Get flat 10% off on Wonderla Entry Tickets | Use coupon code "BTWONDER".
Cubbon Park: ಕಬ್ಬನ್ ಪಾರ್ಕ್ ಗೆ ಹೋಗುವ ಜನರಿಗೆ ಶಬ್ದ ಮಾಲಿನ್ಯ ಸಮಸ್ಯೆ; ವಾಹನಗಳ ಸಂಚಾರ ನಿಷೇಧಿಸಲು ಒತ್ತಾಯ
Cubbon Park Noise Pollution: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಇದರಿಂದ ನಡೆದುಕೊಂಡು ಹೋಗುವವರಿಗೆ ಕಿರಿಕಿರಿಯಾಗುತ್ತಿದೆ. ಕೆಲಸದ ಒತ್ತಡದಲ್ಲಿರುವ ಜನರು ಉದ್ಯಾನವನಗಳಲ್ಲಿ ವಿಶ್ರಾಂತಿ ಪಡೆಯಲು ಸಹ ಸಾಧ್ಯವಾಗುತ್ತಿಲ್ಲ ಎಂದು ಕಬ್ಬನ್ ಪಾರ್ಕ್ಗೆ ತೆರಳಲು ಬರುವ ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಲಾಲ್ಬಾಗ್ನಲ್ಲಿಯೂ ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದೇ ರೀತಿ ಕಬ್ಬನ್ ಪಾರ್ಕ್ನಲ್ಲಿ ವಾಹನಗಳು. ಇದನ್ನು ನಿಷೇಧಿಸಬೇಕು ಎಂದು ಪಾದಯಾತ್ರೆಗೆ ಬರುವ ಜನರು ಅಭಿಪ್ರಾಯ ವ್ಯಕ್ತಪಡಿಸಿದರು.
Bengaluru: ಸಿಲಿಕಾನ್ ಸಿಟಿ ಬೆಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದೆ, ವಾಹನಗಳೂ ಹೆಚ್ಚಾಗುತ್ತಿವೆ, ಶಬ್ದ ಮಾಲಿನ್ಯವೂ ಹೆಚ್ಚುತ್ತಿದೆ, ಈ ನಡು ಹಸಿರು ಪರಿಸರದ ಸೊಬಗನ್ನು ಸವಿಯಲು ಜನರು ಕಬ್ಬನ್ ಪಾರ್ಕ್ ಅಥವಾ ಲಾಲ್ಬಾಗ್ಗೆ ಹೋಗಬೇಕಾಗಿದೆ, ಆದರೆ ಇತ್ತೀಚೆಗೆ ಕಬ್ಬನ್ ಉದ್ಯಾನವನದಲ್ಲಿ ಶಬ್ದ ಮಾಲಿನ್ಯವೂ ಹೆಚ್ಚುತ್ತಿದೆ. ಇದರಿಂದ ನಡೆದುಕೊಂಡು ಬರುವ ಜನರು ಬೇಸರದಿಂದ ಕಬ್ಬನ್ ಪಾರ್ಕ್ಗೆ ತೆರಳುತ್ತಾರೆ, ಅಧಿಕಾರಿಗಳು ಮಾತ್ರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಕಬ್ಬನ್ ಪಾರ್ಕ್ ನಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಇದರಿಂದ ಸಾಕಷ್ಟು ಶಬ್ದ ಮಾಲಿನ್ಯವಾಗುತ್ತಿದೆ. ಇದನ್ನು ತಡೆಯಲು ಸರಕಾರ ವಾಹನಗಳ ಸಂಚಾರವನ್ನು ರದ್ದುಪಡಿಸಬೇಕು ಇಲ್ಲವಾದಲ್ಲಿ ವಾಹನಗಳು ಸದ್ದು ಮಾಡದೆ ಸಂಚರಿಸಲು ಅನುವು ಮಾಡಿಕೊಡಬೇಕು ಎಂದು ಕಬ್ಬನ್ ಪಾರ್ಕ್ ನ ಸಂಘ ಒತ್ತಾಯಿಸಿದೆ.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆ ಶೇ. 82ರಷ್ಟು ಫಲಾನುಭವಿಗಳು ನಗದು ಬದಲು ಅಕ್ಕಿಗೆ ಬೇಡಿಕೆ,
ಸದ್ಯಕ್ಕೆ ನಗರದಲ್ಲಿ ಎರಡು ಪಾರ್ಕ್ಗಳಿದ್ದು, ಲಾಲ್ಬಾಗ್ನಲ್ಲಿ ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಮತ್ತು ಕಬ್ಬನ್ ಪಾರ್ಕ್ನಲ್ಲಿ ವಾಹನಗಳನ್ನು ನಿಷೇಧಿಸಬೇಕು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಅನುಮತಿಸಬೇಕು.
ತೋಟಗಾರಿಕೆ ಇಲಾಖೆ ಜಂಟಿ ಆಯುಕ್ತ ಜಗದೀಶ್ ಅವರನ್ನು ವಿಚಾರಣೆಗೊಳಪಡಿಸಿದ ಕಬ್ಬನ್ ಪಾರ್ಕ್ನಲ್ಲಿ ನಾಲ್ಕು ಕಡೆಯಿಂದ ವಾಹನಗಳು ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದು, ಕಬ್ಬನ್ ಪಾರ್ಕ್ನಲ್ಲಿ ಸಂಚರಿಸುವ ವಾಹನಗಳಿಗೆ ಹಾರ್ನ್ ಮಾಡಬಾರದು ಎಂಬ ನಿಯಮವನ್ನು ಜಾರಿಗೆ ತಂದಿದ್ದು, ತೋಟಗಾರಿಕೆ ಇಲಾಖೆಯೂ ನೋ ವಾಕಿಂಗ್ ಜೋನ್ ಅಂತ ತೋಟಗಾರಿಕೆ ಇಲಾಖೆಯೂ ನಿಯಮ ಮಾಡಿದ್ದು ಅಪ್ಪಿತಪ್ಪಿಯು ವಾಹನಗಳ ಹಾರ್ನ್ ಮಾಡುವ ಶಬ್ದವು ಕಂಡುಬಂದರೆ ಅದನ್ನು ತಡೆಯಲು ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ ಪ್ರಯಾಣಿಕರಿಗೆ ಸಂತಸದ ಸುದ್ದಿ 9 ಪ್ರಮುಖ ಕಾರಿಡಾರ್ ಮಾರ್ಗಗಳಲ್ಲಿ ಬರಲಿದೆ ಪ್ರತ್ಯೇಕ ಬಿಎಂಟಿಸಿ ಬಸ್ ಪಥ!
ಒಟ್ಟಿನಲ್ಲಿ ವಾಹನ ಸವಾರರು ಸಾರ್ವಜನಿಕರು ಸಹಕರಿಸಬೇಕು ಎಂದರು. ಒಟ್ಟಿನಲ್ಲಿ ಕಬ್ಬನ್ ಪಾರ್ಕ್ ಗೆ ವಾಯುವಿಹಾರಕ್ಕೆ ತೆರಳುವವರಿಗೆ ಕಿರಿಕಿರಿಯಾಗುತ್ತಿದ್ದು, ತೋಟಗಾರಿಕೆ ಇಲಾಖೆಯೂ ಜನರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಶಬ್ದ ಮಾಲಿನ್ಯ ತಪ್ಪಿಸಬೇಕಿದೆ.
Latest Trending
- ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ!, ಇಂದಿನ ಚಿನ್ನ & ಬೆಳ್ಳಿ ದರ ಹೇಗಿದೆ ನೋಡಿ!
- ಹೆಲ್ಮೆಟ್ ಧರಿಸದೆ ವಾಹನ ಚಾಲನೆ! ಸ್ಕೂಟಿ ಪೆಪ್ ಗೆ 3.22 ಲಕ್ಷ ರೂ ದಂಡ ವಿಧಿಸಿದ ಪೊಲೀಸರು
- ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿಗಳು ಬಿಡುಗಡೆ, ಇಲ್ಲಿವೆ ನೋಡಿ, ತಪ್ಪದೆ ಓದಿ!
Follow us on Instagram Bangalore Today