Get flat 10% off on Wonderla Entry Tickets | Use coupon code "BTWONDER".
Lorry Strike In Karnataka: ಕೇಂದ್ರದ ಹಿಟ್ ಅಂಡ್ ರನ್ ಕಾನೂನನ್ನು ವಿರೋಧಿಸಿ ಲಾರಿ ಮಾಲೀಕರ ಸಂಘದ ವತಿಯಿಂದ ಮುಷ್ಕರಕ್ಕೆ ಕರೆ !
Lorry Strike In Karnataka: ಕೇಂದ್ರ ಸರ್ಕಾರದ ಹೊಸ ಹಿಟ್ ಅಂಡ್ ರನ್ ಕಾನೂನನ್ನು ವಿರೋಧಿಸಿ ಮತ್ತು ಇನ್ನಿತರೆ ಬೇಡಿಕೆಗಳನ್ನು ಈಡೇರಿಕೆ ಮಾಡುವಂತೆ ಒತ್ತಾಯಿಸಿ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘದ ವತಿಯಿಂದ ಮುಷ್ಕರಕ್ಕೆ ಕರೆ ಕೊಟ್ಟಿವೆ, ಇದಕ್ಕೆ ಈಗಾಗಲೇ ಕರ್ನಾಟಕದ ಲಾರಿ ಮಾಲೀಕರ ಸಂಘದಿಂದಲೂ ಬೆಂಬಲ ದೊರೆತಿದೆ, ಆದರೆ ಫೆಡರೇಶನ್ ಆಫ್ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟ್ಗಳ ಸಂಘ ಮುಷ್ಕರಕ್ಕೆ ಬೆಂಬಲವನ್ನು ಸೂಚಿಸಿಲ್ಲ.
Bangalore: ಹಿಟ್ ಅಂಡ್ ರನ್ ಕಾನೂನು ಕುರಿತು ಕೇಂದ್ರ ಸರ್ಕಾರವು ಹೊಸದಾಗಿ ನಿಯಮವನ್ನು ಜಾರಿಗೊಳಿಸಲಾಗಿದ್ದು ಇದರ ವಿರುದ್ಧ ಲಾರಿ ಓನರ್ಸ್ ಅಸೋಸಿಯೇಷನ್ ಕಾನೂನು ರದ್ದುಗೊಳಿಸುವಂತೆ ಆಗ್ರಹಿಸಿ ಅನಿರ್ದಿಷ್ಟ ಅವಧಿ ಮುಷ್ಕರಕ್ಕೆ ಕರೆಯನ್ನು ನೀಡಿದ್ದಾರೆ, ಹಾಗಾಗಿ ಇಂದು ಮಧ್ಯರಾತ್ರಿಯಿಂದಲೇ ಸಂಘಟನೆಗಳು ಮುಷ್ಕರ ಕೈಗೊಳ್ಳಲಿದ್ದಾರೆ ಈ ಮುಷ್ಕರದಿಂದ ಎರಡು ಲಕ್ಷ ಲಾರಿಗಳು ಸಂಚಾರ ಸ್ಥಗಿತಗೊಳಿಸುವ ಸಾಧ್ಯತೆ ಇದೆ.
ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘಗಳು ಮುಷ್ಕರಕ್ಕೆ ಕರೆ ಕೊಟ್ಟಿದ್ದು ಕೇಂದ್ರ ಜಾರಿಗೆ ತರಲು ಮುಂದಾದ ಹಿಟ್ ಅಂಡ್ ರನ್ ಕಾನೂನು ರದ್ದುಗೊಳಿಸುವಂತೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಮುಷ್ಕರಕ್ಕೆ ಕರೆಕೊಟ್ಟಿವೆ.
ಇದನ್ನೂ ಓದಿ: ಜ 18 ರಿಂದ ಲಾಲ್ಬಾಗ್ ಫ್ಲವರ್ ಶೋ; ಶಾಲಾ ಮಕ್ಕಳಿಗೆ ಉಚಿತ ಪ್ರವೇಶ, ಬಸವಣ್ಣನವರ ಅನುಭವಮಂಟಪ ಈ ಬಾರಿಯ ಮುಖ್ಯ ಆಕರ್ಷಣೆ
ಆದರೆ ಫೆಡರೇಶನ್ ಆಫ್ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟ್ಗಳ ಸಂಘ ಈ ಒಂದು ಮುಷ್ಕರಕ್ಕೆ ಬೆಂಬಲವನ್ನು ಸೂಚಿಸಿಲ್ಲ.
ಈ ಮುಷ್ಕರಕ್ಕೆ ಮುಖ್ಯ ಕಾರಣವೂ ಭಾರತೀಯ ನ್ಯಾಯ ಸಹಿತ ಅಡಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳಿಗೆ ಕಠಿಣ ಕಾನೂನುಗಳ ಕ್ರಮಗಳ ವಿರುದ್ಧ ರದ್ದು ಮಾಡಬೇಕು ಎಂದು ಲಾರಿ ಮಾಲೀಕರ ಸಂಘದ ಆಗ್ರಹವಾಗಿದೆ..
ಹೊಸ ಹಿಟ್ ಅಂಡ್ ರನ್ ಕಾನೂನಿನ ಪ್ರಕಾರ ರಸ್ತೆಯಲ್ಲಿ ಚಲಿಸುವಾಗ ಲಾರಿಗಳಿಗೆ ಯಾರಾದರೂ ಬಂದು ಅಕಸ್ಮಾತಾಗಿ ಡಿಕ್ಕಿ ಹೊಡೆದರೆ ಹಾಗೂ ಲಾರಿ ಚಾಲಕರು ವಾಹನದಲ್ಲಿ ಏನಾದರೂ ತೊಂದರೆ ಉಂಟಾಗಿ ಎದುರಿನ ವಾಹನಕ್ಕೆ ಡಿಕ್ಕಿ ಹೊಡೆದು ಅದರಲ್ಲಿ ಪ್ರಾಣಿಕರು ಮೃತಪಟ್ಟರೆ ಲಾರಿ ಚಾಲಕರು 10 ವರ್ಷ ಜೈಲುಗಳ ಶಿಕ್ಷೆ ಹಾಗೂ ಏಳು ಲಕ್ಷದವರೆಗೆ ದಂಡ ಪಾವತಿಸಬೇಕಾದ ಹಿನ್ನೆಲೆ ಕಾನೂನು ಆಗ್ರಹಿಸಿ ಮುಷ್ಕರ ಕೈಗೊಳ್ಳಲಾಗುತ್ತಿದೆ ಮತ್ತು ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ ಕೆಲ ಸೇವೆಗಳ ವಿಳಂಬವಾಗುವ ಸಾಧ್ಯತೆ ಇದೆ.
ಲಾರಿ ಸಂಘಟನೆಗಳ ಬೇಡಿಕೆಗಳೇನು?
- ಕೇಂದ್ರ ಸರ್ಕಾರದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 106 ರ ಉಪ-ವಿಭಾಗ 1 ಮತ್ತು 2 ಅನ್ನು ಬಿಟ್ಟುಬಿಡಬೇಕು.
ಕರ್ನಾಟಕ ಸರ್ಕಾರದ ಮುಂದಿರುವ ಬೇಡಿಕೆಗಳು
- ರಾಜ್ಯದ ಗಡಿಯಲ್ಲಿರುವ ಎಲ್ಲಾ ಸಾರಿಗೆ ಇಲಾಖೆಯ ಚೆಕ್ಪೋಸ್ಟ್ಗಳನ್ನು ರದ್ದುಗೊಳಿಸುವುದು
- EXCESS PROJECTION ಮೇಲೆ ವಿಧಿಸಿರುವ 20 ಸಾವಿರ ದಂಡವನ್ನು ಕಡಿಮೆ ಮಾಡಬೇಕು
- ಕಪ್ಪುಪಟ್ಟಿಗೆ ಸೇರಿಸುವ ಹೆಸರಿನಲ್ಲಿ ವಾಣಿಜ್ಯ ವಾಹನಗಳಿಗೆ ಎಫ್ಸಿ ಮತ್ತು ಪರ್ಮಿಟ್ ನವೀಕರಿಸಲು ನಿರಾಕರಿಸುವುದನ್ನು ನಿಲ್ಲಿಸಬೇಕು
- ವಾಹನ ಮಾಲೀಕರು ಎಲ್ಲೇ ಇದ್ದರೂ ಅವರ ಮೂಲ ಕಚೇರಿಯಲ್ಲಿ ಡಿಎಸ್ಎ ಪ್ರಕರಣಗಳನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು.
ಪೋಲೀಸ್ ಇಲಾಖೆಯಲ್ಲಿರುವ ಬೇಡಿಕೆಗಳು
- ದಿನದ ನಿರ್ದಿಷ್ಟ ಸಮಯದಲ್ಲಿ ನಗರಕ್ಕೆ ಸರಕು ವಾಹನಗಳ ಪ್ರವೇಶದ ಮೇಲಿನ ನಿರ್ಬಂಧಗಳನ್ನು ಕೈಬಿಡಬೇಕು.
- ಅಪಘಾತ ಸಂಭವಿಸಿದಾಗ ಚಾಲಕನ ಚಾಲನಾ ಪರವಾನಗಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಾರದು.
- ಅಪಘಾತ ಸಂಭವಿಸಿದಾಗ ವಶಪಡಿಸಿಕೊಂಡ ವಾಹನ ಮತ್ತು ಚಾಲಕನನ್ನು ಬೇಗ ಬಿಡುಗಡೆ ಮಾಡಬೇಕು.
- ಚಾಲಕನ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆಯುವುದನ್ನು ನಿಲ್ಲಿಸಿ.
- ನಮ್ಮ ರಾಜ್ಯದಲ್ಲಿ ಹೊರ ರಾಜ್ಯದ ವಾಹನಗಳು ಅಪಘಾತಕ್ಕೀಡಾದಾಗ ವಾಹನ ಮತ್ತು ಚಾಲಕನ ಬಿಡುಗಡೆಗೆ ಸ್ಥಳೀಯ ಭದ್ರತೆ ಹಾಗೂ ಜಾಮೀನು ಕೇಳುವುದನ್ನು ನಿಲ್ಲಿಸಬೇಕು.
- ರಸ್ತೆ ಬದಿ ನಿಂತಿರುವ ವಾಹನಗಳನ್ನು ಜಪ್ತಿ ಮಾಡಬೇಕು ಹಾಗೂ ಬ್ರೇಕ್ಡೌನ್ನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಲಂ 283ರ ಅಡಿ ಪ್ರಕರಣ ದಾಖಲಿಸುವುದನ್ನು ನಿಲ್ಲಿಸಬೇಕು.
- ಡೀಸೆಲ್ ಹಾಗೂ ವಾಹನದ ಬಿಡಿ ಭಾಗಗಳು ಕಳ್ಳತನವಾದರೆ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದಾಗ ಎಫ್ ಐಆರ್ ದಾಖಲಿಸಬೇಕು.
Latest Trending
- ಬೆಂಗಳೂರಿನ ಪೀಣ್ಯ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿಷೇಧ; ಕಾರಣ ಇಲ್ಲಿದೆ
- ಶಿವರಾಮ ಕಾರಂತ ಬಡಾವಣೆಯ 10,000 ನಿವೇಶನಗಳನ್ನು ಮಾರಾಟ ಮಾಡಲು ಬಿಡಿಎ ಸಿದ್ಧತೆ; ದರ ಎಷ್ಟಿದೆ? ಅರ್ಜಿ ಆಹ್ವಾನ ಯಾವಾಗ?
- ಅನ್ನಭಾಗ್ಯ ಯೋಜನೆ ಶೇ. 82ರಷ್ಟು ಫಲಾನುಭವಿಗಳು ನಗದು ಬದಲು ಅಕ್ಕಿಗೆ ಬೇಡಿಕೆ
- KCET Application 2024: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2024 ರ ಪರಿಷ್ಕೃತ ವೇಳಾಪಟ್ಟಿಯನ್ನು KEA ಬಿಡುಗಡೆ ಮಾಡಿದೆ
- ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ!, ಇಂದಿನ ಚಿನ್ನ & ಬೆಳ್ಳಿ ದರ ಹೇಗಿದೆ ನೋಡಿ
Follow us on Instagram Bangalore Today