ಬೆಂಗಳೂರಿನ ಬಿಎಂಟಿಸಿ ಸಾರಿಗೆಯಲ್ಲಿ ಉಚಿತ ಟಿಕೆಟ್ ವಿಚಾರಕ್ಕೆ ಕುರಿತು ಮಹಿಳಾ ಪ್ರಯಾಣಿಕರೊಬ್ಬರು ಹಾಗೂ ಕಂಡಕ್ಟರ್ ನಡುವೆ ಜಗಳ ಸಂಭವಿಸಿದ್ದು ಈ ಸಂದರ್ಭದಲ್ಲಿ ಮಹಿಳಾ ಪ್ರಯಾಣಕಿ ಕಂಡಕ್ಟರ್ ಮುಖವನ್ನು ಪರಿಚಿದ್ದಾರೆ ಜಗಳವು ಇಬ್ಬರೂ ಬಡಿದಾಡುವ ಮಟ್ಟಕ್ಕೆ ತಲುಪಿದ ಕಾರಣ ಈ ಘಟನೆ ಸಂಭವಿಸಿದ್ದು ಮಹಿಳಾ ಪ್ರಯಾಣಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ.

Passenger Attack On BMTC Conductor

Bangalore: ಬಿಎಂಟಿಸಿ ಬಸ್ ನಲ್ಲಿ ಮಹಿಳೆ ಒಬ್ಬರು ಮಹಿಳಾ ಕಂಡಕ್ಟರ್ ಬಳಿ ಉಚಿತ ಪ್ರಯಾಣದ ಟಿಕೆಟ್ ಖರೀದಿಯ ಕುರಿತು ಜಗಳವಾಡಿದ್ದಾರೆ ಹಾಗೂ ಜಗಳವು ಉತ್ತುಂಗಕ್ಕೇರಿದ್ದು ಇಬ್ಬರ ನಡುವೆ ಹೊಡೆದಾಟ ನಡೆದಿದೆ ಹಾಗೂ ಈ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕೆ ಮೋನಿಷಾ ಎಂಬಾಕೆ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದು ಮುಖಕ್ಕೆ ಪರಚಿ ಗಾಯವನ್ನು ಮಾಡಿರುವ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ, ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಪೊಲೀಸರು ಈಗಾಗಲೇ ಮೋನಿಷಾ ಎಂಬ ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರದಿಂದ 2023 ರಲ್ಲಿ ಮಹಿಳಾ ಸಬಲೀಕರಣದ ಗುರಿಯನ್ನು ಆಧರಿಸಿ ಶಕ್ತಿ ಯೋಜನೆಯ ಅಡಿಯಲ್ಲಿ ರಾಜ್ಯದೆಲ್ಲಡೆ ಹಲವರು ಕರ್ನಾಟಕದ ಸಾರಿಗೆಗಳಿಗೆ ಅನ್ವಯವಾಗುವಂತೆ ಮಹಿಳೆಯರಿಗೆ ಉಚಿತ ಸಾರಿಗೆ ಸೇವೆಯನ್ನು ಸರ್ಕಾರ ಪ್ರಾರಂಭಿಸಿತು ಇದಾದ ಬಳಿಕ ರಾಜ್ಯದಲ್ಲಿ ಮಹಿಳೆಯರ ಸಂಚಾರ ಪ್ರಮಾಣ ಹೆಚ್ಚಾಗಿದ್ದು ಹಲವಾರು ಅಹಿತಕರ ಘಟನೆಗಳು ಸಹ ಬೆಳಗಿಗೆ ಬಂದಿದೆ ಇದೇ ರೀತಿ ಘಟನೆ ಎಂದು ಭಾನುವಾರ ಬೆಳಗ್ಗೆ ಬೆಂಗಳೂರಿನಲ್ಲಿ ಸಂಭವಿಸಿದೆ.

ಇದನ್ನೂ ಓದಿ: ಶಿವರಾಮ ಕಾರಂತ ಬಡಾವಣೆಯ 10,000 ನಿವೇಶನಗಳನ್ನು ಮಾರಾಟ ಮಾಡಲು ಬಿಡಿಎ ಸಿದ್ಧತೆ; ದರ ಎಷ್ಟಿದೆ? ಅರ್ಜಿ ಆಹ್ವಾನ ಯಾವಾಗ?

ಚಿಕ್ಕ ಬಾಣಾವರ ನಿವಾಸಿಯಾದ ಮೋನಿಷಾ ಬೆಳಿಗ್ಗೆ 8ನೇ ಮೈಲಿಯಿಂದ ದಾಸರಳ್ಳಿಗೆ ಹೋಗಲು ಮೆಜೆಸ್ಟಿಕ್ ನೆಲಮಂಗಲ ಮಾರ್ಗದ ಬಿಎಂಟಿಸಿ ಬಸ್ ಹತ್ತಿ ಪ್ರಯಾಣವನ್ನು ಬಳಸಿದ್ದರು ಹಾಗೂ ಈ ಬಸ್ನ ಕಂಡಕ್ಟರ್ ಸುಕನ್ಯಾ ಅವರು ಮೋನಿಷಾ ರವರ ಬಳಿ ಆಧಾರ್ ಕಾರ್ಡ್ ತೋರಿಸಿ ಎಂದು ಕೇಳಿದ್ದಾರೆ, ಮೋನಿಷಾ ತಡ ಮಾಡಿದ್ದರು ಇದಕ್ಕೆ ಕೋಪಗೊಂಡ ಸುಕನ್ಯಾ, ಬೇಗನೆ ಆಧಾರ್ ಕಾರ್ಡ್ ತೋರಿಸುವಂತೆ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ ಇದರಿಂದ ಕೆರಳಿದ ಮೋನಿಷಾ ಸುಕನ್ಯಾ ವಿರುದ್ಧ ತಿರುಗಿ ಬಿದ್ದಿದ್ದಾರೆ ಹೀಗೆ ಮುಂದುವರೆದ ಭಾಗವಾದ ವಾಗ್ವಾದ ಜಗಳಕ್ಕೆ ಕಾರಣವಾಗಿದೆ, ಈ ಸಂದರ್ಭದಲ್ಲಿ ಮೋನಿಷಾ ರವರು ಸುಕನ್ಯಾರ ಮುಖವನ್ನು ಉಗುರಿನಿಂದ ಪರಚಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯ ಯೋಜನೆ ಶೇ. 82ರಷ್ಟು ಫಲಾನುಭವಿಗಳು ನಗದು ಬದಲು ಅಕ್ಕಿಗೆ ಬೇಡಿಕೆ

ಈ ಸಂದರ್ಭದಲ್ಲಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಂತಹ ಪ್ರಾಣಿಕರು ಸುಕನ್ಯಾರು ನೆರವಿಗೆ ನಿಂತಿದ್ದಾರೆ ಹಾಗೂ ಮೋನಿಷರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಈ ಸಂದರ್ಭದಲ್ಲಿ ಮೋನಿಷಾ ರವರು ಪ್ರಯಾಣಿಕರ ಜೊತೆಗೆ ಮಾತಿನ ಚಕಮುಕಿಯನ್ನು ಮುಂದುವರಿಸಿದ್ದಾರೆ ನಿರ್ವಾಹಕಿಯೆ ಮೊದಲು ನನಗೆ ಹೊಡೆದಿದ್ದಾರೆ ಹಾಗೂ ಜಗಳದ ವೇಳೆಯಲ್ಲಿ ಆಕಸ್ಮಿಕವಾಗಿ ಅವರ ಮುಖಕ್ಕೆ ಉಗುರು ತಗುಲಿದೆ ಎಂದಿದ್ದಾರೆ.

ಸುಕನ್ಯಾ ಮತ್ತು ಮೋನಿಷಾ ರವರ ಜಗಳವನ್ನು ಕಂಡು ಬಸ್ ಚಾಲಕ ಮಧ್ಯದಲ್ಲಿಯೇ ವಾಹನವನ್ನು ನಿಲ್ಲಿಸಿದ್ದಾರೆ ಬಳಿಕ ಸುಕನ್ಯಾ ರವರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು ಮೋನಿಷಾ ರವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಹಾಗೂ ಮೋನಿಷಾ ರವರು ಮತ್ತಿಗೆರೆಯ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *