Get flat 10% off on Wonderla Entry Tickets | Use coupon code "BTWONDER".
Separate BMTC Bus Lanes: ಬಿಎಂಟಿಸಿ ಪ್ರಯಾಣಿಕರಿಗೆ ಸಂತಸದ ಸುದ್ದಿ 9 ಪ್ರಮುಖ ಕಾರಿಡಾರ್ ಮಾರ್ಗಗಳಲ್ಲಿ ಬರಲಿದೆ ಪ್ರತ್ಯೇಕ ಬಿಎಂಟಿಸಿ ಬಸ್ ಪಥ
Separate BMTC Bus Lanes: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆಯನ್ನು ತಗ್ಗಿಸುವ ಸಲುವಾಗಿ ಬಿಬಿಎಂಪಿ ಇಂದ ಬಿಎಂಟಿಸಿ ಬಸ್ ಗಳಿಗೆ ನಗರದಲ್ಲಿ ಪ್ರತ್ಯೇಕ ಪಥ ನಿರ್ಮಿಸುವ ಯೋಜನೆಯನ್ನು ರೂಪಿಸಿದೆ, ಇದರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಬರುವಂತಹ ಒಂಬತ್ತು ಪ್ರಮುಖ ಕಾರಿಡಾರ್ಗಳ ಮಾರ್ಗಗಳಲ್ಲಿ ಪ್ರತ್ಯೇಕವಾಗಿ ಬಸ್ ಗಳಿಗೆ ರಸ್ತೆ ನಿರ್ಮಿಸಲು ಚಿಂತನೆ ನಡೆಸಿದೆ, ಇಲ್ಲಿದೆ ಸಂಪೂರ್ಣ ವಿವರ.
Bengaluru, Dec 29; ಟೈಮ್ಸ್ ಆಫ್ ಇಂಡಿಯಾ ನ 2023ರ ವರದಿಯ ಪ್ರಕಾರ ಭಾರತದಲ್ಲಿಯೇ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ 10 ನಗರಗಳ ಪೈಕಿ ಬೆಂಗಳೂರು ಅಗ್ರಸ್ಥಾನದಲ್ಲಿದೆ ಆ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಟ್ರಾಫಿಕ್ ಪೊಲೀಸ್ ಇಲಾಖೆ ಬೆಂಗಳೂರಿನ ಟ್ರಾಫಿಕ್ ದಟ್ಟಣೆ ನಿರ್ವಹಣೆಯಲ್ಲಿ ಹೇಗೆ ವೈಫಲ್ಯವನ್ನು ಎದುರಿಸುತ್ತಿದೆ ಎಂಬುದು ಎದ್ದು ಕಾಣುತ್ತದೆ.
ಟ್ರಾಫಿಕ್ ದಟ್ಟಣೆಯನ್ನು ತಗ್ಗಿಸಲು ಬಿಬಿಎಂಪಿಯಿಂದ ಪ್ರತ್ಯೇಕ ಬಿಎಂಟಿಸಿ ಬಸ್ ಪಥ ನಿರ್ಮಾಣ!
ಪ್ರಸ್ತುತ ನಗರದ ಟ್ರಾಫಿಕ್ ದಟ್ಟಣೆಯು ದೇಶದಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಬಿಬಿಎಂಪಿಯು ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸಲು ಹಲವಾರು ಕಸರತ್ತು ಗಳನ್ನೂ ನಡೆಸುತ್ತಿದೆ, ಈ ಹಿಂದೆ ಬಿಬಿಎಂಪಿಯು ಸಿಲ್ಕ್ ಬೋರ್ಡ್ ನಿಂದ ಟಿನ್ ಫ್ಯಾಕ್ಟರಿವರೆಗೆ ಪ್ರಾಯೋಗಿಕವಾಗಿ ನಿರ್ಮಿಸಿದ ಬಸ್ ಪಥ ಯಶಸ್ವಿಯಾಗಿತ್ತು ಹಾಗಾಗಿ ಇದೀಗ ಮತ್ತೆ ಬಿಬಿಎಂಪಿ ಬೆಂಗಳೂರಿನ ಪ್ರಮುಖ ಒಂಬತ್ತು ಕಾರಿಡಾರ್ಗಳಲ್ಲಿ ಬಸ್ ಗಳಿಗೆ ಪ್ರತ್ಯೇಕ ಪಥವನ್ನು ನಿರ್ಮಿಸಲು ಮುಂದಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಭಾರತದ ಎತ್ತರದ ವೀಕ್ಷಣಾ ಗೋಪುರ!
9 ಕಾರಿಡಾರ್ಗಳಲ್ಲಿ ಪ್ರತ್ಯೇಕ ಬಸ್ ಪಥಗಳ ನಿರ್ಮಾಣ!
ನಗರದಲ್ಲಿ ಹೆಚ್ಚು ಟ್ರಾಫಿಕ್ ದಟ್ಟಣೆ ಇರುವಂತಹ ಸಿಗ್ನಲ್ಗಳಲ್ಲಿ ಬಿಎಂಟಿಸಿ ಬಸ್ ಗಳು ಸಿಲುಕಿದರೆ ಅದರಿಂದ ಹೊರಡಲು ಕನಿಷ್ಠ 15 ನಿಮಿಷಗಳ ಕಾಲಾವಧಿಯನ್ನು ತೆಗೆದುಕೊಳ್ಳುತ್ತದೆ, ಹಾಗಾಗಿ 8 ರಿಂದ 10 ಕಿಲೋಮೀಟರ್ ದೂರದ ವ್ಯಾಪ್ತಿಯನ್ನು ತಲುಪಲು ಬಿಎಂಟಿಸಿ ಬಸ್ ಗಳು ಕನಿಷ್ಠ 40ರಿಂದ 50 ನಿಮಿಷಗಳವರೆಗೆ ಸಮಯವನ್ನು ತೆಗೆದುಕೊಳ್ಳುವುದು ಬಿಎಂಟಿಸಿ ಬಸ್ ಗಳ ಆಮೆ ಗತಿ ವೇಗವನ್ನು ಪ್ರತಿಬಿಂಬಿಸುತ್ತದೆ.
ಒಟ್ಟು 83 ಕಿಲೋಮೀಟರ್ ಮಾರ್ಗದಲ್ಲಿ ಪ್ರತ್ಯೇಕ ಬಸ್ ಪಥ ನಿರ್ಮಾಣಕ್ಕೆ ಬಿಬಿಎಂಪಿ ಇದೀಗ ಮುಂದಾಗಿದ್ದು ಮೈಸೂರು ರಸ್ತೆ ಮಾಗಡಿ ರಸ್ತೆ ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಕನಕಪುರ ರಸ್ತೆ ಸೇರಿದಂತೆ ಒಟ್ಟು ಒಂಬತ್ತು ಪ್ರಮುಖ ಅತಿ ದಟ್ಟಣೆಗಳಲ್ಲಿ ಕಲ್ಡರ್ಗಳಲ್ಲಿ ಪ್ರತ್ಯೇಕ ಬಿಎಂಟಿಸಿ ಬಸ್ ಪತಗಳನ್ನು ನಿರ್ಮಿಸಲು ಮುಂದಾಗಿದೆ.
ಬಸ್ ಪಥ ನಿರ್ಮಾಣ ಎಲ್ಲೆಲ್ಲಿ?
- ಮೈಸೂರು ರಸ್ತೆ
- ಮಾಗಡಿ ರಸ್ತೆ
- ತುಮಕೂರು ರಸ್ತೆ
- ಕನಕಪುರ ರಸ್ತೆ
- ಹೊಸೂರು ರಸ್ತೆ
- ಹಳೇ ಮದ್ರಾಸ್ ರಸ್ತೆ
- ಹಳೇ ವಿಮಾನ ನಿಲ್ದಾಣ ರಸ್ತೆ
- ಬಳ್ಳಾರಿ ರಸ್ತೆ
- ಹೊರವರ್ತುಲ ರಸ್ತೆಯ ಗೊರಗುಂಟೆಪಾಳ್ಯದಿಂದ ಕೆ.ಆರ್.ಪುರ
ಬಸ್ಗಳಲ್ಲಿ ಪ್ರಯಾಣಿಸಿದರೆ, ಸಮಯಕ್ಕೆ ಸರಿಯಾಗಿ ತಲುಪುವ ವಿಶ್ವಾಸವನ್ನು ಜನರು ಹೊಂದಿರಬೇಕು. ನಂತರ ಖಾಸಗಿ ವಾಹನಗಳ ಬದಲು ಬಸ್ಗಳಲ್ಲಿ ಸಂಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯು, 83 ಕಿ.ಮೀ. ಉದ್ದದ ರಸ್ತೆಯಲ್ಲಿ ಬಸ್ ಆದ್ಯತೆಯ ಮಾರ್ಗ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇದಕ್ಕಾಗಿ 280 ಕೋಟಿ ರೂ. ವೆಚ್ಚವಾಗುತ್ತಿದೆ.
ನಗರದ ಮಧ್ಯ ಭಾಗದ ಪರಿಧಿಯಿಂದ ಪಾಲಿಕೆ ಗಡಿವರೆಗೆ ಆದ್ಯತೆಯ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಮೂರು ಪಥದ ಏಕಮುಖ ರಸ್ತೆಯಲ್ಲಿ 3.5 ಮೀಟರ್ ಅಗಲವನ್ನು ಬಸ್ಗಳಿಗೆ ಮಾತ್ರ ಮೀಸಲಿಡಲಾಗಿದೆ. ಆಯಾ ರಸ್ತೆಗಳಿಗೆ ಅನುಗುಣವಾಗಿ ಬಸ್ ಮಾರ್ಗಗಳನ್ನು ಯೋಜಿಸಲಾಗುತ್ತಿದೆ. ಈ ಮಾರ್ಗದಲ್ಲಿ ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಬಿಎಂಟಿಸಿ, ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನ ಸೇರಿದಂತೆ ತುರ್ತು ಸೇವಾ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದ್ಯತೆಯ ಲೇನ್ನಲ್ಲಿ ಇತರೆ ವಾಹನಗಳು ಅತಿಕ್ರಮಣ ಮಾಡುವುದನ್ನು ತಡೆಯಲು ಎಫ್ಆರ್ಪಿ (ಫೈಬರ್ ರೀನ್ಫೋರ್ಸ್ಡ್) ಬೋಲಾರ್ಡ್ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.
Latest Trending
- ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ!, ಇಂದಿನ ಚಿನ್ನ & ಬೆಳ್ಳಿ ದರ ಹೇಗಿದೆ ನೋಡಿ!
- ಹೆಲ್ಮೆಟ್ ಧರಿಸದೆ ವಾಹನ ಚಾಲನೆ! ಸ್ಕೂಟಿ ಪೆಪ್ ಗೆ 3.22 ಲಕ್ಷ ರೂ ದಂಡ ವಿಧಿಸಿದ ಪೊಲೀಸರು
- ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿಗಳು ಬಿಡುಗಡೆ, ಇಲ್ಲಿವೆ ನೋಡಿ, ತಪ್ಪದೆ ಓದಿ!
Follow us on Instagram Bangalore Today