Gold Rate in Kannada: ಮತ್ತೆ ಚಿನ್ನದ ಬೆಲೆ ಕುಸಿತ , ಇಂದಿನ ಚಿನ್ನ& ಬೆಳ್ಳಿ ದರ ಹೇಗಿದೆ ನೋಡಿ!

Gold Rate in Kannada: ಡಿಸೆಂಬರ್ 18 ರಂದು ಬೆಂಗಳೂರು ಮತ್ತು ದೇಶದ ಇತರ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು ಮತ್ತೆ ಇಳಿಕೆಯನ್ನು ಕಂಡಿದೆ, 22 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 5,730 ರೂ., 24 ಕ್ಯಾರೆಟ್ ಅಪರಂಜಿ ಚಿನ್ನವು ಪ್ರತಿ ಗ್ರಾಂಗೆ ರೂ. 6,251 ಮತ್ತು ಬೆಳ್ಳಿ 100 ಗ್ರಾಂಗೆ ರೂ. 7,550 ಆಗಿದೆ. ಬನ್ನಿ ಮತ್ತಷ್ಟು ವಿವರವನ್ನು ನೋಡೋಣ.

Gold Rate in Kannada

Bengaluru, Dec 18: ಬೆಂಗಳೂರಿನಲ್ಲಿ ಕಳೆದ ಎರಡು ವಾರಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಕಂಡುಬಂದವು, ಈಗ ವರ್ಷಾಂತ್ಯದ ಚಿನ್ನ ಮತ್ತು ಬೆಳ್ಳಿಯ ಖರೀದಿ ಕಡಿಮೆಯಾಗಿದ್ದು, ಇದರಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಮತ್ತಷ್ಟು ಇಳಿಕೆಗೆ ಕಾರಣವಾಗಿದೆ,

ಆ ಮೂಲಕ ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಂತಿದೆ, 22 ಬೆಲೆ ಪ್ರತಿ 10 ಗ್ರಾಂ ಗೆ 57,300 ನಿಗದಿಯಾಗಿವೆ, ಹಾಗೂ 24 ಕ್ಯಾರೇಟ್ ಅಪರಂಜಿ ಚಿನ್ನದ ಬೆಲೆ 62,510 ರೂಪಾಯಿಗಳು ಇದೆ ಹಾಗೂ ಬೆಳ್ಳಿ ಬೆಲೆಯು ಪ್ರತಿ 10 ಗ್ರಾಂ ಗೆ 777 ರೂಪಾಯಿಗಳು ಇದೆ.

ಇದನ್ನೂ ಓದಿ: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇಗಿಂತ ಸರ್ವಿಸ್ ರಸ್ತೆಯಲ್ಲಿ ಅಪಘಾತಗಳು ಹೆಚ್ಚು!

ಡಿಸೆಂಬರ್ ತಿಂಗಳ ನಂತರ ಮುಂದಿನ ವರ್ಷದ ಮೊದಲ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಾಣುವ ಸಾಧ್ಯತೆ ಇದ್ದು, ಡಿಸೆಂಬರ್ ಮೊದಲ ವಾರದ ನಂತರ ಮದುವೆ ಸಮಾರಂಭಗಳು ಇಲ್ಲದ ಕಾರಣ ಖರೀದಿ ಕಡಿಮೆಯಾಗಿದ್ದು ಚಿನ್ನದ ದರದ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಹಾಗಾಗಿ ಚಿನ್ನದ ಬೆಲೆ ಇಳಿಕೆಗೆ ಇದೇ ಪ್ರಮುಖ ಕಾರಣ ಎಂದು ಹೇಳಬಹುದಾಗಿದ್ದು, ಇದಲ್ಲದೇ ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಶೇರುಗಳ ಮೌಲ್ಯ ಹೆಚ್ಚಾಗುವ ಸಾಧ್ಯತೆಯೂ ಚಿನ್ನದ ಬೆಲೆಯಲ್ಲಿ ಇಳಿಕೆಗೆ ಪ್ರಭಾವ ಬೀರಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕರ್ನಾಟಕಕ್ಕೆ KSRTC ಹೆಸರು ಬಳಕೆಗೆ ಮದ್ರಾಸ್ ಹೈಕೋರ್ಟ್ ನಿಂದ ಗ್ರೀನ್ ಸಿಗ್ನಲ್, ಕೇರಳ ರಾಜ್ಯ ಸಾರಿಗೆ ಸಲ್ಲಿಸಿದ ಅರ್ಜಿ ವಜಾ!

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ!

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,300 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,510 ರೂ
  • ಬೆಳ್ಳಿ ಬೆಲೆ 100 ಗ್ರಾಂಗೆ: 7,550 ರೂ

ಭಾರತದ ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ)

  • ಬೆಂಗಳೂರು: 57,300 ರೂ
  • ಚೆನ್ನೈ: 57,900 ರೂ
  • ಮುಂಬೈ: 57,300 ರೂ
  • ದೆಹಲಿ: 57,450 ರೂ
  • ಕೋಲ್ಕತಾ: 57,300 ರೂ
  • ಕೇರಳ: 57,300 ರೂ
  • ಅಹ್ಮದಾಬಾದ್: 57,350 ರೂ
  • ಜೈಪುರ್: 57,450 ರೂ
  • ಲಕ್ನೋ: 57,450 ರೂ
  • ಭುವನೇಶ್ವರ್: 57,300 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ):

  • ಮಲೇಷ್ಯಾ: 2,980 ರಿಂಗಿಟ್ (53,021 ರೂಪಾಯಿ)
  • ದುಬೈ: 2,265 ಡಿರಾಮ್ (51,222 ರೂಪಾಯಿ)
  • ಅಮೆರಿಕ: 620 ಡಾಲರ್ (51,493 ರೂಪಾಯಿ)
  • ಸಿಂಗಾಪುರ: 838 ಸಿಂಗಾಪುರ್ ಡಾಲರ್ (52,224 ರೂಪಾಯಿ)
  • ಕತಾರ್: 2,330 ಕತಾರಿ ರಿಯಾಲ್ (53,087 ರೂಪಾಯಿ)
  • ಸೌದಿ ಅರೇಬಿಯಾ: 2,330 ಸೌದಿ ರಿಯಾಲ್ (51,585 ರೂಪಾಯಿ)
  • ಓಮನ್: 246.50 ಒಮಾನಿ ರಿಯಾಲ್ (53,175 ರೂಪಾಯಿ)
  • ಕುವೇತ್: 194 ಕುವೇತಿ ದಿನಾರ್ (52,379 ರೂಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಂಗೆ)

  • ಬೆಂಗಳೂರು: 7,275 ರೂ
  • ಚೆನ್ನೈ: 7,700 ರೂ
  • ಮುಂಬೈ: 7,500 ರೂ
  • ದೆಹಲಿ: 7,500 ರೂ
  • ಕೋಲ್ಕತಾ: 7,500 ರೂ
  • ಕೇರಳ: 7,700 ರೂ
  • ಅಹ್ಮದಾಬಾದ್: 7,500 ರೂ
  • ಜೈಪುರ್: 7,500 ರೂ
  • ಲಕ್ನೋ: 7,500 ರೂ
  • ಭುವನೇಶ್ವರ್: 7,700 ರೂ

 

Latest Trending

Follow us on Instagram Bangalore Today

Leave a Reply

Your email address will not be published. Required fields are marked *