Dharwad New Bus Stand: ಧಾರವಾಡದಲ್ಲಿ 14 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಹೊಸ ಹೈಟೆಕ್ ಬಸ್ ನಿಲ್ದಾಣ

Dharwad New Bus Stand: ಧಾರವಾಡದಲ್ಲಿ 14 ಕೋಟಿ ವೆಚ್ಚದ ನೂತನ ಹೈಟೆಕ್ ಬಸ್ ನಿಲ್ದಾಣ ಶಂಕು ಸ್ಥಾಪನೆ ನೆರವೇರಿಸಲಾಗಿದೆ ಮಳೆ ಬಂದರೆ ಎಲ್ಲಾ ಕಡೆಯೂ ಬಸ್ ನಿಲ್ದಾಣ ಸೋರುತ್ತಿದ್ದು ಮಳೆ ಬಂದಾಗ ನಿಲ್ಲಲು ಜನರಿಗೆ ತೊಂದರೆಯಾಗುತ್ತಿತ್ತು.

ಹೀಗಾಗಿ ಸರ್ಕಾರ 14 ಕೋಟಿ ಹಣ ಬಿಡುಗಡೆ ಮಾಡಿ ಆದಷ್ಟು ಬೇಗ ಹೊಸ ಬಸ್ ನಿಲ್ದಾಣವನ್ನು ಮತ್ತು ಹಲವಾರು ಸೌಲಭ್ಯಗಳನ್ನು ನೀಡಲು ನಿರ್ಧರಿಸಿದೆ.

Dharwad New Bus Stand

ಧಾರವಾಡದ ಬಸ್ ನಿಲ್ದಾಣವು ನಿರ್ಮಾಣವಾಗಿ 50 ವರ್ಷಗಳಾಗಿದ್ದು ಪ್ರಯಾಣಿಕರಿಗೆ ಸರಿಯಾದ ಸೌಲಭ್ಯಗಳು ಇಲ್ಲವಾಗಿದ್ದು ಮಳೆ ಬಂದರೂ ಎಲ್ಲಾ ಕಡೆಯಿಂದಲೂ ಸೋರುತ್ತಿತ್ತು ಹೀಗಾಗಿ 14 ಕೋಟಿ ವೆಚ್ಚದಲ್ಲಿ ನೂತನ ಹೈಟೆಕ್ ಬಸ್ ನಿಲ್ದಾಣ ಶಂಕುಸ್ಥಾಪನೆ ನೆರವೇರಿಸಲಾಗಿದೆ,

ಧಾರವಾಡ ನಗರ ಸಾರಿಗೆ ನೂತನ ಸಿಬಿಟಿ ನಿರ್ಮಾಣ ಕಾಮಗಾರಿಗೆ ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಸೋಮವಾರ ಸಿ ಬಿ ಟಿ ಆವರಣದಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.

ಇದನ್ನೂ ಓದಿ: ಲೋಕಾಯುಕ್ತ ದಾಳಿ, ಸರ್ಕಾರಿ ಅಧಿಕಾರಿಗಳ ಬಳಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ

ಈ ಬಸ್ ನಿಲ್ದಾಣದಲ್ಲಿ ಫ್ಲಾಟ್ ಫಾರ್ಮ್ ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಒಳಗೊಂಡಿದ್ದು ಮೆಜ್ಜನೈನ ಮಹಡಿ ನಿರ್ವಾಹಕ ಕಚೇರಿಯನ್ನು ಒಳಗೊಂಡಿದೆಅ ಲ್ಲದೆ ಮೊದಲ ಮಹಡಿ ಮಾಡಿದ್ದ ಸ್ಥಳಗಳನ್ನು ಒಳಗೊಂಡಿದ್ದು ಪ್ರಯಾಣಿಕರು ಮತ್ತು ವಾಹನಗಳಿಗಾಗಿ ಪ್ರವೇಶ ನಿರ್ಗಮನ ಮತ್ತು ಪರಿಚಲನೆಯನ್ನು ಮರುವಿನ್ಯಾಸಗೊಳಿಸಲಾಗಿದೆ.

ಹೊಸ ಪ್ಲಾಟ್ ಫಾರ್ಮ್ ಗಳ ನಿರ್ಮಾಣ ಮತ್ತು ಡ್ರೈವ್ ಕಾಂಕ್ರೀಟಿಂಗ್ ಆಸನ, ಶೌಚಾಲಯಗಳು, ಮಹಿಳಾ ಕೊಠಡಿ, ಮಗುವಿನ ಆರೈಕೆ ಕೊಠಡಿ, ಕುಡಿಯುವ ನೀರು, ಪ್ರಯಾಣ ಮಾಹಿತಿ (ITS). ಎಲ್ಇಡಿ ಡಿಸ್ಪ್ಲೇಗಳು, ಟ್ಯಾಕ್ಟೈಲ್ ಫ್ಲೋರಿಂಗ್. CBT ಇತ್ತೀಚಿನ ಲುಮಿನಿಯರ್‌ಗಳು, ಎಲೆಕ್ಟ್ರಿಕಲ್, ನೆಟ್‌ವರ್ಕಿಂಗ್, CCTV, ITS, LED ಬೋರ್ಡ್‌ಗಳು, ಮನರಂಜನಾ ಮತ್ತು ವಾಣಿಜ್ಯ ಸ್ಥಳಗಳನ್ನು ಸಹ ಒದಗಿಸಲಾಗಿದೆ. ಸಿಬ್ಬಂದಿಗಳಿಗಾಗಿ ಸಿಬ್ಬಂದಿ ವಿಶ್ರಾಂತಿ ಕೊಠಡಿಗಳು, ಸಿಬ್ಬಂದಿ ಶೌಚಾಲಯಗಳು ಈ ಹೊಸ ಬಸ್ ನಿಲ್ದಾಣದಲ್ಲಿ ಇಷ್ಟೆಲ್ಲಾ ಸೌಕರ್ಯಗಳು ಇರಲಿದೆ.

ಹೊಸ ಹೈಟೆಕ್ ಬಸ್ಟಾಂಡ್ ನಿರ್ಮಾಣದ ನಂತರ ಧಾರವಾಡದ ನಾಗರಿಕರಿಗೆ ಹೊಸ ಸೌಲಭ್ಯ ದೊರಕುವ ನಿರೀಕ್ಷೆಯು ಹೆಚ್ಚಿದೆ.

Latest Trending

Follow us on Instagram Bangalore Today

Bhagirathi H P
Bhagirathi H P
Articles: 45

Leave a Reply

Your email address will not be published. Required fields are marked *