Amrit Bharat: ರಾಜ್ಯಕ್ಕೆ ಮೊದಲ ಅಮೃತ್ ಭಾರತ್ ರೈಲು: ಮಾಲ್ಡಾ -ಬೆಂಗಳೂರು ನಡುವೆ ಜ. 1 ರಿಂದ ಸಂಚಾರ ಆರಂಭ

Amrit Bharat Express Malda – Bangalore: 2023ರ ಅಂತ್ಯದ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಡಿ. 30 ರಂದು ರಾಜ್ಯದ ಮೊದಲ ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದು, ಇದು ನಗರದ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಆಗಮಿಸಲಿದ್ದು, ಜನವರಿ 1, 2024 ರಿಂದ ವಾಣಿಜ್ಯ ಸಂಚಾರ ಆರಂಭಿಸಲಿದೆ.

Amrit Bharat Express Malda - Bangalore

ಬೆಂಗಳೂರು, ಡಿ.29: ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಒಟ್ಟು ಎರಡು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಮೊದಲ ರೈಲು ಆನಂದ್ ವಿಹಾರ್ (ದೆಹಲಿ) ಮತ್ತು ದರ್ಬಾಂಗಾ (ಬಿಹಾರ) ನಡುವೆ ಸಂಚರಿಸಲಿದ್ದು, ಅದು ಅಯೋಧ್ಯೆಯ ಮೂಲಕ ಹಾದುಹೋಗಲಿದೆ, ಹಾಗೂ ಎರಡನೇ ರೈಲು ಮಾಲ್ಡಾ ಮತ್ತು ಬೆಂಗಳೂರು ನಡುವೆ ಸಂಚರಿಸಲಿದೆ.

ಇದನ್ನೂ ಓದಿ: ಬಿಎಂಟಿಸಿ ಪ್ರಯಾಣಿಕರಿಗೆ ಸಂತಸದ ಸುದ್ದಿ 9 ಪ್ರಮುಖ ಕಾರಿಡಾರ್ ಮಾರ್ಗಗಳಲ್ಲಿ ಬರಲಿದೆ ಪ್ರತ್ಯೇಕ ಬಿಎಂಟಿಸಿ ಬಸ್ ಪಥ!

ಮಾಲ್ಡಾ-ಬೆಂಗಳೂರು ನಡುವೆ ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ!

ಈ ಅಮೃತ್ ಭಾರತ್ ರೈಲು ಮಾಲ್ಡಾ ಬೆಂಗಳೂರು ನಡುವೆ ಸೂಪರ್ ಫಾಸ್ಟ್ ಪ್ಯಾಸೆಂಜರ್ ರೈಲು ಸೇವೆಯನ್ನು ಒದಗಿಸುವ ಮೂಲಕ ಕರ್ನಾಟಕ ಮತ್ತು ಪಶ್ಚಿಮ ಬಂಗಾಳದ ನಡುವೆ ಸುಸಜ್ಜಿತ ರೈಲು ಸಂಪರ್ಕವನ್ನು ಒದಗಿಸುತ್ತದೆ.

ಅಮೃತ್ ಭಾರತ್ ರೈಲು ಗಂಟೆಗೆ ಗರಿಷ್ಠ 130 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ ಮತ್ತು ಪಶ್ಚಿಮ ಬಂಗಾಳದ ಮಾಲ್ಡಾದಿಂದ ಹೊರಟು ಖರಗಪುರ್‌, ಬಾಲಾಸೋರ್‌, ಭುವನೇಶ್ವರ, ಪುರಿ, ಸೀತಾಕುಳಂ, ವಿಜಯನಗರಂ, ವಿಶಾಖ ಪಟ್ಟಣಂ, ವಿಜಯವಾಡ, ನೆಲ್ಲೂರು, ಗುಡೂರು, ರೇಣಿಗುಂಟ, ಸಾತಪಾಡಿ, ಜೋಲಾರಪೇಟೆ, ಬಂಗಾರಪೇಟೆ ಮೂಲಕ SMVT ನಿಲ್ದಾಣವನ್ನು ತಲುಪುತ್ತದೆ.

ಈ ರೈಲು ಮುಖ್ಯವಾಗಿ ಪುಶ್-ಪುಲ್ ತಂತ್ರಜ್ಞಾನವನ್ನು ಆಧರಿಸಿದೆ ಮತ್ತು LHB ಮಾದರಿಯ ಸ್ಲೀಪರ್‌ಗಳನ್ನು ಒಳಗೊಂಡಿದೆ. ಇದಲ್ಲದೆ, ಇದು ಎರಡನೇ ದರ್ಜೆಯ ಸ್ಲೀಪರ್ ಕೋಚ್ ಮತ್ತು ಕಾಯ್ದಿರಿಸಿದ ಕೋಚ್‌ಗಳು ಸೇರಿದಂತೆ ಒಟ್ಟು 22 ರೈಲು ಕೋಚ್‌ಗಳನ್ನು ಒಳಗೊಂಡಿದೆ.

ಇದನ್ನೂ ಓದಿ:  ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಭಾರತದ ಎತ್ತರದ ವೀಕ್ಷಣಾ ಗೋಪುರ!

ಅಮೃತ್ ಭಾರತ್ ರೈಲಿನ ಟಾಪ್ 5 ಕುತೂಹಲಕಾರಿ ಸಂಗತಿಗಳು!

1). ಅಮೃತ್ ಭಾರತ್ ಎಕ್ಸ್‌ಪ್ರೆಸ್ ಪುಶ್-ಫುಲ್ ತಂತ್ರಜ್ಞಾನವನ್ನು ಆಧರಿಸಿದ ಭಾರತದ ಮೊದಲ ಸೂಪರ್ ಫಾಸ್ಟ್ ಪ್ಯಾಸೆಂಜರ್ ರೈಲು.

2) ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಹೊಸ ತಂತ್ರಜ್ಞಾನದೊಂದಿಗೆ ಎರಡು-ಬದಿಯ ಆಪರೇಟಬಲ್ ಕಾನ್ಫಿಗರೇಶನ್ ಅನ್ನು ಹೊಂದಿದ್ದು ಅದು ಸುರಕ್ಷಿತವಾಗಿದೆ ಮತ್ತು ಲೊಕೊಮೊಟಿವ್ ಅನ್ನು ತಿರುಗಿಸುವ ಹೊರೆಯನ್ನು ಕಡಿಮೆ ಮಾಡುತ್ತದೆ.

3) ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಎಸಿ ಮತ್ತು ನಾನ್ ಎಸಿ ಕೋಚ್‌ಗಳನ್ನು ಹೊಂದಿದೆ.

4) ಈ ರೈಲು ಪ್ರಯಾಣಿಕರಿಗೆ ಆರಾಮದಾಯಕ ಆಸನಗಳು, ಲಗೇಜ್‌ಗಳಿಗೆ ಸ್ಥಳಾವಕಾಶ ಮತ್ತು ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳಂತಹ ಸುಧಾರಿತ ಸೌಲಭ್ಯಗಳನ್ನು ನೀಡುತ್ತದೆ.

5) ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಿಸಿಟಿವಿಗಳು, ಎಲ್‌ಇಡಿ ಲೈಟ್ಗಳು ಮತ್ತು ಸಾರ್ವಜನಿಕ ಮಾಹಿತಿ ವ್ಯವಸ್ಥೆ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗಿದೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *