Rapido Cab in Bangalore: ಸದ್ಯದಲ್ಲೇ ಬೆಂಗಳೂರಿನಲ್ಲಿ ರಾಪಿಡೋ ಕ್ಯಾಬ್ ಸೇವೆ ಪ್ರಾರಂಭ

Rapido Cab in Bangalore: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಬೈಕ್ ಮತ್ತು ಆಟೋ ಟ್ಯಾಕ್ಸಿ ಬಾಡಿಗೆ ಸೇವೆ ನೀಡುತ್ತಿರುವ ಸಂಸ್ಥೆಗಳಲ್ಲಿ ಒಂದಾದ Rapido, ಇದೀಗ ಮತ್ತೊಂದು ಪ್ರಮುಖ ಬಾಡಿಗೆ ಸೇವೆಯಾದ ಕ್ಯಾಬ್ ಸೇವೆಯನ್ನು ಪ್ರಾರಂಭಿಸಲು ಈಗಾಗಲೇ ಯೋಜನೆಗಳನ್ನು ಮಾಡಿದೆ.

Bangalore, November, 08: ಬೆಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಇಂತಹ ಬೈಕ್ ಮತ್ತು ಆಟೋ ಬಾಡಿಗೆ ಸೇವಾ ಸಂಸ್ಥೆ Rapido ಇದೀಗ ಕ್ಯಾಬ್ ಸೇವೆಗಳನ್ನು ಆರಂಭಿಸಲು ಆಸಕ್ತಿ ತೋರಿದ್ದು, ಕರ್ನಾಟಕ ಆನ್ ಡಿಮ್ಯಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ ನಿಯಮಗಳ ಅಡಿಯಲ್ಲಿ Rapido ಪರವಾನಗಿಗಾಗಿ ಅರ್ಜಿ ಸಲ್ಲಿಸಿದೆ.

ಇದನ್ನೂ ಓದಿ; ವಾಹನ ಖರೀದಿಗೆ ಸರ್ಕಾರದಿಂದ 4 ಲಕ್ಷದವರೆಗೆ ಸಬ್ಸಿಡಿ

ಈಗಾಗಲೇ ಕ್ಯಾಬ್ ನಿರ್ವಾಹಕರು, ಕರ್ನಾಟಕ ಅಂಡ್ ಡಿಮ್ಯಾಂಡ್ ಟ್ರಾನ್ಸ್ಪೋರ್ಟೆಶನ್ ಟೆಕ್ನಾಲಜಿ ಅಗ್ರಿಕಲ್ ರೂಲ್ಸ್ ಪ್ರಕಾರ 2016ರ ಅಡಿಯಲ್ಲಿ ಪರವಾನಗಿಗಳನ್ನು ಪಡೆಯಬೇಕು ಎಂದು ಕರ್ನಾಟಕ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ,

ಅದರಂತೆ ಕಳೆದ ವಾರ ಈ ನಿಯಮದ ಅಡಿಯಲ್ಲಿ ಪರವಾನಗಿಗಾಗಿ ಅರ್ಜಿಯನ್ನು ಸಲ್ಲಿಸಿದೆ ಎಂದು ಸಾರಿಗೆ ಹೆಚ್ಚುವರಿ ಆಯುಕ್ತ ಮತ್ತು ರಾಜ್ಯ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಎಲ್ ಹೇಮಂತ್ ಕುಮಾರ್ ಮನಿ ಕಂಟ್ರೋಲ್ ಗೆ ತಿಳಿಸಿದರು

“ನಾವು ಪರವಾನಗಿ ನೀಡುವ ಮೊದಲು ಅವರ 100 ವಾಹನಗಳನ್ನು ಪರಿಶೀಲಿಸಬೇಕಾಗಿದೆ” ಎಂದು ಅವರು ಹೇಳಿದರು.

2015 ರಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ಚಾಲಿತ ಬೈಕ್ ಟ್ಯಾಕ್ಸಿಗಳನ್ನು ಚಲಾಯಿಸಲು ಪರವಾನಗಿ ಇಲ್ಲದೆ Rapido ಕಾರ್ಯನಿರ್ವಹಿಸುತ್ತಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಮಾತ್ರ ಸೇವೆ ನೀಡಲು ಸರ್ಕಾರ ಉತ್ಸುಕವಾಗಿದೆ ಎಂದು ತಿಳಿದುಬಂದಿದೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *