Swawalambi Sarathi Scheme: ವಾಹನ ಖರೀದಿಗೆ ಸರ್ಕಾರದಿಂದ 4 ಲಕ್ಷದವರೆಗೆ ಸಬ್ಸಿಡಿ: ಇಲ್ಲಿದೆ ಮಾಹಿತಿ

Swawalambi Sarathi Scheme: ಕರ್ನಾಟಕ ರಾಜ್ಯ ಸರ್ಕಾರವು ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನದ ಮೌಲ್ಯದ ಮೇಲೆ 4 ಲಕ್ಷದವರೆಗೆ ಅಂದರೆ 75% ವರೆಗೆ ಸಬ್ಸಿಡಿಯನ್ನು ಒದಗಿಸುವ ಈ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಿದೆ, ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಈ ಯೋಜನೆಯನ್ನು ಹೇಗೆ ಪಡೆಯಬಹುದು ಎಂಬುದರ ಕುರಿತು ಈ ಲೇಖನವು ಮಾಹಿತಿಯನ್ನು ಒದಗಿಸುತ್ತದೆ.

Swawalambi Sarathi Scheme

ವಾಣಿಜ್ಯ ಉದ್ದೇಶಗಳಿಗಾಗಿ ಹೊಸ ವಾಹನವನ್ನು ಖರೀದಿಸಲು ಬಯಸುವವರಿಗೆ, ಕನಸು ನನಸಾಗಿಸಿಕೊಳ್ಳಲು ಇದು ಒಂದು ಸುವರ್ಣ ಅವಕಾಶ ಕರ್ನಾಟಕ ಸರ್ಕಾರದಿಂದ ಬರೋಬ್ಬರಿ 4 ಲಕ್ಷದವರೆಗೆ ವಾಹನ ಖರೀದಿಯ ಮೇಲೆ ಸಬ್ಸಿಡಿಯನ್ನು ನೀಡಲಾಗುತ್ತದೆ, ಹೌದು ಸ್ವಾವಲಂಬಿ ಸಾರಥಿ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಈ ಒಂದು ಯೋಜನೆಯ ಫಲಾನುಭವಿಗಳಾಗಬಹುದು.

ಇದನ್ನೂ ಓದಿ; ಬೈಯಪ್ಪನಹಳ್ಳಿ – ಹೊಸೂರು ರೈಲು ಮಾರ್ಗಕ್ಕೆ ಡಬ್ಲಿಂಗ್ ಕಾಮಗಾರಿಗೆ ಚಾಲನೆ

ಸ್ವಾಲಂಬಿ ಸಾರಥಿ ಯೋಜನೆ ಎಂದರೇನು?

ಸ್ವಾಲಂಬಿ ಸಾರಥಿ ಯೋಜನೆಯು ಕರ್ನಾಟಕ ಸರ್ಕಾರದ ಯೋಜನೆಯಾಗಿದ್ದು, ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೇರಿದ ಬಡ ಜನರಿಗೆ ವಾಣಿಜ್ಯ ವಾಹನಗಳನ್ನು ಖರೀದಿಸಲು ಸಬ್ಸಿಡಿ ಸಹಾಯವನ್ನು ನೀಡುತ್ತದೆ.

ಅರ್ಹತೆಗಳೇನು?

  1. ಕರ್ನಾಟಕದ ಶಾಶ್ವತ ನಿವಾಸಿಯಾಗಿರಬೇಕು.
  2. ಕರ್ನಾಟಕ ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೇರಿದವರಾಗಿರಬೇಕು.
  3. ವಯಸ್ಸು 21ರಿಂದ 45 ವರ್ಷಗಳ ನಡುವೆ ಇರಬೇಕು.
  4. ಎಲ್ಲಾ ಮೂಲಗಳಿಂದ ಬರುವ ವಾರ್ಷಿಕ ಆದಾಯವು 4.5 ಲಕ್ಷಕ್ಕಿಂತ ಕಡಿಮೆ ಇರಬೇಕು.
  5. ಕುಟುಂಬದ ಯಾವುದೇ ಸದಸ್ಯರು ಕೇಂದ್ರ /ರಾಜ್ಯ ಸರ್ಕಾರಿ ಉದ್ಯೋಗಿ ಆಗಿರಬಾರದು.
  6. ಅರ್ಜಿದಾರರು ಅಥವಾ ಅವರ ಕುಟುಂಬದ ಸದಸ್ಯರು ಕಳೆದ 5 ವರ್ಷಗಳಲ್ಲಿ ಸರ್ಕಾರದ ಅಥವಾ ನಿಯಂತ್ರಣದ ಯಾವುದೇ ಇತರ ಯೋಜನೆಗಳ ಅಡಿಯಲ್ಲಿ (ಅರಿವು ಯೋಜನೆ ಹೊರತುಪಡಿಸಿ) ಸಾಲ ಸೌಲಭ್ಯಗಳನ್ನು ಪಡೆದಿರಬಾರದು.

ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕ ಸರ್ಕಾರವು ಸ್ವಾಲಂಬಿ ಸಾರಥಿ ಯೋಜನೆಗಾಗಿ ಸರ್ಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ, ನೀವು ಈ ಒಂದು ಯೋಜನೆಗೆ ಆ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಬೇಕಾಗುವ ಪ್ರಮುಖ ದಾಖಲೆಗಳು!

  1. ಅರ್ಜಿದಾರರ ಫೋಟೋ
  2. ಮೊಬೈಲ್ ನಂಬರ್
  3. ಜಾತಿ & ಆದಾಯ ಪ್ರಮಾಣ ಪತ್ರ
  4. ಆಧಾರ್ ಕಾರ್ಡ್ ಪ್ರತಿ
  5. ವಾಹನ ಚಾಲನಾ ಪರವಾನಗಿ ಪ್ರತಿ
  6. ಬ್ಯಾಂಕ್ ಪಾಸ್ ಬುಕ್
  7. ವಾಹನದ ಅಂದಾಜು ದರಪಟ್ಟಿ
  8. ಸ್ವಯಂ ಘೋಷಣೆ ಪತ್ರ

ಈ ಒಂದು ಯೋಜನೆಗೆ ಕರ್ನಾಟಕ ಸರ್ಕಾರದ ವತಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ – ಅರ್ಜಿಯನ್ನು ಸಲ್ಲಿಸಿ

Latest Trending

Follow us on Instagram Bangalore Today

Chethan M S
Chethan M S
Articles: 6

Leave a Reply

Your email address will not be published. Required fields are marked *