Get flat 10% off on Wonderla Entry Tickets | Use coupon code "BTWONDER".
D V Sadananda Gowda: ಚುನಾವಣಾ ರಾಜಕೀಯಕ್ಕೆ ಸದಾನಂದ ಗೌಡ ನಿವೃತ್ತಿ: ಇಲ್ಲಿದೆ ಕಾರಣ
D V Sadananda Gowda: ಪ್ರಸ್ತುತ ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಇದೀಗ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ, ಹೌದು ನಿನ್ನೆ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುವ ಮೂಲಕ ರಾಜಕೀಯ ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
Hassan, November, 09: ಕೇಂದ್ರ ಮಾಜಿ ರೈಲ್ವೆ ಸಚಿವ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಟಿವಿ ಸದಾನಂದ ಗೌಡರವರು ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿ ಮಹತ್ತರದ ನಿರ್ಣಯವನ್ನು ಕೈಗೊಂಡಿರುವುದನ್ನು ತಿಳಿಸಿದರು ತಮ್ಮ ರಾಜಕೀಯ ಜೀವನದಲ್ಲಿ ಚುನಾವಣಾ ರಾಜಕೀಯಕ್ಕೆ ವಿದಯಾವನ್ನು ಹೇಳುವುದರ ಮೂಲಕ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸದಾನಂದ ಗೌಡರವರು ನನ್ನ ಪಕ್ಷ ನನಗೆ ಎಲ್ಲವನ್ನು ನೀಡಿದೆ ನನಗೆ ಇಷ್ಟು ಸಾಕು ಹೆಚ್ಚಿನದಕ್ಕೆ ಆಸೆ ಪಡುವುದು ಒಳ್ಳೆಯದಲ್ಲ ಎಂದು ತಿಳಿಸಿದರು ಹಾಗೂ ಚುನಾವಣಾ ರಾಜಕೀಯದಲ್ಲಿ ಮುಂದುವರಿಯಬಾರದು ಎಂಬ ಒಂದು ಸಣ್ಣ ತೀರ್ಮಾನವನ್ನು ಕೈಗೊಂಡಿದ್ದೇನೆ.
ಇದನ್ನೂ ಓದಿ; ಮೆಟ್ರೋ ಕಾಮಗಾರಿ ಆಮೆ ವೇಗ 2024 ರ ವೇಳೆಗೆ ಮತ್ತಷ್ಟು ಟ್ರಾಫಿಕ್ ಹೆಚ್ಚಳ!
30 ವರ್ಷ ರಾಜಕೀಯ ವೃತ್ತಿ ಜೀವನ!
ನನ್ನ 30 ವರ್ಷ ರಾಜಕೀಯ ವೃತ್ತಿ ಜೀವನದಲ್ಲಿ ನನ್ನ ಪಕ್ಷ ಎಲ್ಲವನ್ನು ಕೊಟ್ಟಿದೆ, ನಾನು ನಂಬರ್ ಒನ್ ಬೆನಿಫಿಶಿಯರ್ ಆದರೆ ಯಡಿಯೂರಪ್ಪರವರು ಬಿಟ್ಟರೆ ನಾನೇ ನಂಬರ್ ಒನ್ ಬೆನಿಫಿಶಿಯರ್ 10 ವರ್ಷ ಎಂಎಲ್ಎ, 20 ವರ್ಷ ಎಂಪಿ ಆಗಿದ್ದೇನೆ, ಒಂದು ವರ್ಷ ಮುಖ್ಯಮಂತ್ರಿ ಒಂದೂವರೆ ವರ್ಷ ವಿರೋಧ ಪಕ್ಷ ನಾಯಕ ಹಾಗೂ ವಿಧಾನಸಭೆಯಲ್ಲಿ ಐದು ವರ್ಷ ವಿರೋಧ ಪಕ್ಷದ ಉಪನಾಯಕ , ನಾಲ್ಕು ವರ್ಷಗಳ ಕಾಲ ಪಕ್ಷದ ಅಧ್ಯಕ್ಷನಾಗಿದ್ದೇನೆ, ಇಷ್ಟರಿಂದಲೇ ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ; KSRTC ನಿಂದ ದೀಪಾವಳಿ ಹಬ್ಬಕ್ಕೆ ಹೆಚ್ಚುವರಿ 2000 ಬಸ್ ವ್ಯವಸ್ಥೆ
ಮೂರು ದಿನ ವಾದರೂ ವರಿಷ್ಠರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ!
ಈ ಕುರಿತು ಮಾತನಾಡಲು ಅಕ್ಟೋಬರ್ 25ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ದಾರವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದರು, ಸದಾನಂದ ಗೌಡರವರು ಮೂರು ದಿನ ಕಾಲವಾದರೂ ವರಿಷ್ಠರನ್ನು ಭೇಟಿಯಾಗಲು ಸಾಧ್ಯವಾಗದ ಕಾರಣ ಕರ್ನಾಟಕಕ್ಕೆ ಹಿಂತಿರುಗಿದರು, ಈ ಸಂದರ್ಭದಲ್ಲಿ ರಾಜ್ಯದಲ್ಲಿ ನಾಯಕತ್ವ ಆಯ್ಕೆ ವಿಳಂಬ ಆಗುತ್ತಿರುವುದರ ಬಗ್ಗೆ ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
Latest Trending
- ಮಿಂಚಿನ ಧೃವತಾರೆ ಶಂಕರ್ ನಾಗ್
- ಗೃಹಲಕ್ಷ್ಮಿ ಯೋಜನೆ 8 ಲಕ್ಷ ಮಹಿಳಾ ಖಾತೆಗಳಿಗೆ 15 ದಿನಗಳಲ್ಲಿ ಜಮೆ
- ವಾಹನ ಖರೀದಿಗೆ ಸರ್ಕಾರದಿಂದ 4 ಲಕ್ಷದವರೆಗೆ ಸಬ್ಸಿಡಿ
- 7೦ ಸಾವಿರ ಕೊಹ್ಲಿ ಮುಖವಾಡ ಹಂಚಿಕೆ, ಇಂದು ಮೈದಾನ ಕೊಹ್ಲಿ ಮಯಾ.
- ದೀಪಾವಳಿ ಪ್ರಯುಕ್ತ ಉದ್ಯೋಗಿಗಳಿಗೆ ಉಚಿತ ಕಾರು ಕೊಡುಗೆ
Follow us on Instagram Bangalore Today