Gruha Lakshmi Scheme: ಗೃಹಲಕ್ಷ್ಮಿ ಯೋಜನೆ 8 ಲಕ್ಷ ಮಹಿಳಾ ಖಾತೆಗಳಿಗೆ 15 ದಿನಗಳಲ್ಲಿ ಜಮೆ

Gruha Lakshmi Scheme: ಕರ್ನಾಟಕ ಸರ್ಕಾರದ ಪ್ರಮುಖ 5 ಖಾತರಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿದ್ದು, ಈ ಒಂದು ಯೋಜನೆಗೆ ಇದುವರೆಗೆ 2,400 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಇದುವರೆಗೆ 7.9 ಲಕ್ಷ ಮಹಿಳೆಯರ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಆಗಿಲ್ಲ, ಹೀಗಾಗಿ ಮುಂದಿನ 15 ದಿನಗಳಲ್ಲಿ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.

Bangalore, November, 08: ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ 5 ಪ್ರಮುಖ ಭರವಸೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ 1.28 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದು, ಈ ಪೈಕಿ 7.9 ಲಕ್ಷ ಮಹಿಳೆಯರಿಗೆ ಇದುವರೆಗೆ ತಮ್ಮ ಖಾತೆಗೆ ಹಣ ಬಂದಿಲ್ಲ, ಆದ್ದರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮಾತನಾಡಿ ”ಈ ಒಂದು ಯೋಜನೆಯಲ್ಲಿನ ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದು ಮುಂದಿನ 15 ದಿನದೊಳಗೆ ಬಾಕಿ ತಿಂಗಳ ಹಣ ಸೇರಿದಂತೆ ಒಟ್ಟು ಹಣವನ್ನು ಖಾತೆಗೆ ಜಮಾ ಮಾಡಲಾಗುವುದು” ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಗೃಹಲಕ್ಷ್ಮಿ ಯೋಜನೆ ಇದುವರೆಗೆ ಶೇ.95ರಷ್ಟು ಯಶಸ್ವಿಯಾಗಿದ್ದು, ಮೂರು ಜಿಲ್ಲೆಗಳ ಸಿಡಿಪಿಒಗಳಿಗೆ ಸಮಸ್ಯೆಗಳ ಪರಿಹಾರಕ್ಕೆ ಪ್ರತಿದಿನ ತರಬೇತಿ ನೀಡಲಾಗುತ್ತಿದೆ.

ಇದನ್ನೂ ಓದಿ; ಸದ್ಯದಲ್ಲೇ ಬೆಂಗಳೂರಿನಲ್ಲಿ ರಾಪಿಡೋ ಕ್ಯಾಬ್ ಸೇವೆ ಪ್ರಾರಂಭ

ಮೂರು ತಿಂಗಳ ಬಾಕಿ, ಒಂದೇ ಬಾರಿಗೆ ಖಾತೆಗೆ ಜಮಾ!

ಆಧಾರ್ ಕಾರ್ಡ್ ಲಿಂಕ್ ಮತ್ತು ಪಡಿತರ ಚೀಟಿಯಲ್ಲಿ ಹೆಸರು ತಿದ್ದುಪಡಿ ತಾಂತ್ರಿಕ ತೊಂದರೆಯಿಂದ ಯಾರ ಖಾತೆಗೆ ಹಣ ಜಮಾ ಮಾಡಲು ಸಾಧ್ಯವಾಗದೆ ಇದ್ದರೆ, ಅವರ ಖಾತೆಗೆ ಕಳೆದ ಕಳೆದ ಮೂರು ತಿಂಗಳ ಬಾಕಿಯನ್ನು ಒಮ್ಮೆಲೇ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಗೃಹಲಕ್ಷ್ಮಿ ಹಣ ಇನ್ನೂ ಖಾತೆಗೆ ಏಕೆ ವರ್ಗಾವಣೆ ಆಗಿಲ್ಲ?

ರಾಜ್ಯದ ಹಲವು ಪಡಿತರ ಚೀಟಿಗಳಲ್ಲಿ ಮನೆಯ ಯಜಮಾನ ಪುರುಷನಾಗಿದ್ದು ಈ ಯೋಜನೆಯ ಫಲವನ್ನು ಪಡೆಯಲು ಮಹಿಳೆ ಮನೆಯ ಎಜಮಾನಿ ಆ ಗಿರಬೇಕು ಹಾಗಾಗಿ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದ್ದು, ಆಧಾರ್ ಕಾರ್ಡ್ ಸಂಖ್ಯೆ ಮತ್ತು ದೂರವಾಣಿ ಸಂಖ್ಯೆ ಲಿಂಕ್, ಹೆಸರು ಬದಲಾವಣೆಯನ್ನು ಮಾಡುವುದು ಹಾಗೂ ಇನ್ನಿತರೇ ಸಮಸ್ಯೆ ಗಳಿಂದ ಇಲ್ಲಿಯವರೆಗೆ 7.9 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಖಾತೆಗೆ ಜಮೆಯಾಗಿಲ್ಲ

Latest Trending

Follow us on Instagram Bangalore Today

Leave a Reply

Your email address will not be published. Required fields are marked *