Virat Kohli Birthday: 7೦ ಸಾವಿರ ಕೊಹ್ಲಿ ಮುಖವಾಡ ಹಂಚಿಕೆ, ಇಂದು ಮೈದಾನ ಕೊಹ್ಲಿ ಮಯಾ.

Virat Kohli Birthday: ಇಂದು ಕ್ರಿಕೆಟ್ ಅಗ್ರಗಣ್ಯ ಆಟಗಾರ ಕಿಂಗ್ ಕೊಹ್ಲಿ ಖ್ಯಾತಿಯ ವಿರಾಟ್ ಕೊಹ್ಲಿಯ 35 ನೇ ಹುಟ್ಟುಹಬ್ಬ ಅದ್ದರಿಂದ ಹುಟ್ಟುಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲು ಸುಮಾರು 70,000 ಬೆಂಬಲಿಗರಿಗೆ ವಿರಾಟ್ ಕೊಹ್ಲಿ ಮಾಸ್ಕ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬೆಂಗಾಲ್ (ಸಿಎಬಿ) ದೊಡ್ಡ ಯೋಜನೆಯನ್ನು ಮಾಡಿದೆ.

Virat Kohli Birthday

ಭಾರತವು ಆತಿಥ್ಯ ವಹಿಸುತ್ತಿರುವ ಐಸಿಸಿ ಪುರುಷರ 13ನೇ ಆವೃತ್ತಿ ಕ್ರಿಕೆಟ್ ವಿಶ್ವಕಪ್ 2023 ಅಕ್ಟೋಬರ್ 5 ರಂದು ಪ್ರಾರಂಭವಾಯಿತು. ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಉತ್ತಮ ಫಾರ್ಮ್‌ನಲ್ಲಿವೆ ಮತ್ತು ಗುರಿ ಹೊಂದಿವೆ.

ಇದನ್ನೂ ಓದಿ; ಲಸಿಕೆ ಇಲ್ಲದ ಝಿಕಾ ವೈರಸ್ ಗೆ ಕರ್ನಾಟಕದಲ್ಲಿ ಕಟ್ಟೆಚ್ಚರ! ಮುಂಜಾನೆಯ ಸೊಳ್ಳೆಯಿಂದ ಹುಷಾರ್.

ವಿಶೇಷವೆಂದರೆ ಇಂದು ಭಾರತದ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿಯ 35 ನೇ ಹುಟ್ಟುಹಬ್ಬ ಅದ್ದರಿಂದ ದೇಶದಾದ್ಯಂತ ಅಭಿಮಾನಿಗಳು ನೆಚ್ಚಿನ ಆಟಗಾರನ ಹುಟ್ಟುಹಬ್ಬವನ್ನು ಆಚರಿಸಿಲಿದ್ದಾರೆ ಮತ್ತು ಇಂದು ನಡೆಯುವ ದಕ್ಷಿಣ ಆಫ್ರಿಕಾ vs ಇಂಡಿಯಾ ಮ್ಯಾಚ್ ಗೆ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ.

ಇಂದು ಪಂದ್ಯಾವಳಿಯು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯಲಿದ್ದು ಕೋಲ್ಕತ್ತಾದ ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬೆಂಗಾಲ್ (ಸಿಎಬಿ) ಪಂದ್ಯಾವಳಿಗೆ ಸೇರುವ 70,000 ಅಭಿಮಾನಿಗಳಿಗೆ ಕೊಹ್ಲಿ ಮುಖವಾಡ(ಮಾಸ್ಕ್) ಹಂಚಲು ನಿರ್ಧರಿಸಲಾಗದೆ ಎಂದು ತಿಳಿಸಿದ್ದಾರೆ.

ಮಾಸ್ಕ್‌ಗಳನ್ನು ವಿತರಿಸುವುದರ ಹೊರತಾಗಿ, ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬೆಂಗಾಲ್ (ಸಿಎಬಿ) ಪಂದ್ಯದ ಆರಂಭದ ಮೊದಲು ಕೇಕ್ ಕತ್ತರಿಸುವ ಸಮಾರಂಭವನ್ನು ಆಯೋಜಿಸಲು ಮತ್ತು ಸ್ಮರಣಿಕೆಯೊಂದಿಗೆ ಕೊಹ್ಲಿಯನ್ನು ಅಭಿನಂದಿಸಲು ಯೋಜಿಸಿದೆ.

“ಈ ಬಗ್ಗೆ ಐಸಿಸಿಯಿಂದ ಅನುಮೋದನೆ ಸಿಗುವ ನಿರೀಕ್ಷೆಯಿದೆ. ನಾವು ವಿರಾಟ್‌ಗಾಗಿ ದಿನವನ್ನು ವಿಶೇಷವಾಗಿಸಲು ಬಯಸುತ್ತೇವೆ” ಎಂದು ಸಿಎಬಿ ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

Latest Trending

Follow us on Instagram Bangalore Today

Leave a Reply

Your email address will not be published. Required fields are marked *