NIA Raid: ಕರ್ನಾಟಕ ಮತ್ತು ಮಹಾರಾಷ್ಟ್ರದ 44 ಸ್ಥಳಗಳಲ್ಲಿ NIA ದಾಳಿ; 15 ಶಂಕಿತ ಉಗ್ರರ ಬಂಧನ

NIA Raid in Karnataka and Maharashtra: ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಐಎಸ್‌ಐಎಸ್ ವಿರುದ್ಧದ ಭಾರೀ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತೊಡಗಿದ್ದು, ಶನಿವಾರ ಮಹಾರಾಷ್ಟ್ರ ಮತ್ತು ಕರ್ನಾಟಕದಾದ್ಯಂತ ಅನೇಕ ದಾಳಿಗಳಲ್ಲಿ 15 ಭಯೋತ್ಪಾದಕ ಕಾರ್ಯಕರ್ತರನ್ನು ಬಂಧಿಸಿದೆ.

NIA Raid in Karnataka and Maharashtra

ಶಂಕಿತ ಉಗ್ರರು ಐಸಿಸ್ ಜೊತೆ ಸಂಪರ್ಕ ಹೊಂದಿರುವ ಮಾಹಿತಿಯು ಲಭ್ಯವಾಗಿದ್ದು ಅಷ್ಟೇ ಅಲ್ಲದೆ ಈ ಉಗ್ರರು ವಿದೇಶಿ ಐಸಿಸ್ ಹ್ಯಾಂಡ್ಲರ್ಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂಬುದು ಆರೋಪ ಕೇಳಿ ಬಂದಿದ್ದು,
ಭಾರತದಲ್ಲಿನ ಐಸಿಸ್ ವಿಚಾರಗಳನ್ನು ಹರಡಲು ಪ್ರಯತ್ನಿಸುತ್ತಿದ್ದರು ಈ ಹಿನ್ನೆಲೆಯನ್ನು ಕುರಿತು ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಐಸಿಸ್ ಭಯೋತ್ಪಾದನೆಯ ಸಂಚಿನ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಶನಿವಾರ ಬೆಳ್ಳಂಬೆಳಗ್ಗೆ ಕರ್ನಾಟಕ ಮತ್ತು ಮಹಾರಾಷ್ಟ್ರದ 44 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ಕರ್ನಾಟಕ ಮತ್ತು ಮಹಾರಾಷ್ಟ್ರದ 44 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಕರ್ನಾಟಕದಲ್ಲಿ 1, ಪುಣೆಯಲ್ಲಿ 2, ಥಾಣೆ ಗ್ರಾಮಾಂತರದಲ್ಲಿ 31, ಥಾಣೆ ನಗರದಲ್ಲಿ 9 ಮತ್ತು ಬಯಂದರ್‌ನಲ್ಲಿ 1 ಸ್ಥಳಗಳಲ್ಲಿ ದಾಳಿ ನಡೆಸಿದೆ. ಎನ್‌ಐಎ ಅಧಿಕಾರಿಗಳು 13 ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.

ಶಂಕಿತ ಉಗ್ರರು ಐಸಿಸ್ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಮೇರೆಗೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಭಯೋತ್ಪಾದಕರು ವಿದೇಶಿ ಐಸಿಸ್ ಹ್ಯಾಂಡ್ಲರ್ ಗಳ ಜತೆ ಸಂಪರ್ಕದಲ್ಲಿದ್ದು, ಐಸಿಸ್ ವಿಚಾರಗಳನ್ನು ಭಾರತದಲ್ಲಿ ಹರಡಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: 7 ವರ್ಷದ ವಿದ್ಯಾರ್ಥಿ ಮೇಲೆ ಶಿಕ್ಷಕಿಯಿಂದ ಹಲ್ಲೆ ಪರಿಣಾಮ ಕೈಗೆ ಆರು ಹೊಲಿಗೆ: ಕಾರಣವೇನು? ಇಲ್ಲಿದೆ ನೋಡಿ!

ಅಮೀರ್ ಅಬ್ದುಲ್ಲಾ, ಅಮಿತ್ ಖಾನ್ ಮತ್ತು ಮೊಹಮ್ಮದ್ ಯಾಕೂಬ್ ಸಾಕಿಯನ್ನು ಈಗಾಗಲೇ ಜುಲೈನಲ್ಲಿ ಪುಣೆ ಪೊಲೀಸರು ಬಂಧಿಸಿದ್ದರು. ಅವರ ವಿಚಾರಣೆ ವೇಳೆ ಇವರಿಬ್ಬರು ಐಸಿಸ್ ಜೊತೆ ಸಂಪರ್ಕದಲ್ಲಿದ್ದು ಮಹಾರಾಷ್ಟ್ರದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಮುಂದಾಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಿಯಾ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಶಂಕಿತ ಉಗ್ರರು ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದ ಅಂಬೋಲಿ ಅರಣ್ಯ ಪ್ರದೇಶದಲ್ಲಿ ಟ್ರೇಲ್ ಬ್ಲಾಸ್ಟ್ ನಡೆಸಿರುವುದು ಪತ್ತೆಯಾಗಿದೆ. ವಿಷಯ ತಿಳಿದಿದ್ದರಿಂದ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Latest Trending

Follow us on Instagram Bangalore Today Bangalore Today

Bhagirathi H P
Bhagirathi H P
Articles: 46

Leave a Reply

Your email address will not be published. Required fields are marked *