Get flat 10% off on Wonderla Entry Tickets | Use coupon code "BTWONDER".
Shivram karanta Layout: ಶಿವರಾಮ ಕಾರಂತ ಬಡಾವಣೆಯ ಸೈಟ್ ಹಂಚಿಕೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ; ಕಾರಣ ಇಲ್ಲಿದೆ ನೋಡಿ!
HC Stay on Shivram Karanta Layout Sites allotment: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಜನವರಿ 25 ರಿಂದ ಶಿವರಾಮ ಕಾರಂತ ಬಡಾವಣೆಯಲ್ಲಿ ನಿರ್ಮಾಣವಾಗಿರುವಂತಹ ನಿವೇಶನಗಳ ಹಂಚಿಕೆಗೆ ಅರ್ಜಿಯನ್ನು ಆಹ್ವಾನಿಸಲು ತಯಾರಿ ನಡೆಸಿಕೊಳ್ಳಲಾಗಿತ್ತು, ಆದರೆ ಇದೀಗ ಹೈಕೋರ್ಟ್ ಇದಕ್ಕೆ ತಡೆಯಾಜ್ಞೆ ನೀಡಿದೆ, ಹಾಗೂ ಬಡಾವಣೆಯ ಅಭಿವೃದ್ಧಿ ಕಾಮಗಾರಿ ಮುಂದುವರಿಸಲು ಅನುಮತಿಯನ್ನು ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Bangalore; ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯಲ್ಲಿ ಹೊಸದಾಗಿ ನಿರ್ಮಾಣವಾಗಿರುವಂತಹ ನಿವೇಶನಗಳ ಹಂಚಿಕೆಗೆ ಅರ್ಜಿಯನ್ನು ಆಹ್ವಾನಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಿದ್ಧತೆಯನ್ನು ನಡೆಸಿಕೊಂಡಿತು ಆದರೆ ಇದಕ್ಕೆ ಹೈಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಹೊರಡಿಸಿದೆ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠವು ಈ ಆದೇಶವನ್ನು ಹೊರಡಿಸಿದೆ, ಹಾಗೂ ಬಾಕಿ ಇರುವಂತಹ ಬಡಾವಣೆಯ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖ; ಆದರೆ ಮಾರ್ಗಸೂಚಿಗಳನ್ನು ಯಥಾಸ್ಥಿತಿಯಂತೆ ಪಾಲಿಸುವಂತೆ ಆದೇಶ
ಶಿವರಾಮ ಕಾರಂತ ಬಡಾವಣೆಯಲ್ಲಿ ಇಂದು ಸಮಸ್ಯೆಗಳು ಪರಿಹರಿಸದೆ ಬಿಡಿಎಯಿಂದ ನಿವೇಶನಗಳ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು ಹಲವರು ಈ ಕುರಿತು ಸುಪ್ರೀಂಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು ಹಾಗೂ ಈ ಕುರಿತು ಸುಪ್ರೀಂ ಕೋರ್ಟ್ ಅರ್ಜಿಗಳನ್ನು ಹೈಕೋರ್ಟ್ ಗೆ ವರ್ಗಾಯಿಸಿತು ಹಾಗಾಗಿ ಶಿವರಾಮ ಕಾರಂತ ಬಡಾವಣೆಯ ದಾಖಲೆಗಳು ಸಮಿತಿ ಬಳಿ ಇರುವ ಹಿನ್ನೆಲೆ ಸಮಿತಿ ದಾಖಲೆಗಳನ್ನು ಬಿಡಿಎಗೆ ಹಸ್ತಾಂತರಿಸದೆ ಇಟ್ಟುಕೊಂಡಿದೆ ಹಾಗಾಗಿ ದಾಖಲೆ ಇರುವ ಕೊಠಡಿಗೆ ಬೀಗ ಹಾಕಿದ್ದು ಬೀಗದ ಕೀ ಸಮಿತಿಯ ಬಳಿಯೇ ಇದೆ ಎಂದು ಬಿಡಿಎ ವಾದ ಮಂಡಿಸಿದೆ, ಹಾಗಾಗಿ ದಾಖಲೆಗಳಿರುವ ಕೊಠಡಿಗೆ ಮತ್ತೊಂದು ಬೀಗ ಹಾಕಿ ಕೀ ನೀಡುವಂತೆ ಹೈಕೋರ್ಟ್ ರಿಜಿಸ್ಟರ್ ಜನರಲ್ ಗೆ ಪೀಠ ಸೂಚನೆ ನೀಡಿದೆ.
ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ 2008ರಲ್ಲಿ 3456 ಎಕರೆ ಜಮೀನನ್ನು ಬಿಡಿಎ ಸ್ವಾಧೀನ ಪಡಿಸಿಕೊಂಡಿತ್ತು ಆದರೆ ಬಡಾವಣೆ ನಿರ್ಮಾಣದ ಸೂಚನೆ ನೀಡುವ ಮೊದಲೇ ಕಟ್ಟಡವನ್ನು ನಿರ್ಮಿಸಿದ್ದರು ಇವರು ಸಹ ಕೋರ್ಟ್ ಮೊರೆ ಹೋಗಿದ್ದರು ಇದನ್ನು ಸೂಕ್ಷ್ಮವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿ ರಚನೆ ಮಾಡಿ ವಿವಾದ ಇತ್ಯರ್ಥ ಪಡಿಸುವಂತೆ ಸೂಚನೆ ಕೊಟ್ಟಿತು ಅದರಂತೆ ಸತತ ಮೂರು ವರ್ಷಗಳ ಪರಿಶೀಲನೆಯ ಬಳಿಕ ಸಮಿತಿಯು ಲೇಔಟ್ ವಿಚಾರದಲ್ಲಿ ಎದುರಾಗಿದ್ದ ಎಲ್ಲಾ ಗೊಂದಲಗಳನ್ನು ನಿವಾರಣೆ ಮಾಡಲಾಗಿತ್ತು.
ಇದಲ್ಲದೆ ಶಿವರಾಮ ಕಾರಂತ ಲೇಔಟ್ ನಲ್ಲಿ ಕೆಲ ರಾಜಕಾರಣಿಗಳ ಜಮೀನು ಇದೆ ಹಾಗಾಗಿ ಕೆಲವರು ನಿವೇಶಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಅಂತವರ ಮೇಲೆ ಅಧಿಕಾರಿಗಳು ಯಾವುದೇ ಕ್ರಮವನ್ನು ಜರುಗಿಸುತ್ತಿಲ್ಲ ಅದರಲ್ಲೂ ಪ್ರಭಾವಿ ಸಚಿವರು ಸೇರಿದಂತೆ ಕೆಲವರು ಬೀನಾಮಿ ಹೆಸರಲ್ಲಿ ನಿವೇಶನ ಮಾಡಿ ಮಾರಾಟ ಮಾಡುತ್ತಿದ್ದಾರಂತೆ ಅವರಿಗೆ ನೋಟಿಸ್ ಕೊಡದೆ ಕೇವಲ ಅರ್ಧ ಎಕರೆ ಜಮೀನು ಹೊಂದಿರುವ ಬಡ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
Latest Trending
- ಬೆಂಗಳೂರಿನ ಪೀಣ್ಯ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿಷೇಧ; ಕಾರಣ ಇಲ್ಲಿದೆ
- ಶಿವರಾಮ ಕಾರಂತ ಬಡಾವಣೆಯ 10,000 ನಿವೇಶನಗಳನ್ನು ಮಾರಾಟ ಮಾಡಲು ಬಿಡಿಎ ಸಿದ್ಧತೆ; ದರ ಎಷ್ಟಿದೆ? ಅರ್ಜಿ ಆಹ್ವಾನ ಯಾವಾಗ?
- ಅನ್ನಭಾಗ್ಯ ಯೋಜನೆ ಶೇ. 82ರಷ್ಟು ಫಲಾನುಭವಿಗಳು ನಗದು ಬದಲು ಅಕ್ಕಿಗೆ ಬೇಡಿಕೆ
- KCET Application 2024: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2024 ರ ಪರಿಷ್ಕೃತ ವೇಳಾಪಟ್ಟಿಯನ್ನು KEA ಬಿಡುಗಡೆ ಮಾಡಿದೆ
Follow us on Instagram Bangalore Today