Karnataka PUC Board Exam 2024 Date: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಬಿಡುಗಡೆ; ಮಾರ್ಚ್‌ 01 ರಿಂದ ಪರೀಕ್ಷೆ ಆರಂಭ

Karnataka PUC Board Exam 2024 Date: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಸ್ಕೂಲ್ ಎಕ್ಸಾಮಿನೇಷನ್ ಅಂಡ್ ಅಸೆಸ್ಮೆಂಟ್ ಬೋರ್ಡ್ ಬಿಡುಗಡೆ ಮಾಡಲಾಗಿದ್ದು 2024ರ ಮಾರ್ಚ್ ತಿಂಗಳಲ್ಲಿ ಈ ಪರೀಕ್ಷೆಯು ಪ್ರಾರಂಭವಾಗಲಿದೆ, ಇವರ ವೆಬ್ಸೈಟ್ನಲ್ಲಿ ಅಧಿಕೃತ ವೇಳಾಪಟ್ಟಿಯನ್ನು ನೀವು ನೋಡಬಹುದಾಗಿದೆ.

Karnataka PUC Board Exam 2024 Date

Bangalore: 2023 – 24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ  ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಅಧಿಕೃತವಾಗಿಯೇ ಇದೀಗ ಬಿಡುಗಡೆ ಮಾಡಿದೆ ಹಾಗೂ ಈ ಪರೀಕ್ಷೆಯು ಮಾರ್ಚ್ 1 ರಿಂದ 22 ರವರಿಗೆ ನಡೆಯಲಿದ್ದು ವಿದ್ಯಾರ್ಥಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಉತ್ತಮ.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ವಿಷಯವಾರು ಈ ಕೆಳಗಿನಂತಿದೆ.

ಪರೀಕ್ಷೆ ವಿಷಯಗಳು ಪರೀಕ್ಷೆ ದಿನಾಂಕ
ಕನ್ನಡ, ಅರೇಬಿಕ್ 01-03-2024
ಗಣಿತ, ಶಿಕ್ಷಣಶಾಸ್ತ್ರ 04-03-2024
ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ 05-03-2024
ಮಾಹಿತಿ ತಂತ್ರಜ್ಞಾನ, ಹೆಲ್ತ್‌ಕೇರ್, ಬ್ಯೂಟಿ ಅಂಡ್ವೆಲ್‌ನೆಸ್‌ , ಆಟೋಮೊಬೈಲ್, ರೀಟೈಲ್ 06-03-2024
ಇತಿಹಾಸ / ಭೌತಶಾಸ್ತ್ರ 07-03-2024
ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ 09-03-2024
ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ 11-03-2024
ಇಂಗ್ಲಿಷ್ 13-03-2024
ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ 15-03-2024
ಅರ್ಥಶಾಸ್ತ್ರ 16-03-2024
ಭೂಗೋಳಶಾಸ್ತ್ರ, ಜೀವಶಾಸ್ತ್ರ 18-03-2024
ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ 20-03-2024
ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್ 21-03-2024
ಹಿಂದಿ 22-03-2024

ಪ್ರತಿಯೊಂದು ವಿಷಯದ ಪರೀಕ್ಷೆಯು ಪ್ರತಿದಿನ ಬೆಳಿಗ್ಗೆ 10:15 ಗಂಟೆಗೆ ಆರಂಭವಾಗಲಿದೆ ಕೆಲವು ವಿಷಯಗಳಿಗೆ 3 ಗಂಟೆ 15 ನಿಮಿಷ ಹಾಗೂ ಉಳಿಕೆ ವಿಷಯಗಳಿಗೆ ಎರಡು ಗಂಟೆ 15 ನಿಮಿಷ ಪರೀಕ್ಷೆ ಕಾಲಾವಧಿಯನ್ನು ನಿಗದಿಪಡಿಸಲಾಗಿದೆ ಹಾಗಾಗಿ ಪರೀಕ್ಷೆಗೆ ಹಾಜರಾಗುವ ಮೊದಲು ನಿಖರ ಮಾಹಿತಿಯನ್ನು ತಿಳಿದು ನಂತರ ಪರೀಕ್ಷೆ ಕೇಂದ್ರಕ್ಕೆ ಹಾಜರಾಗುವುದು ಉತ್ತಮ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *