Anna Bhagya Scheme: ಅನ್ನಭಾಗ್ಯ ಯೋಜನೆ ಶೇ. 82ರಷ್ಟು ಫಲಾನುಭವಿಗಳು ನಗದು ಬದಲು ಅಕ್ಕಿಗೆ ಬೇಡಿಕೆ

Anna Bhagya Scheme: ಈಗಾಗಲೇ ಜುಲೈ ತಿಂಗಳಿನಿಂದ ಸರ್ಕಾರ ಅನ್ನಭಾಗ್ಯ ಆರಂಭಿಸಿದ್ದು, ಅನ್ನಭಾಗ್ಯದಡಿ ಐದು ಕೆಜಿ ಅಕ್ಕಿ ಬದಲು ನಗದು ನೀಡಲಾಗುತ್ತಿದೆ, ಆದರೆ ಇದೀಗ ಫಲಾನುಭವಿಗಳು ನಗದು ಬದಲು ಅಕ್ಕಿ ಬೇಡಿಕೆ.

ಪ್ರತಿ ಕೆಜಿಗೆ 35 ರೂ.ನಂತೆ 170 ನೇರ ನಗದು ವರ್ಗಾವಣೆಯನ್ನು ನೀಡಲಾಗುತ್ತಿದೆ. ಈ ನಡುವೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಫಲಾನುಭವಿಗಳ ಆಯ್ಕೆ ಕುರಿತು ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಶೇ.80ರಷ್ಟು ಫಲಾನುಭವಿಗಳು ನಮಗೆ ನಗದು ಬದಲು ಅಕ್ಕಿ ನೀಡುವುದು ಸೂಕ್ತ ಎಂದು ತಮ್ಮ ಬೇಡಿಕೆಯನ್ನು ವ್ಯಕ್ತಪಡಿಸಿದ್ದಾರೆ.

Anna Bhagya Scheme

ಈಗಾಗಲೇ ಪ್ರತಿ ತಾಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ನಿರೀಕ್ಷಕರು ಗ್ರಾಮ ಲೆಕ್ಕಿಗರು ಹಾಗೂ ಪಡಿತರ ಚೀಟಿದಾರರಿಂದ ಅಭಿಪ್ರಾಯ ಸಂಗ್ರಹಿಸಿ ಶೇ.80 ರಿಂದ 82 ರಷ್ಟು ಗ್ರಾಹಕರು ಅಕ್ಕಿಯ ಬದಲಿಗೆ ನಗದು ನೀಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ವರದಿಯನ್ನು ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ; Amrit Bharat: ರಾಜ್ಯಕ್ಕೆ ಮೊದಲ ಅಮೃತ್ ಭಾರತ್ ರೈಲು: ಮಾಲ್ಡಾ -ಬೆಂಗಳೂರು ನಡುವೆ ಜ. 1 ರಿಂದ ಸಂಚಾರ ಆರಂಭ

ಬಡಕುಟುಂಬಗಳ ಹಸಿವು ನೀಗುವ ಜೋತೆಗೆ ಸರಕಾರದ ಮೂಲ ಉದ್ದೇಶವೂ ಈಡೇರುವ ನಿಟ್ಟಿನಲ್ಲಿ ಜನತೆಗೆ ನಗದಿನ ಬದಲು ಅಕ್ಕಿ ನೀಡುವುದು ಸೂಕ್ತ ಎಂಬುದು ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ಇಡೀ ತಿಂಗಳು ಮನೆಯ ಹಸಿವನ್ನು ನೀಗಿಸಲು ಸಹಾಯ ಮಾಡುತ್ತದೆ ಮತ್ತು ಪ್ರಸ್ತುತ ಹಣವನ್ನು ಬೇರೆ ಯಾವುದೇ ಉದ್ದೇಶಗಳಿಗೆ ಬಳಸುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದ್ದು, ಈ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ ಎಂದು ವರದಿ ಮೂಲಗಳಿಂದ ತಿಳಿದು ಬಂದಿದೆ. ಮತ್ತೊಂದೆಡೆ ಮಳೆ ಕೊರತೆಯಿಂದ ಭತ್ತದ ಉತ್ಪಾದನೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಅಧಿಕಾರಿಗಳು ತಾವೇ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ ವರದಿಯನ್ನು ಬಿಡುಗಡೆ ಮಾಡಿಲ್ಲ.

ಇದನ್ನೂ ಓದಿ: ಬಿಎಂಟಿಸಿ ಪ್ರಯಾಣಿಕರಿಗೆ ಸಂತಸದ ಸುದ್ದಿ 9 ಪ್ರಮುಖ ಕಾರಿಡಾರ್ ಮಾರ್ಗಗಳಲ್ಲಿ ಬರಲಿದೆ ಪ್ರತ್ಯೇಕ ಬಿಎಂಟಿಸಿ ಬಸ್ ಪಥ!

ಕೆಲ ಜಿಲ್ಲೆಗಳಲ್ಲಿ ಮಾತ್ರ ಅಕ್ಕಿ ಬೇಕಾಗಿಲ್ಲ, ನಗದು ಬೇಕಾಗಿಲ್ಲ ಬದಲಾಗಿ 2013-17ನೇ ಸಾಲಿನಲ್ಲಿ ಸಿಎಂ ಸಿದ್ದರಾಮಯ್ಯನವರ ಮೊದಲ ಆಡಳಿತದಲ್ಲಿ ನೀಡುತ್ತಿದ್ದ ಅಕ್ಕಿ ಜತೆಗೆ ಅಕ್ಕಿ, ಬೇಳೆ ಸಕ್ಕರೆ ಅಡುಗೆ ಎಣ್ಣೆ ನೀಡಬೇಕು ಎಂದು ಪಡಿತರದಾರರು ಕೇಳಿಕೊಂಡಿದ್ದಾರೆ. ಇದರಿಂದ ಕುಟುಂಬಗಳಿಗೆ ಸಹಾಯವಾಗಲಿದ್ದು, ಬೇರೆ ಉದ್ದೇಶಗಳಿಗೆ ಹಣ ಬಳಕೆಯಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ

ಇನ್ನು ಕರಾವಳಿ ಭಾಗದಲ್ಲಿ ಅದರಲ್ಲೂ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಕುಚ್ಚಲಕ್ಕಿ ಸೇವಿಸುವುದರಿಂದ ಅಲ್ಲಿನ ಜನರು ಕುಚ್ಚಲಕ್ಕಿ ಸೇವಿಸುವುದರಿಂದ ಇದೇ ಪದ್ಧತಿಯನ್ನು ಮುಂದುವರಿಸುವುದು ಸೂಕ್ತ ಎಂದು ಪಡಿತರ ಚೀಟಿದಾರರು ತಿಳಿಸಿದ್ದು, ಈ ರಾಜ್ಯ ಸರ್ಕಾರದ ಯೋಜನೆ ಬಗ್ಗೆ ಜನರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.

Latest Trending

Follow us on Instagram Bangalore Today

Bhagirathi H P
Bhagirathi H P
Articles: 45

Leave a Reply

Your email address will not be published. Required fields are marked *