Decline In Covid Cases In Karnataka: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖ; ಆದರೆ ಮಾರ್ಗಸೂಚಿಗಳನ್ನು ಯಥಾಸ್ಥಿತಿಯಂತೆ ಪಾಲಿಸುವಂತೆ ಆದೇಶ

Decline In Covid Cases In Karnataka: ಕರ್ನಾಟಕದಲ್ಲಿ ಕೋವಿಡ್ ಆತಂಕದಲ್ಲಿರುವಂತಹ ಜನತೆಗೆ ಇಲ್ಲಿದೆ ಸಿಹಿ ಸುದ್ದಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖ ಕಂಡುಬಂದಿದೆ ಹಾಗೂ ಮುನ್ನೆಚ್ಚರಿಕೆಯಾಗಿ ಕೋವಿಡ್ ಮಾರ್ಗಸೂಚಿಗಳನ್ನು ಯಥಾಸ್ಥಿತಿಯಂತೆ ಪಾಲಿಸುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ ಪ್ರಸ್ತುತ ಜಾರಿಯಲ್ಲಿರುವ ಮಾರ್ಗಸೂಚಿಯನ್ನು ಮುಂದಿನ ಆದೇಶ ವರೆಗೆ ಪಾಲಿಸಲು ಸಲಹೆ ನೀಡಲಾಗಿದೆ.

Decline In Covid Cases In Karnataka

Bangalore: ಭಾರತದಲ್ಲಿ 2023ರ ವರ್ಷಾಂತ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದವು ಅವುಗಳಲ್ಲಿ ರಾಜ್ಯ ರಾಜ್ಯಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ದಿನದಿಂದ ದಿನಕ್ಕೆ ಕೋವಿಡ್ ಏರಿಕೆಯಾಗುತ್ತಿತ್ತು,ಇದರಿಂದ ಕೋವಿಡ್ ನಿಯಂತ್ರಣಕ್ಕೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆಯ ವತಿಯಿಂದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಯಿತು, ಇದೀಗ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗಿರುವ ಹಿನ್ನೆಲೆ ರಾಜ್ಯದ ಜನತೆ ನಿಟ್ಟುಸಿರು ಬಿಡುವಂತೆ ಮಾಡಿದೆ ಹಾಗೂ ಈಗ ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ಯಥಾಸ್ಥಿತಿ ಪಾಲಿಸುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

ಇದನ್ನೂ ಓದಿ: Karnataka PUC Board Exam 2024 Date: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಬಿಡುಗಡೆ; ಮಾರ್ಚ್‌ 01 ರಿಂದ ಪರೀಕ್ಷೆ ಆರಂಭ

ಕೋವಿಡ್ ಮಾರ್ಗಸೂಚಿಯ ಅನುಸಾರ 60 ವರ್ಷ ಮೇಲ್ಪಟ್ಟವರಲ್ಲಿ ಲಕ್ಷಣ ಇರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಹಾಗೂ ಹೋಂ ಕ್ವಾರೆಂಟೈನ್ ನಲ್ಲಿರುವ ಸೋಂಕಿತರ ಬಗ್ಗೆ ಪಿಹೆಚ್‍ಸಿ, ಯುಪಿಹೆಚ್‍ಸಿ, ನಮ್ಮ ಕ್ಲಿನಿಕ್ ಸಿಬ್ಬಂದಿಗಳು ಗಮನಹರಿಸಬೇಕು.

ಮಧುಮೇಹ ಹೈಪರ್ ತೆನ್ಕ್ಷನ್ ಇರುವಂತಹ ಸೋಂಕಿತ ವ್ಯಕ್ತಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಅಲ್ಲದೇ ಕರ್ನಾಟಕ ರಾಜ್ಯದಲ್ಲಿ ಡೆತ್ ಆಡಿಟಿಂಗ್ ಕಮಿಟಿಯಿಂದ ನಿತ್ಯ ಕೋವಿಡ್ ನಿಂದ ಸಂಭವಿಸುವ ಸಾವುಗಳ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ರಿಗೆ ಡೆತ್ ಆಡಿಟ್ ಕಮಿಟಿ ವರದಿ ಸಲ್ಲಿಸಬೇಕು ಹಾಗೂ ಜೈಲಿನಲ್ಲಿ ಇರುವಂತಹ ಕೈದಿಗಳಿಗೆ ಒಂದು ವೇಳೆ ಕೋರೋನ ಸೋಂಕಿದ್ದರೆ ಎಸಿಬಿ ಪಾಲಿಸಬೇಕು ಎಂದು ಮಾರ್ಗಸೂಚಿ ನೀಡಲಾಗಿದೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *