Bangalore Peenya Flyover: ಬೆಂಗಳೂರಿನ ಪೀಣ್ಯ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿಷೇಧ; ಕಾರಣ ಇಲ್ಲಿದೆ

Bangalore Peenya Flyover Construction: ಬೆಂಗಳೂರಿನ ಪೀಣ್ಯ ಮೇಲ್ಸೇತುವೆ ತುರ್ತು ದುರಸ್ತಿ ಕಾಮಗಾರಿ ಹಿನ್ನೆಲೆ ಪೀಣ್ಯ ಫ್ಲೇವರ್ ಮೇಲೆ ಮೂರು ದಿನಗಳವರೆಗೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ, ಹಾಗಾಗಿ ಈ ವೇಳೆಯಲ್ಲಿ ವಾಹನ ಸವಾರರು ಬದಲಿ ಮಾರ್ಗವನ್ನು ಅನುಸರಿಸಬೇಕಿದೆ ಎಂದು ಬೆಂಗಳೂರು ನಗರ ಪೊಲೀಸರು ತಿಳಿಸಿದ್ದಾರೆ.

Bangalore Peenya Flyover Construction

Bangalore; ಬೆಂಗಳೂರಿನ ಪೀಣ್ಯ ಮೇಲ್ಸೇತುವೆಯ ದುರಸ್ತಿ ಕಾಮಗಾರಿಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಗರ ಸಂಚಾರ ಪೊಲೀಸರ ಬಳಿ ವಾಹನ ಸಂಚಾರ ನಿರ್ಬಂಧಿಸುವಂತೆ ಕೋರಿದ್ದರು ಹಾಗಾಗಿ ಜನವರಿ 16 ರಿಂದ ರಾತ್ರಿ 11:00 ಯಿಂದ 19ರ ಬೆಳಿಗ್ಗೆ 11 ಗಂಟೆವರೆಗೆ ಪೀಣ್ಯ ಮೇಲ್ ಸೇತುವೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪೊಲೀಸರು ಈಗಾಗಲೇ ತಿಳಿಸಿದ್ದಾರೆ.

ಇದನ್ನೂ ಓದಿ: ಜ 18 ರಿಂದ ಲಾಲ್​ಬಾಗ್ ಫ್ಲವರ್ ಶೋ; ಶಾಲಾ ಮಕ್ಕಳಿಗೆ ಉಚಿತ ಪ್ರವೇಶ, ಬಸವಣ್ಣನವರ ಅನುಭವ‌ಮಂಟಪ ಈ ಬಾರಿಯ ಮುಖ್ಯ ಆಕರ್ಷಣೆ

ಪರ್ಯಾಯ ಮಾರ್ಗಗಳು ಇಂತಿವೆ!

ತುಮಕೂರು ಮುಖ್ಯ ರಸ್ತೆಯ ಪೀಣ್ಯ ಮೇಲ್ಸಿದ್ವಿಯ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈಗಾಗಲೇ ಪರ್ಯಾಯ ಮಾರ್ಗಗಳನ್ನು ವಾಹನ ಚಾಲಕರಿಗೆ ಬಳಸುವಂತೆ ತಿಳಿಸಲಾಗಿದ್ದು ಈ ಕೆಳಗಿನಂತಿವೆ.

ಮೇಲ್ಸೇತುವೆ ಮುಚ್ಚಿರುವ ಹಿನ್ನೆಲೆಯಲ್ಲಿ ನೆಲಮಂಗಲ ಕಡೆಯಿಂದ ನಗರಕ್ಕೆ ಬರುವ ವಾಹನಗಳು: ರಾಷ್ಟ್ರೀಯ ಹೆದ್ದಾರಿ-4 ರಸ್ತೆ ಹಾಗೂ ಸಾಯಿರ್ಸ್ ರಸ್ತೆ ಮೂಲಕ ಕೆನ್ನಮೆಟಲ್ ವಿದ್ಯಾ ಬಳಿ ಸಾಗಿ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್ ಆರ್ ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದು.

ಇದನ್ನೂ ಓದಿ: ಶಿವರಾಮ ಕಾರಂತ ಬಡಾವಣೆಯ 10,000 ನಿವೇಶನಗಳನ್ನು ಮಾರಾಟ ಮಾಡಲು ಬಿಡಿಎ ಸಿದ್ಧತೆ; ದರ ಎಷ್ಟಿದೆ? ಅರ್ಜಿ ಆಹ್ವಾನ ಯಾವಾಗ?

ಸಿಎಂಟಿಐ ಜಂಕ್ಷನ್‌ನಿಂದ ನೆಲಮಂಗಲ ಕಡೆಗೆ ಹೋಗುವ ವಾಹನಗಳು ಪಾರ್ಲೆ-ಜಿ ಟೋಲ್‌ಗೆ ತೆರಳಲು ಎನ್‌ಎಚ್‌ ರಸ್ತೆಯ ಮೇಲ್ಸೇತುವೆ ಮತ್ತು ಸೇವಿಸ್‌ ರಸ್ತೆಯಲ್ಲಿ ಎಸ್‌ಆರ್‌ಎಸ್‌ ಜಂಕ್ಷನ್‌, ಪೀಣ್ಯ ಪೊಲೀಸ್‌ ಠಾಣೆ ಜಂಕ್ಷನ್‌, ಜಾಲಹಳ್ಳಿ ಕ್ರಾಸ್‌, 8ನೇ ಮೈಲ್‌ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *