Beladakuppe Fair: ಮೈಸೂರಿನ ಕಾಡಂಚಿನ ಭಾಗ ಬೆಲದಕುಪ್ಪೆಯಲ್ಲಿ ಡಿ. 11 ರಿಂದ ಜಾತ್ರಾಮಹೋತ್ಸವ

Beladakuppe Fair: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಸರಗೂರು ತಾಲೂಕಿನ ಬೆಲೆದ ಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯ ಜಾತ್ರೆಯನ್ನು ಅರಣ್ಯದ ಕೋರ್ ವಲಯದ ಹೊರಗಡೆ ಸ್ಥಳಾಂತರಿಸಬೇಕೆಂದು ಶಿಫಾರಸ್ಸು ಮಾಡಿತು ಆದರೆ ಜಿಲ್ಲಾಡಳಿತ ಈ ವರ್ಷವೂ ಅರಣ್ಯದೊಳಗೆ 30 ಲಕ್ಷ ವೆಚ್ಚದಲ್ಲಿ ಜಾತ್ರೆ ನಡೆಸಲು ಮುಂದಾಗಿದೆ ಇದರಿಂದಾಗಿ ಪರಿಸರವಾದಿಗಳಿಂದ ಆಕ್ಷೇಪ ವ್ಯಕ್ತವಾಗಿದೆ.

Beladakuppe Fair

ಈ ದೇವಾಲಯವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವಲಯದಲ್ಲಿ ಬರಲಿದ್ದು, ಸರಗೂರು ತಾಲೂಕಿನ ಕಂದಲಿಕೆ ಹೋಬಳಿಯ ಆಳಲ ಹಳ್ಳಿ, ಚೆಕ್ಪೋಸ್ಟ್ ನಿಂದ 6 ಕಿ.ಮೀ ಕಾಡಿನ ಒಳಗಡೆ ಇದೆ, ದೇವಾಲಯದಲ್ಲಿ ಉದ್ಭವ ಲಿಂಗವಿದ್ದು ಪ್ರತಿ ವರ್ಷ ಜಾತ್ರೆ ನಡೆಯುತ್ತದೆ ದರ್ಶನಕ್ಕೆ ಭಕ್ತರು ವರ್ಷವಿಡೀ ಕಾಡಿನೊಳಗೆ ಬರುತ್ತಾರೆ ಕಡೇ ಕಾರ್ತಿಕ ಸೋಮವಾರ ಡಿಸೆಂಬರ್ 11ರಂದು ಜಾತ್ರೆಯು ನಡೆಯಲಿದ್ದು ಎತ್ತಿನ ಗಾಡಿಗಳಲ್ಲಿ ಹಾಗೂ ದ್ವಿಚಕ್ರ ವಾಹನ ಹಾಗೂ ಸಾರ್ವಜನಿಕ ಸಾರಿಗೆಯ ಮೂಲಕ ನಾಲ್ಕು ಲಕ್ಷ ಜನರು ಬರುವ ನಿರೀಕ್ಷೆ ಇದೆ. ಹಾಗಾಗೀ ಜಾತ್ರೆಗೆ ಬರುವ ಭಕ್ತರನ್ನು ನಿಯಂತ್ರಿಸುವುದು ಇಲಾಖೆಗೆ ಸವಾಲಾಗಿದೆ.

ಇದನ್ನೂ ಓದಿ: ಕಳೆದ 5 ವರ್ಷಗಳಲ್ಲಿ ಕರ್ನಾಟಕದಲ್ಲಿ ಶಾಲೆ ತೊರೆದ ಮಕ್ಕಳ ಸಂಖ್ಯೆ ಎಷ್ಟು ಗೊತ್ತ ಇಲ್ಲಿದೆ ಮಾಹಿತಿ!

ಕಾಡು ಪ್ರದೇಶಕ್ಕೆ ಸೇರಿದ ಪರಿಸರ ಸೂಕ್ಷ್ಮ ವಲಯದಲ್ಲಿರುವ ದೇವಾಲಯದ ಅಭಿವೃದ್ಧಿಗೋಸ್ಕರ ಹಾಗೂ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿರುವ ಜಿಲ್ಲಾಡಳಿತವು ಡಿಸೆಂಬರ್ 4ರಂದು ಆದೇಶ ಹೊರಡಿಸಿದೆ ಜಾತ್ರೆಗೆ ಮಾಡಬೇಕಾದ ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎನ್ನುತ್ತಾರೆ.

ಆದರೆ ಪರಿಸರವಾದಿ ಗಿರಿಧರ ಕುಲಕರ್ಣಿ ಅವರು ಜಾತ್ರೆಯನ್ನು ಪರಿಸರ ವಲಯದಲ್ಲಿ ನಿರ್ಬಂಧಿಸಿ ಸ್ಥಳಾಂತರಿಸುವಂತೆ ಅರ್ಜಿ ಸಲ್ಲಿಸಿದರು ಈ ಮನವಿ ಆಧಾರದ ಮೇಲೆ ಕಳೆದ ತಿಂಗಳು ಸ್ಥಳದ ಪರಿಶೀಲನೆ ನಡೆಸಿದ್ದ ಎನ್‌ಟಿಸಿಎ ಯ ಸಹಾಯಕ ಐಜಿಎಫ್ ಹರಿಣಿ ವೇಣುಗೋಪಾಲ್ ನವಂಬರ್ 1, 2 ರಂದು ಭೇಟಿ ನೀಡಿ ಎನ್‌ಟಿಸಿಎ ಪ್ರಾಧಿಕಾರಕ್ಕೆ 17vರಂದು ವರದಿ ನೀಡಿದ್ದರು ಜಾತ್ರೆಯನ್ನು ಪರಿಸರ ಸೂಕ್ಷ್ಮ ವಲಯದಲ್ಲಿ ನಿರ್ವಹಿಸಿ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವುದಕ್ಕೆ ವರದಿಯಲ್ಲಿ ತಿಳಿಸಿದರು.

ಇದನ್ನೂ ಓದಿ: 7 ವರ್ಷದ ವಿದ್ಯಾರ್ಥಿ ಮೇಲೆ ಶಿಕ್ಷಕಿಯಿಂದ ಹಲ್ಲೆ ಪರಿಣಾಮ ಕೈಗೆ ಆರು ಹೊಲಿಗೆ: ಕಾರಣವೇನು? ಇಲ್ಲಿದೆ ನೋಡಿ!

ಇದೀಗ ಜಿಲ್ಲಾಡಳಿತ ಅರಣ್ಯದೊಳಗೆ ಜಾತ್ರೆಯನ್ನು ನಡೆಸಲು ಸಿದ್ದತೆಯನ್ನು ಮಾಡಿಕೊಂಡಿದೆ, ದೇವಸ್ಥಾನದ ಶೀಟ್ ಅಳವಡಿಕೆಗೆ 2.47 ಲಕ್ಷ ರೂ ರಸ್ತೆಯನ್ನು ಸಮತಟ್ಟು ಮಾಡಲು 2.81 ಲಕ್ಷ ರೂ ದೇವಸ್ಥಾನದ ಸುಣ್ಣ ಬಣ್ಣಕ್ಕೆ4.10 ಲಕ್ಷ ರೂ ತಾತ್ಕಾಲಿಕ ಶೌಚಾಲಯ ಟೆಂಟ್ ಹೌಸ್ ನಿರ್ಮಾಣ ಸೋಲಾರ್ ಲೈಟ್ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ 18.20 ಲಕ್ಷ ಕುಡಿಯುವ ನೀರಿಗೆ 2.20 ಲಕ್ಷ ರೂ ಜಾನುವಾರುಗಳ ಮೇವಿಗೆ 13,500 ಸಾವಿರ ಹಾಗೂ ಕುಡಿಯುವ ನೀರಿಗೆ ೧೨ ಸಾವಿರ ಹಣವನ್ನು ಹಂಚಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ .

ಹಾಗೂ ಕಾಮಗಾರಿಗೆ ಕೆ ಆರ್ ನಗರದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ನಿರ್ಮಿತಿ ಕೇಂದ್ರ ಹೆಚ್‍ಡಿ ಕೋಟೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಪಶು ಪಾಲನಾ ಇಲಾಖೆಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ಗಿರಿಧರ ಕುಲಕರ್ಣಿ ಹೇಳಿಕೆ ನೀಡಿದ್ದಾರೆ.

Latest Trending

Follow us on Instagram Bangalore Today Bangalore Today

Bhagirathi H P
Bhagirathi H P
Articles: 46

Leave a Reply

Your email address will not be published. Required fields are marked *