Bangalore: ಬಣ್ಣ ಬೆರೆಸುವ ಪೇಂಟ್ ಮಿಕ್ಸರ್​ಗೆ ಸಿಲುಕಿ ಮಹಿಳೆ ಸಾವು

Bangalore: ಬೆಂಗಳೂರಿನ ನೆಲಗದರನಹಳ್ಳಿಯ ಶ್ರೀ ಪೇಂಟ್ಸ್ ಕಾರ್ಖಾನೆಯಲ್ಲಿ ಪೇಂಟಿಂಗ್ ಮಿಕ್ಸರ್ ಗೆ ಸಿಲುಕಿ 33 ವರ್ಷದ ಶ್ವೇತಾ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ, ಈ ಕುರಿತು ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bangalore

ಮಲ್ಲತಹಳ್ಳಿಯಲ್ಲಿ ವಾಸವಿದ್ದ ಶ್ವೇತಾ ಎಂಬ ಮಹಿಳೆ ಪೇಂಟ್ ಮಿಕ್ಸರ್ ಪೇಂಟ್ ಮಿಕ್ಸರ್ ಗೆ ಸಿಲುಕಿ, ನಿನ್ನೆ ಶ್ರೀ ಪೇಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಪೇಂಟ್ ಮಿಕ್ಸಿಂಗ್ ಗ್ರೈಂಡರ್ ಗೆ ಸಿಲುಕಿ ಶ್ವೇತಾ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ; ದೀಪಾವಳಿ ಪ್ರಯುಕ್ತ ಉದ್ಯೋಗಿಗಳಿಗೆ ಉಚಿತ ಕಾರು ಕೊಡುಗೆ

ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದ ಶ್ವೇತ ಬಣ್ಣ ಗಟ್ಟಿಯಾಗುತ್ತಿದೆ ಎಂದು ಚೆಕ್ ಮಾಡಲು ಗ್ರೈಂಡರ್ ಒಳಗೆ ನೋಡಿದ ಪರಿಣಾಮ ಅವರ ಜಡೆ ಗ್ರೈಂಡರ್ ಒಳಗೆ ಸಿಲುಕಿದೆ, ಗ್ರೈಂಡರ್ ನಿಂದ ಬಂದ ಹೆಚ್ಚುವರಿ ಸದ್ದಿನಿಂದಾಗಿ ಆತ ಏನು ಕೂಗುತ್ತಿದ್ದನೆಂದು ಯಾರಿಗೂ ಗೊತ್ತಾಗಲಿಲ್ಲ. ಹೀಗಾಗಿ ಕೆಲ ಸಮಯದ ನಂತರ ಕಾರ್ಮಿಕರು ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕಾರ್ಮಿಕರು ಪೊಲೀಸರಿಗೆ ಮಾಹಿತಿ ರವಾನಿಸಿದ್ದು, ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

33 ವರ್ಷದ ಶ್ವೇತಾ ಮೃತ ದುರ್ದೈವಿ. ಮಲ್ಲತ್ತಹಳ್ಳಿಯಲ್ಲಿ ವಾಸವಿದ್ದ ಶ್ವೇತಾ ಬೆಂಗಳೂರಿನ ನೆಲಗದರನಹಳ್ಳಿಯ ಶ್ರೀಪೇಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ, ನಿನ್ನೆ ಕಲರ್ ಮಿಕ್ಸಿಂಗ್ ಗ್ರೈಂಡರ್ ಗೆ ಬಿದ್ದ ಪರಿಣಾಮ ಶ್ವೇತಾ ತಲೆ ತುಂಡಾಗಿತ್ತು. ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾಳೆ.

Latest Trending

Follow us on Instagram Bangalore Today

Bhagirathi H P
Bhagirathi H P
Articles: 45

Leave a Reply

Your email address will not be published. Required fields are marked *