Namma Metro: ಮೆಟ್ರೋ ಪ್ರಯಾಣಿಕರೇ ಎಚ್ಚರ, ಕೋವಿಡ್‌ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಈ 10 ಅಂಶಗಳನ್ನು ಅನುಸರಿಸಿ

Namma Metro Covid Guideline for Passengers: ಡಿಸೆಂಬರ್ 19 ರಂದು ಒಂದೇ ದಿನದಲ್ಲಿ ರಾಜ್ಯದಲ್ಲಿ 79 ಕೋವಿಡ್ ಪ್ರಕರಣಗಳು ವರದಿಯಾಗುವುದರೊಂದಿಗೆ ಸಾಂಕ್ರಾಮಿಕ ಕೋವಿಡ್ -19 ಮತ್ತೆ ದೇಶವನ್ನು ಅಪ್ಪಳಿಸಿದೆ, ಆದ್ದರಿಂದ ರಾಜ್ಯ ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯಗೊಳಿಸುವುದು ಸೇರಿದಂತೆ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.

ಆದರೆ, ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು ಯಾವುದೇ ಕಟ್ಟುನಿಟ್ಟಿನ ಕ್ರಮಗಳನ್ನು ಅಥವಾ ಮಾರ್ಗಸೂಚಿಯನ್ನು ಜಾರಿಗೆ ತಂದಿಲ್ಲ ಆದರೆ ನಗರದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದ್ದು ಈ ಸಂದರ್ಭದಲ್ಲಿ ಕೋವಿಡ್ ಹೆಚ್ಚಾಗಿರುತ್ತದೆ ಹಾಗಾಗಿ ಮೆಟ್ರೋ ಪ್ರಾಣಿಕರು ಸ್ವಯಂ ಪ್ರೇರಿತವಾಗಿ ತಮ್ಮ ರಕ್ಷಣೆಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.

Namma Metro Covid Guideline for Passengers

Bangalore, Dec 20: ಭಾರತದಲ್ಲಿ ಕೊರೋನಾ ಹೊಸ ರೂಪಾಂತರ ಮತ್ತೆ ಲಗ್ಗೆ ಇಟ್ಟಿದ್ದು ದಿನನಿತ್ಯದ ಪ್ರಕರಣಗಳು ದೇಶದಲ್ಲಿ ದಿಡೀರ್ ಏರಿಕೆಯನ್ನು ಕಾಣುತ್ತಿದೆ ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿವೆ ಆದರೆ ನಗರದಲ್ಲಿ ಅತಿ ಹೆಚ್ಚು ಜನರು ಸೇರುವಂತಹ ಬೆಂಗಳೂರಿನ ನಮ್ಮ ಮೆಟ್ರೋ ಹಾಗೂ ಇನ್ನಿತರೆ ಸಾರ್ವಜನಿಕ ಸಾರಿಗೆಗಳಲ್ಲಿ ಸರ್ಕಾರ ಇಲ್ಲಿಯವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

ಇದನ್ನೂ ಓದಿ: ಕ್ರಿಸ್‌ಮಸ್‌ ಪ್ರಯುಕ್ತ ಕೆಎಸ್‌ಆರ್‌ಟಿಸಿ ಹೆಚ್ಚುವರಿ 1 ಸಾವಿರ ವಿಶೇಷ ಬಸ್‌ಗಳನ್ನು ಓಡಿಸಲಿದೆ, ಎಲ್ಲಿಗೆ ಮತ್ತು ಯಾವಾಗ?

ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಸೋಂಕು ತಗಲಿದ ಮೇಲೆ ಚಿಕಿತ್ಸೆಗಾಗಿ ಪರದಾಡುವ ಸಂಕಷ್ಟವನ್ನು ಎದುರಿಸುವುದಕ್ಕಿಂತ ನಮ್ಮ ಮೆಟ್ರೋ ಹಾಗೂ ಇತರೆ ಸಾರ್ವಜನಿಕ ಸಾರಿಗೆ ಪ್ರಯಾಣಿಕರು ತಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳುವುದು ತೀರ ಅತ್ಯವಶ್ಯಕವಾಗಿದೆ, ಏಕೆಂದರೆ ಹೆಚ್ಚಿನ ಜನರು ಸೇರುವ ಪ್ರದೇಶಗಳಲ್ಲಿ ಪ್ರಯಾಣಿಕರು ಮುಂಜಾಗ್ರತ ಕ್ರಮವಾಗಿ ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಮೊದಲ ಮದ್ದು ಎಂದು ವಿಶ್ವಾಸ ಸಂಸ್ಥೆ ಹೇಳಿದೆ.

ಮೆಟ್ರೋ ಪ್ರಯಾಣಿಕರು ಮಹಾಮಾರಿ ಕೋವಿಡ್ ಸೋಂಕಿನಿಂದ ರಕ್ಷಣೆಗೆ ಈ 10 ಪ್ರಮುಖ ಅಂಶಗಳನ್ನು ಪಾಲಿಸಿ!

  • ಮೆಟ್ರೋ ನಿಲ್ದಾಣ ಹಾಗೂ ಹೆಚ್ಚಿನ ಜನಸಂದಣಿ ಇರುವ ಸ್ಥಳಗಳಿಗೆ ಪ್ರವೇಶ ನೀಡುವ ಮೊದಲು ಮಾಸ್ ಕಡ್ಡಾಯವಾಗಿ ಧರಿಸಿ.
  • ಸಾಧ್ಯವಾದಷ್ಟು ಜೊತೆಗೆ ಪ್ರಯಾಣಿಸುವ ಪ್ರಯಾಣಿಕರಿಂದ ಅಂತರವನ್ನು ಕಾಯ್ದುಕೊಳ್ಳಿ.
  • ಹಣ ವರ್ಗಾವಣೆಗೆ ಸಾಧ್ಯವಾದಷ್ಟು ಸಂಪರ್ಕ ರಹಿತ ಡಿಜಿಟಲ್ ಪೇಮೆಂಟ್ ವಿಧಾನವನ್ನು ಬಳಸಿ.
  • ಪ್ರಯಾಣ ಮುಗಿಸಿ ಮನೆಗೆ ತಿಳಿದ ಮೇಲೆ ಕೂಡಲೇ ಕೈ ತೊಳೆಯುವುದು ಸ್ಥಾನ ಮಾಡುವುದು ಹಾಗೂ ಸ್ಯಾನಿಟೈಸರ್ ಬಳಸುವುದು ಉತ್ತಮವಾಗಿರುತ್ತದೆ.
  • ಬೆಂಗಳೂರು ಮೆಟ್ರೋ ಕಾಯಿನ್ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆ ಆಗುತ್ತದೆ ಇದರಿಂದ ಸಾಧ್ಯವಾದಷ್ಟು ಸ್ಮಾರ್ಟ್ ಕಾರ್ಡ್ ಅಥವಾ ಮೊಬೈಲ್ ಕ್ಯೂಆರ್ ಕೋಡ್ ಬಳಸಿ ಪ್ರಯಾಣವನ್ನು ಬೆಳೆಸಿ.
  • ಸೋಂಕಿನ ಲಕ್ಷಣ ಅಥವಾ ಆರೋಗ್ಯದ ಸಮಸ್ಯೆ ಇದ್ದರೆ ಮೆಟ್ರೋ ಬಳಸಬೇಡಿ ಏಕೆಂದರೆ ಮತ್ತೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
  • ಪ್ರಮುಖವಾಗಿ ರೋಗನಿರೋಧಕ ಶಕ್ತಿ ಕಡಿಮೆ ಉಳ್ಳವರು ಬಾಣಂತಿಯರು ಹಾಗೂ ದೀರ್ಘಕಾಲದಿಂದ ಅನಾರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವವರು ಸ್ವಲ್ಪ ದಿನಗಳವರೆಗೆ ಮೆಟ್ರೋ ಪ್ರಯಾಣ ಮಾಡೋದಿರುವುದು ಉತ್ತಮ.
  • ಮೆಟ್ರೋ ನಿಲ್ದಾಣದಲ್ಲಿ ಅಥವಾ ರೈಲಿನಲ್ಲಿ ಅನಗತ್ಯವಾಗಿ ಗಾಜು, ಕಿಟಕಿ ಹಾಗೂ ಮುಂತಾದ ಇತರೆ ಸ್ಥಳಗಳಲ್ಲಿ ಮುಟ್ಟಬೇಡಿ.
  • ಮೆಟ್ರೋ ಟಿಕೆಟ್ ಪಡೆಯುವಾಗ ರೈಲು ಹತ್ತುವಾಗ ಕ್ಯೂನಲ್ಲಿ ನಿಂತಿದ್ದರೆ ಮಾಸ್ ಧರಿಸಿ ಹಾಗೂ ನಿರ್ದಿಷ್ಟ ಅಂತರವನ್ನು ಕಾಪಾಡಿಕೊಳ್ಳಿ.
  • ಮೆಟ್ರೋ ಪ್ರಯಾಣಿಕರ ಸಂಕೇತೀರ ಹೆಚ್ಚು ಕಂಡು ಬಂದಲ್ಲಿ ಆ ರೈನಿನಲ್ಲಿ ಸಾಧ್ಯವಾದಷ್ಟು ಪ್ರಯಾಣವನ್ನು ನಿಷೇಧಿಸಿ.

ಇದನ್ನೂ ಓದಿ: ಬೆಂಗಳೂರಿನಲ್ಲಿ 754.74 ಕೋಟಿ ವೆಚ್ಚದಲ್ಲಿ ರಸ್ತೆ ವೈಟ್ ಟಾಪಿಂಗ್ ಕಾಮಗಾರಿಗೆ ಬಿಬಿಎಂಪಿ ಸಿದ್ಧತೆ ನಡೆಸಿದೆ

ಕೇವಲ ಮೆಟ್ರೋಗಳಲ್ಲಿ ಮಾತ್ರವಲ್ಲದೇ ಸಾರ್ವಜನಿಕ ಸ್ಥಳಗಳು ಹಾಗೂ ಆಸ್ಪತ್ರೆ ವ್ಯಾಪ್ತಿಗಳಲ್ಲಿ ಮತ್ತು ಇನ್ನಿತರೆ ಸ್ಥಳಗಳಲ್ಲಿ ಸಾಧ್ಯವಾದಷ್ಟು ಜನದಟ್ಟಣೆ ಯಿಂದ ದೂರ ಉಳಿಯುವುದು ಹಾಗೂ ಮಾಸ್ಕ್ ಧರಿಸುವುದು ಹಾಗೂ ಜ್ವರ, ಕೆಮ್ಮು, ನಗಡಿ, ಶೀತ,ಉಸಿರಾಟದ ಸಮಸ್ಯೆ  ಸಂಬಂಧಿತ ತೊಂದರೆಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಸಲಹೆ ಪಡೆಯುವುದು ಹೀಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಅವಶ್ಯಕವಾಗಿದೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *