Get flat 10% off on Wonderla Entry Tickets | Use coupon code "BTWONDER".
Karnataka PUC Board Exam 2024 Date: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಬಿಡುಗಡೆ; ಮಾರ್ಚ್ 01 ರಿಂದ ಪರೀಕ್ಷೆ ಆರಂಭ
Karnataka PUC Board Exam 2024 Date: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಸ್ಕೂಲ್ ಎಕ್ಸಾಮಿನೇಷನ್ ಅಂಡ್ ಅಸೆಸ್ಮೆಂಟ್ ಬೋರ್ಡ್ ಬಿಡುಗಡೆ ಮಾಡಲಾಗಿದ್ದು 2024ರ ಮಾರ್ಚ್ ತಿಂಗಳಲ್ಲಿ ಈ ಪರೀಕ್ಷೆಯು ಪ್ರಾರಂಭವಾಗಲಿದೆ, ಇವರ ವೆಬ್ಸೈಟ್ನಲ್ಲಿ ಅಧಿಕೃತ ವೇಳಾಪಟ್ಟಿಯನ್ನು ನೀವು ನೋಡಬಹುದಾಗಿದೆ.
Bangalore: 2023 – 24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಅಧಿಕೃತವಾಗಿಯೇ ಇದೀಗ ಬಿಡುಗಡೆ ಮಾಡಿದೆ ಹಾಗೂ ಈ ಪರೀಕ್ಷೆಯು ಮಾರ್ಚ್ 1 ರಿಂದ 22 ರವರಿಗೆ ನಡೆಯಲಿದ್ದು ವಿದ್ಯಾರ್ಥಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಉತ್ತಮ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ವಿಷಯವಾರು ಈ ಕೆಳಗಿನಂತಿದೆ.
ಪರೀಕ್ಷೆ ವಿಷಯಗಳು | ಪರೀಕ್ಷೆ ದಿನಾಂಕ |
ಕನ್ನಡ, ಅರೇಬಿಕ್ | 01-03-2024 |
ಗಣಿತ, ಶಿಕ್ಷಣಶಾಸ್ತ್ರ | 04-03-2024 |
ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ | 05-03-2024 |
ಮಾಹಿತಿ ತಂತ್ರಜ್ಞಾನ, ಹೆಲ್ತ್ಕೇರ್, ಬ್ಯೂಟಿ ಅಂಡ್ವೆಲ್ನೆಸ್ , ಆಟೋಮೊಬೈಲ್, ರೀಟೈಲ್ | 06-03-2024 |
ಇತಿಹಾಸ / ಭೌತಶಾಸ್ತ್ರ | 07-03-2024 |
ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ | 09-03-2024 |
ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ | 11-03-2024 |
ಇಂಗ್ಲಿಷ್ | 13-03-2024 |
ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ | 15-03-2024 |
ಅರ್ಥಶಾಸ್ತ್ರ | 16-03-2024 |
ಭೂಗೋಳಶಾಸ್ತ್ರ, ಜೀವಶಾಸ್ತ್ರ | 18-03-2024 |
ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ | 20-03-2024 |
ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್, ಫ್ರೆಂಚ್ | 21-03-2024 |
ಹಿಂದಿ | 22-03-2024 |
ಪ್ರತಿಯೊಂದು ವಿಷಯದ ಪರೀಕ್ಷೆಯು ಪ್ರತಿದಿನ ಬೆಳಿಗ್ಗೆ 10:15 ಗಂಟೆಗೆ ಆರಂಭವಾಗಲಿದೆ ಕೆಲವು ವಿಷಯಗಳಿಗೆ 3 ಗಂಟೆ 15 ನಿಮಿಷ ಹಾಗೂ ಉಳಿಕೆ ವಿಷಯಗಳಿಗೆ ಎರಡು ಗಂಟೆ 15 ನಿಮಿಷ ಪರೀಕ್ಷೆ ಕಾಲಾವಧಿಯನ್ನು ನಿಗದಿಪಡಿಸಲಾಗಿದೆ ಹಾಗಾಗಿ ಪರೀಕ್ಷೆಗೆ ಹಾಜರಾಗುವ ಮೊದಲು ನಿಖರ ಮಾಹಿತಿಯನ್ನು ತಿಳಿದು ನಂತರ ಪರೀಕ್ಷೆ ಕೇಂದ್ರಕ್ಕೆ ಹಾಜರಾಗುವುದು ಉತ್ತಮ.
Latest Trending
- ಬೆಂಗಳೂರಿನ ಪೀಣ್ಯ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿಷೇಧ; ಕಾರಣ ಇಲ್ಲಿದೆ
- ಶಿವರಾಮ ಕಾರಂತ ಬಡಾವಣೆಯ 10,000 ನಿವೇಶನಗಳನ್ನು ಮಾರಾಟ ಮಾಡಲು ಬಿಡಿಎ ಸಿದ್ಧತೆ; ದರ ಎಷ್ಟಿದೆ? ಅರ್ಜಿ ಆಹ್ವಾನ ಯಾವಾಗ?
- ಅನ್ನಭಾಗ್ಯ ಯೋಜನೆ ಶೇ. 82ರಷ್ಟು ಫಲಾನುಭವಿಗಳು ನಗದು ಬದಲು ಅಕ್ಕಿಗೆ ಬೇಡಿಕೆ
- KCET Application 2024: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2024 ರ ಪರಿಷ್ಕೃತ ವೇಳಾಪಟ್ಟಿಯನ್ನು KEA ಬಿಡುಗಡೆ ಮಾಡಿದೆ
Follow us on Instagram Bangalore Today