Get flat 10% off on Wonderla Entry Tickets | Use coupon code "BTWONDER".
Bangalore Peenya Flyover: ಬೆಂಗಳೂರಿನ ಪೀಣ್ಯ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿಷೇಧ; ಕಾರಣ ಇಲ್ಲಿದೆ
Bangalore Peenya Flyover Construction: ಬೆಂಗಳೂರಿನ ಪೀಣ್ಯ ಮೇಲ್ಸೇತುವೆ ತುರ್ತು ದುರಸ್ತಿ ಕಾಮಗಾರಿ ಹಿನ್ನೆಲೆ ಪೀಣ್ಯ ಫ್ಲೇವರ್ ಮೇಲೆ ಮೂರು ದಿನಗಳವರೆಗೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ, ಹಾಗಾಗಿ ಈ ವೇಳೆಯಲ್ಲಿ ವಾಹನ ಸವಾರರು ಬದಲಿ ಮಾರ್ಗವನ್ನು ಅನುಸರಿಸಬೇಕಿದೆ ಎಂದು ಬೆಂಗಳೂರು ನಗರ ಪೊಲೀಸರು ತಿಳಿಸಿದ್ದಾರೆ.
Bangalore; ಬೆಂಗಳೂರಿನ ಪೀಣ್ಯ ಮೇಲ್ಸೇತುವೆಯ ದುರಸ್ತಿ ಕಾಮಗಾರಿಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಗರ ಸಂಚಾರ ಪೊಲೀಸರ ಬಳಿ ವಾಹನ ಸಂಚಾರ ನಿರ್ಬಂಧಿಸುವಂತೆ ಕೋರಿದ್ದರು ಹಾಗಾಗಿ ಜನವರಿ 16 ರಿಂದ ರಾತ್ರಿ 11:00 ಯಿಂದ 19ರ ಬೆಳಿಗ್ಗೆ 11 ಗಂಟೆವರೆಗೆ ಪೀಣ್ಯ ಮೇಲ್ ಸೇತುವೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪೊಲೀಸರು ಈಗಾಗಲೇ ತಿಳಿಸಿದ್ದಾರೆ.
ಇದನ್ನೂ ಓದಿ: ಜ 18 ರಿಂದ ಲಾಲ್ಬಾಗ್ ಫ್ಲವರ್ ಶೋ; ಶಾಲಾ ಮಕ್ಕಳಿಗೆ ಉಚಿತ ಪ್ರವೇಶ, ಬಸವಣ್ಣನವರ ಅನುಭವಮಂಟಪ ಈ ಬಾರಿಯ ಮುಖ್ಯ ಆಕರ್ಷಣೆ
ಪರ್ಯಾಯ ಮಾರ್ಗಗಳು ಇಂತಿವೆ!
ತುಮಕೂರು ಮುಖ್ಯ ರಸ್ತೆಯ ಪೀಣ್ಯ ಮೇಲ್ಸಿದ್ವಿಯ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈಗಾಗಲೇ ಪರ್ಯಾಯ ಮಾರ್ಗಗಳನ್ನು ವಾಹನ ಚಾಲಕರಿಗೆ ಬಳಸುವಂತೆ ತಿಳಿಸಲಾಗಿದ್ದು ಈ ಕೆಳಗಿನಂತಿವೆ.
ಮೇಲ್ಸೇತುವೆ ಮುಚ್ಚಿರುವ ಹಿನ್ನೆಲೆಯಲ್ಲಿ ನೆಲಮಂಗಲ ಕಡೆಯಿಂದ ನಗರಕ್ಕೆ ಬರುವ ವಾಹನಗಳು: ರಾಷ್ಟ್ರೀಯ ಹೆದ್ದಾರಿ-4 ರಸ್ತೆ ಹಾಗೂ ಸಾಯಿರ್ಸ್ ರಸ್ತೆ ಮೂಲಕ ಕೆನ್ನಮೆಟಲ್ ವಿದ್ಯಾ ಬಳಿ ಸಾಗಿ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್ ಆರ್ ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದು.
ಇದನ್ನೂ ಓದಿ: ಶಿವರಾಮ ಕಾರಂತ ಬಡಾವಣೆಯ 10,000 ನಿವೇಶನಗಳನ್ನು ಮಾರಾಟ ಮಾಡಲು ಬಿಡಿಎ ಸಿದ್ಧತೆ; ದರ ಎಷ್ಟಿದೆ? ಅರ್ಜಿ ಆಹ್ವಾನ ಯಾವಾಗ?
ಸಿಎಂಟಿಐ ಜಂಕ್ಷನ್ನಿಂದ ನೆಲಮಂಗಲ ಕಡೆಗೆ ಹೋಗುವ ವಾಹನಗಳು ಪಾರ್ಲೆ-ಜಿ ಟೋಲ್ಗೆ ತೆರಳಲು ಎನ್ಎಚ್ ರಸ್ತೆಯ ಮೇಲ್ಸೇತುವೆ ಮತ್ತು ಸೇವಿಸ್ ರಸ್ತೆಯಲ್ಲಿ ಎಸ್ಆರ್ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಜಾಲಹಳ್ಳಿ ಕ್ರಾಸ್, 8ನೇ ಮೈಲ್ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Latest Trending
- ಅನ್ನಭಾಗ್ಯ ಯೋಜನೆ ಶೇ. 82ರಷ್ಟು ಫಲಾನುಭವಿಗಳು ನಗದು ಬದಲು ಅಕ್ಕಿಗೆ ಬೇಡಿಕೆ
- KCET Application 2024: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2024 ರ ಪರಿಷ್ಕೃತ ವೇಳಾಪಟ್ಟಿಯನ್ನು KEA ಬಿಡುಗಡೆ ಮಾಡಿದೆ
- ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ!, ಇಂದಿನ ಚಿನ್ನ & ಬೆಳ್ಳಿ ದರ ಹೇಗಿದೆ ನೋಡಿ
- ಹೆಲ್ಮೆಟ್ ಧರಿಸದೆ ವಾಹನ ಚಾಲನೆ! ಸ್ಕೂಟಿ ಪೆಪ್ ಗೆ 3.22 ಲಕ್ಷ ರೂ ದಂಡ ವಿಧಿಸಿದ ಪೊಲೀಸರು
Follow us on Instagram Bangalore Today