Man Jumps on Metro Track: ಕೇರಳದ ಯುವಕನೋರ್ವನು ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಶುಕ್ರವಾರ ಹಳಿಗೆ ಹಾರಿದ್ದು 45 ನಿಮಿಷಕ ಸಂಚಾರ ಸ್ಥಗಿತಗೊಂಡಿದೆ.

Man Jumps on Metro Track: ಕೇರಳದ ಯುವಕನೋರ್ವನು ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಶುಕ್ರವಾರ ಹಳಿಗೆ ಹಾರಿದ್ದ  ಪರಿಣಾಮ ತಲೆಗೆ ಏಟು ಬಿದ್ದಿದ್ದು ಈ ಘಟನೆಯಿಂದಾಗಿ ಚಲಿಸುತ್ತಿದ್ದ ಮೆಟ್ರೋ ರೈಲು ಯಶವಂತಪುರ-ನಾಗಸಂದ್ರ ನಡುವೆ 45 ನಿಮಿಷಕ್ಕೂ ಅಧಿಕ ಸಮಯ ಸಂಚಾರ ಸ್ಥಗಿತಗೊಂಡಿದೆ.

ಸಮರತ್ ಆಟೋ ಮೋಟಿವ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಸಿಎನ್‌ಸಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಕೇರಳದ ಅಲಪ್ಪುಳದ ಸರೋನ್ ಎಂಬ 23 ವಯಸ್ಸಿನ ಯುವಕ ಎಂದಿನಂತೆ ಸಂಜೆ 7:12 ಕ್ಕೆ ಮೆಟ್ರೋ ರೈಲು ಬರುವ ಸಮಯದಲ್ಲಿ ಸರೋನ್ ರೈಲಿನ ಹಳಿಯ ಮೇಲೆ ಆರಿದ್ದರು ಬಿಎಂಆರ್ಸಿಎಲ್ ಸಿಬ್ಬಂದಿ ರೈಲು ಮತ್ತು ಪ್ಲಾಟ್ ಫಾರ್ಮ್ ನಡುವೆ ಸಿಲುಕಿದ್ದ ಸರೋನ್ ಅನ್ನು ಕಂಡು ತಕ್ಷಣವೇ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರು ಘಟನೆಯಿಂದ ತಲೆಗೆ ಏಟು ಬಿದ್ದಿದೆ ಸರೋನನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ ಎಲ್ ಯಶವಂತ್ ಚವಾಣ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯ ಯೋಜನೆ ಶೇ. 82ರಷ್ಟು ಫಲಾನುಭವಿಗಳು ನಗದು ಬದಲು ಅಕ್ಕಿಗೆ ಬೇಡಿಕೆ,

ಈ ಘಟನೆಯಿಂದ ನಾಲ್ಕು ರೈಲುಗಳು ಇತರ ನಿಲ್ದಾಣಗಳ ಪ್ಲಾಟ್ ಫಾರ್ಮ್ ಗಳಲ್ಲಿ ಸ್ಥಗಿತಗೊಂಡ ಕಾರಣ ಪ್ರಯಾಣಿಕರಿಗೆ ಹೆಚ್ಚು ಗೊಂದಲ ಉಂಟಾಯಿತು ರೈಲಿನಲ್ಲಿ ಇದ್ದ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಪ್ರಯಾಣಿಕರನ್ನು ಹೊರಗೆ  ಕಳುಹಿಸಲಾಯಿತು ನಂತರ ಸಿಗ್ನಲಿಂಗ್ ಹೊಂದಾಣಿಕೆ ಮಾಡಿ 8 ಗಂಟೆಗೆ ಮೆಟ್ರೋ ರೈಲು ಸಂಚಾರ ಪುನರಾರಂಭಗೊಂಡಿತು ಈ ವೇಳೆಯಲ್ಲಿ ಯಶವಂತಪುರ-ರೇಷ್ಮೆ ಸಂಸ್ಥೆ ನಡುವೆ ಮಾತ್ರ ರೈಲು ಸಂಚಾರ ನಡೆಸಲಾಗಿತ್ತು.

ಇಷ್ಟೇ ಅಲ್ಲದೆ ಒಂದು ವಾರದಲ್ಲಿ ಪ್ರಯಾಣಿಕರೊಬ್ಬರು ಮೆಟ್ರೋ ಟ್ರ್ಯಾಕ್ ಮೇಲೆ ಹಾರಿದ್ದು ಹಾಗೂ ಜನವರಿ ಒಂದರಂದು ಇಂದಿರಾ ನಗರ ನಿಲ್ದಾಣದಲ್ಲಿ ಕೆಳಗೆ ಬಿದ್ದ ತನ್ನ ಮೊಬೈಲ್ ತೆಗೆದುಕೊಳ್ಳಲು ಮಹಿಳೆ ಒಬ್ಬಳು ಹಾರಿದ ಪರಿಣಾಮ 15 ನಿಮಿಷ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

Latest Trending

Follow us on Instagram Bangalore Today

Bhagirathi H P
Bhagirathi H P
Articles: 45

Leave a Reply

Your email address will not be published. Required fields are marked *