Namma Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಟಿಕೆಟ್ ಖರೀದಿ ಸಮಸ್ಯೆಗೆ ಹೇಳಿ ಗುಡ್ ಬೈ

Namma Metro: ಬೆಂಗಳೂರಿನ ಸಾರಿಗೆಯ ಜೀವನಾಡಿಯಾಗಿರುವ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರತಿ ಮೆಟ್ರೋ ನಿಲ್ದಾಣದ ಟಿಕೆಟ್ ಕೌಂಟರ್ ನಲ್ಲಿ ಟಿಕೆಟ್ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಇದೀಗ ಸರದಿ ನಿಲ್ಲುವುದನ್ನು ತಪ್ಪಿಸಲು ಮತ್ತು ಜನದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಬಿಎಂಆರ್‌ಸಿಎಲ್ ನಿಂದ ಪ್ರಯಾಣಿಕರಿಗೆ ಹೊಸ ಸೌಲಭ್ಯವನ್ನು ಕಲ್ಪಿಸಲಾಗಿದೆ. ನೀವು ನವೆಂಬರ್ 14 ರಿಂದ ಈ ಹೊಸ ಸೇವೆಯನ್ನು ಪಡೆಯಬಹುದು, ಈ ಒಂದು ಸೇವೆಯ ಪ್ರಯೋಜನವನ್ನು ನವೆಂಬರ್ 16 ರಿಂದ  ಪಡೆಯಬಹುದಾಗಿದೆ.

Namma Metro

Bangalore, November 11; ನಗರದಲ್ಲಿ ಉತ್ತಮ ಮೆಟ್ರೋ ಸೇವೆ ನೀಡುತ್ತಿರುವ ನಮ್ಮ ಮೆಟ್ರೋ, ಟಿಕೆಟ್ ಬುಕಿಂಗ್ ಕೌಂಟರ್ ನಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಬಿಎಂಆರ್ಸಿಎಲ್ ಮುಂದಾಗಿದ್ದು ಇದೀಗ ಮೊಬೈಲ್ ಟಿಕೆಟ್ ಸೇವೆಯನ್ನು ಜಾರಿಗೆ ತರಲಿದೆ ಇದರಿಂದ ಸುಲಭವಾಗಿ ಮೊಬೈಲ್ನ ಮುಖಾಂತರ ಮೆಟ್ರೋ ಟಿಕೆಟ್ ಅನ್ನು ಬುಕಿಂಗ್ ಮಾಡಬಹುದಾಗಿದೆ.

ಇದನ್ನೂ ಓದಿ; ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ

ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಬಯಸುವ ಪ್ರಯಾಣಿಕರು ತಮ್ಮ ಸ್ಥಳದಿಂದ ಮುಂಗಡವಾಗಿ ಮೊಬೈಲ್ ಕ್ಯೂಆರ್ ಟಿಕೆಟ್ ಪಡೆಯಬಹುದು ಮತ್ತು ಟಿಕೆಟ್ ದರದಲ್ಲಿಶೇ. 5 ರಷ್ಟು ರಿಯಾಯಿತಿಯನ್ನು ಪಡೆಯಬಹುದು, ಗರಿಷ್ಠ ಆರು ಜನರು ಈ ಒಂದು ಟಿಕೆಟ್ ಮೂಲಕ ಪ್ರಯಾಣಿಸಬಹುದು ಇದರಿಂದ ಟಿಕೆಟ್ ಕೌಂಟರ್ ಮುಂದೆ ನಿಲ್ಲುವ ಸಮಯ ಉಳಿತಾಯವಾಗಲಿದೆ.

ಪ್ರಯಾಣಿಕರ ಸಂಖ್ಯೆಯನ್ನು ಎನ್‌ಕ್ರಿಪ್ಟ್ ಮಾಡಿದ ನಂತರ ನೀವು ಕ್ಯೂಆರ್ ಟಿಕೆಟ್ ಪಡೆಯುತ್ತೀರಿ. ಅದೇ ಟಿಕೆಟ್ ಅನ್ನು ಎಫ್‌ಸಿ ಗೇಟ್‌ನಲ್ಲಿ 6 ಬಾರಿ ಸ್ಕ್ಯಾನ್ ಮಾಡಲು ಅನುಮತಿಸಲಾಗಿದೆ. ಆಗಮನ ಮತ್ತು ನಿರ್ಗಮನ ದ್ವಾರಗಳಲ್ಲಿ ಸ್ಕ್ಯಾನಿಂಗ್ ಸೌಲಭ್ಯವೂ ಇರುತ್ತದೆ. ಈ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿದೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *