Get flat 10% off on Wonderla Entry Tickets | Use coupon code "BTWONDER".
Koppala: ಕೊಪ್ಪಳದ ಈ ಭಾಗದ ರೈತರಿಗೆ ಮಳೆರಾಯನ ಭಯ ಏಕೆ?
Koppala: ಈ ಬಾರಿ ರಾಜ್ಯದ ಜನತೆ ಮಳೆಯ ಕೃಪೆಯಿಂದ ವಂಚಿತವಾಗಿದ್ದು, ಇರುವ ಅಲ್ಪಸ್ವಲ್ಪ ಜಲ ಸಂಪನ್ಮೂಲದಲ್ಲಿ ಭತ್ತ ಬೆಳೆಯಲು ಕೊಪ್ಪಳದ ಗಂಗಾವತಿ ಭಾಗದ ರೈತರು ನಿರ್ಧರಿಸಿದರು, ಅದರಂತೆ ಇದೀಗ ಇನ್ನೇನು ಬೆಳೆ ಕಟಾವಿನ ಹಂತಕ್ಕೆ ಬಂದಿದ್ದು ಈ ಭಾಗದ ರೈತರಿಗೆ ಇದೀಗ ಮಳೆಯ ಭಯ ಆವರಿಸಿದೆ.
ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಮಳೆಯ ವಾತಾವರಣ ಸೃಷ್ಟಿಯಾಗಿದ್ದು ಹಲವು ಕಡೇ ಉತ್ತಮ ಮಳೆಯಾಗಿದೆ ಹಾಗಾಗಿ ಇದೀಗ ಗಂಗಾವತಿ ಭಾಗದ ರೈತರು ಮಳೆಯಿಂದ ತಮ್ಮ ಬೆಳೆ ನಾಶವಾಗುವ ಆತಂಕಕ್ಕೆ ಒಳಗಾಗಿದ್ದಾರೆ, ಹಾಗಾಗಿ ಭತ್ತ ಬೆಳೆದ ರೈತರ ಸಧ್ಯದ ಪರಿಸ್ಥಿತಿ ”ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ” ಎಂಬಂತೆ ಆಗಿದೆ.
Koppala, November, 09: ಮಳೆರಾಯನ ಅಬ್ಬರದಿಂದ ಬೆಳೆಯ ನಾಶವಾಗುವ ಭೀತಿಯನ್ನು ಎದುರಿಸುತ್ತಿರುವಂತಹ ಕೊಪ್ಪಳದ ಗಂಗಾವತಿ ಭಾಗದ ರೈತರು ಮತ್ತೊಂದು ಆತಂಕಕ್ಕೆ ಒಳಗಾಗಿದ್ದಾರೆ, ಭಾರಿ ಮಳೆಯಿಂದಾಗಿ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ, ಹಾಗಾಗಿ ಸೂಕ್ತ ಸಮಯದಲ್ಲಿ ಬಾರದ ಮಳೆಯೂ ಇದೀಗ ಅಬ್ಬರಿಸುವುದರ ಮೂಲಕ ಬೆಳೆಯನ್ನು ನಾಶ ಉಂಟಾಗುವ ಭೀತಿಯನ್ನು ಈ ಭಾಗದ ರೈತರು ಎದುರಿಸುತ್ತಿದ್ದಾರೆ.
ಇದನ್ನೂ ಓದಿ; ಚುನಾವಣಾ ರಾಜಕೀಯಕ್ಕೆ ಸದಾನಂದ ಗೌಡ ನಿವೃತ್ತಿ,
ಮುಂಗಾರು ಬೆಳೆಯು ರಾಜ್ಯದಲ್ಲಿ ಸರಿಯಾದ ಪ್ರಮಾಣದಲ್ಲಿ ಬಾರದ ಕಾರಣ ರೈತರು ಸಂಕಷ್ಟಕ್ಕೆ ಎದುರಾಗಿದ್ದರು,.ಇದರ ಬೆನ್ನೆಲೆ ನೀರಿನ ಕೊರತೆಯಲ್ಲಿಯೂ ಸಹ ರಾಜ್ಯದ ಹಲವೆಡೆ ಭತ್ತವನ್ನು ಬೆಳೆಯಲಾಗಿದೆ ಅವುಗಳ ಪೈಕಿ ಕೊಪ್ಪಳದ ಗಂಗಾವತಿ ಭಾಗದ ರೈತರು ಸಹ ಭತ್ತ ಬೆಳೆಯನ್ನು ಬೆಳೆದಿದ್ದಾರೆ,
ಆದರೆ ಇದೀಗ ರಾಜ್ಯಕ್ಕೆ ಆವರಿಸಿರುವ ಮಳೆಯ ವಾತಾವರಣವು ಇವರಿಗೆ ಸಂಕಷ್ಟಕ್ಕೆ ಎಡೆ ಮಾಡಿದೆ, ಇನ್ನೇನು ಬೆಳೆಯು ಕಟಾವು ಹಂತಕ್ಕೆ ತಲುಪಿದ್ದು, ಈಗಾಗಲೇ ರಾಜ್ಯದ ಹಲವೆಡೆ ಈ ಸಮಯದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ, ಇದೀಗ ಮಳೆರಾಯ ಗಂಗಾವತಿ ಭಾಗಕ್ಕೂ ಅಬ್ಬರಿಸುವ ಸಾಧ್ಯತೆ ಹೆಚ್ಚಾಗಿದೆ, ಇದರಿಂದ ಬೆಳೆ ನಷ್ಟವಾದರೆ ರೈತರು ತೀವ್ರ ನಷ್ಟಕ್ಕೆ ಒಳಗಾಗುವುದು ಮಾತ್ರ ಖಂಡಿತ.
ಇದನ್ನೂ ಓದಿ; ಮೆಟ್ರೋ ಕಾಮಗಾರಿ ಆಮೆ ವೇಗ 2024 ರ ವೇಳೆಗೆ ಮತ್ತಷ್ಟು ಟ್ರಾಫಿಕ್ ಹೆಚ್ಚಳ!
ಬೆಳೆಯು ಕಟಾವು ಹಂತಕ್ಕೆ!
ತುಂಗಭದ್ರ ಜಲಾಶಯದ ಕಾಲುವೆಯ ನೀರು ಬಳಸಿ ಮತ್ತೆ ನಾಟಿ ಮಾಡಿದಾಗ ಗಂಗಾವತಿ ಭಾಗದ ರೈತರು ಪ್ರತಿ ವರ್ಷದಂತೆ ಈ ಬಾರಿಯೂ ಮುಂಗಾರು ಮಳೆಯಿಂದಾಗಿ ಬೆಳೆ ನಾಶವಾಗುವ ಆತಂಕವನ್ನು ಎದುರಿಸುತ್ತಿದ್ದಾರೆ, ಇದಕ್ಕೂ ಮೊದಲು ಕಳೆದ 4-5 ತಿಂಗಳಿನಿಂದ ಮಳೆಯೂ ಸೂಕ್ತ ಸಮಯಕ್ಕೆ ಬಾರದೆ ಬೆಳೆ ಕಡಿಮೆಯಾಗಿದ್ದು, ಇದೀಗ ಬೆಳೆ ಕಟಾವಿನ ಸಂದರ್ಭದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದ್ದು ರೈತರು ಕಂಗಾಲಾಗಿದ್ದಾರೆ.
Latest Trending
- ಮಿಂಚಿನ ಧೃವತಾರೆ ಶಂಕರ್ ನಾಗ್
- ಗೃಹಲಕ್ಷ್ಮಿ ಯೋಜನೆ 8 ಲಕ್ಷ ಮಹಿಳಾ ಖಾತೆಗಳಿಗೆ 15 ದಿನಗಳಲ್ಲಿ ಜಮೆ
- ವಾಹನ ಖರೀದಿಗೆ ಸರ್ಕಾರದಿಂದ 4 ಲಕ್ಷದವರೆಗೆ ಸಬ್ಸಿಡಿ
- 7೦ ಸಾವಿರ ಕೊಹ್ಲಿ ಮುಖವಾಡ ಹಂಚಿಕೆ, ಇಂದು ಮೈದಾನ ಕೊಹ್ಲಿ ಮಯಾ.
- ದೀಪಾವಳಿ ಪ್ರಯುಕ್ತ ಉದ್ಯೋಗಿಗಳಿಗೆ ಉಚಿತ ಕಾರು ಕೊಡುಗೆ
Follow us on Instagram Bangalore Today