Get flat 10% off on Wonderla Entry Tickets | Use coupon code "BTWONDER".
Road White Topping in Bangalore: ಬೆಂಗಳೂರಿನಲ್ಲಿ 754.74 ಕೋಟಿ ವೆಚ್ಚದಲ್ಲಿ ರಸ್ತೆ ವೈಟ್ ಟಾಪಿಂಗ್ ಕಾಮಗಾರಿಗೆ ಬಿಬಿಎಂಪಿ ಸಿದ್ಧತೆ ನಡೆಸಿದೆ
Road White Topping in Bangalore: ಬೆಂಗಳೂರಿನ ರಸ್ತೆಗಳು ಹದಗೆಟ್ಟಿದ್ದು, ಇದೀಗ ಬಿಬಿಎಂಪಿ ಪಾಲಿಕೆ ವ್ಯಾಪ್ತಿಯ 19 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಮಗಾರಿ ನಡೆಯಲಿದ್ದು, ಈ ಪೈಕಿ 9 ಹಂತಗಳಾಗಿ ವಿಂಗಡಿಸಲಾಗಿದೆ. ಇದಕ್ಕಾಗಿ ಬಿಬಿಎಂಪಿ 754.74 ಕೋಟಿ ವೆಚ್ಚದಲ್ಲಿ ರಸ್ತೆ ವೈಟ್ ಟಾಪಿಂಗ್ ಕಾಮಗಾರಿಯೂ ನಡೆಯಲಿದ್ದು, ವಿಸ್ತೃತ ಯೋಜನೆ ಸಿದ್ಧಪಡಿಸಲು ಈಗಾಗಲೇ ಅಧಿಕೃತವಾಗಿ ಟೆಂಡರ್ ಕರೆಯಲಾಗಿದೆ.
ಬೆಂಗಳೂರು: ನಗರದ ಪ್ರಮುಖ ಮಾರ್ಗಗಳ ರಸ್ತೆಗಳ ದುರಸ್ತಿಗೆ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ ಮುಂದಾಗಿದ್ದು, ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲು ಯೋಜನೆ ರೂಪಿಸಿದೆ. ನಗರದ 61.12 ಕಿಲೋಮೀಟರ್ ವ್ಯಾಪ್ತಿಯ ರಸ್ತೆಗೆ ವೈಟ್ ಟಾಪಿಂಗ್ ಮಾಡಿಸುವುದರ ಮೂಲಕ ನಗರದ ಮೂಲಭೂತ ಸೌಲಭ್ಯವನ್ನು ಮತ್ತಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಈ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.
ಈ ಯೋಜನೆಗೆ 754.74 ಕೋಟಿ ಅಂದಾಜು ಮಾಡಲಾಗಿದ್ದು, ಡಿಸೆಂಬರ್ 16 ರಿಂದ ಅಧಿಕೃತವಾಗಿ ಟೆಂಡರ್ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು 26 ಕೊನೆಯ ದಿನವಾಗಿದೆ.
ಇದನ್ನೂ ಓದಿ: ಬೆಂಗಳೂರಿನ 3 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ, ಬಟ್ಟೆ & ಅಪಾರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ!
ಕ್ಷೇತ್ರವನ್ನು ಆಧರಿಸಿ ಕೆಲಸವನ್ನು 9 ಪ್ಯಾಕೇಜ್ಗಳಾಗಿ ವಿಂಗಡಿಸಲಾಗಿದೆ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 19 ವಿಧಾನಸಭಾ ಕ್ಷೇತ್ರಗಳಿದ್ದು, ಕ್ಷೇತ್ರವಾರು 61 ಕಿ.ಮೀ ರಸ್ತೆ ವೈಟ್ ಟಾಪಿಂಗ್ ಹೊಂದಿದೆ, ಯಶವಂತಪುರ, ಸರ್ವಜ್ಞ ನಗರ, ಶಿವಾಜಿನಗರ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವು ಪ್ರಮುಖ ವಾರ್ಡ್ಗಳನ್ನು ಒಳಗೊಂಡಂತೆ 9 ಪ್ಯಾಕೇಜ್ಗಳಲ್ಲಿ ಕಾಮಗಾರಿಯನ್ನು ವಿಂಗಡಿಸಲಾಗಿದೆ.
ನಗರದ ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ ಟಾಪಿಂಗ್ ನಡೆಯಲಿದೆ?
- ಸರ್ವಜ್ಞನಗರ, ಪುಲಕೇಶಿನಗರ: ₹105.94 ಕೋಟಿ ವೆಚ್ಚದಲ್ಲಿ 8.7 ಕಿ.ಮೀ.
- ಶಾಂತಿನಗರ, ಶಿವಾಜಿನಗರ: ₹105.37 ಕೋಟಿ ವೆಚ್ಚದಲ್ಲಿ 7.38 ಕಿ.ಮೀ.
- ಗೋವಿಂದರಾಜನಗರ, ವಿಜಯನಗರ: ₹75.25 ಕೋಟಿ ವೆಚ್ಚದಲ್ಲಿ 6.67 ಕಿ.ಮೀ.
- ಬ್ಯಾಟರಾಯನಪುರ, ಯಲಹಂಕ, ಮಲ್ಲೇಶ್ವರ: ₹77.11 ಕೋಟಿ ವೆಚ್ಚದಲ್ಲಿ 6.48 ಕಿ.ಮೀ.
- ರಾಜರಾಜೇಶ್ವರಿನಗರ, ಯಶವಂತಪುರ, ದಾಸರಹಳ್ಳಿ: ₹95.44 ಕೋಟಿ ವೆಚ್ಚದಲ್ಲಿ 7.25 ಕಿ.ಮೀ.
- ಜಯನಗರ, ಚಿಕ್ಕಪೇಟೆ, ಚಾಮರಾಜಪೇಟೆ: ₹86.04 ಕೋಟಿ ವೆಚ್ಚದಲ್ಲಿ 6.8 ಕಿ.ಮೀ.
- ಗಾಂಧಿನಗರ, ಬಿಟಿಎಂ ಲೇಔಟ್: ₹74.24 ಕೋಟಿ ವೆಚ್ಚದಲ್ಲಿ 7.44 ಕಿ.ಮೀ.
- ಕೆ.ಆರ್. ಪುರ: ₹86.33 ಕೋಟಿ ವೆಚ್ಚದಲ್ಲಿ 5.5 ಕಿ.ಮೀ.
- ಹೆಬ್ಬಾಳ: ₹50.02 ಕೋಟಿ ವೆಚ್ಚದಲ್ಲಿ 4.9 ಕಿ.ಮೀ.
ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ!, ಇಂದಿನ ಚಿನ್ನ & ಬೆಳ್ಳಿ ದರ ಹೇಗಿದೆ ನೋಡಿ!
Latest Trending
- ಹೆಲ್ಮೆಟ್ ಧರಿಸದೆ ವಾಹನ ಚಾಲನೆ! ಸ್ಕೂಟಿ ಪೆಪ್ ಗೆ 3.22 ಲಕ್ಷ ರೂ ದಂಡ ವಿಧಿಸಿದ ಪೊಲೀಸರು
- ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿಗಳು ಬಿಡುಗಡೆ, ಇಲ್ಲಿವೆ ನೋಡಿ, ತಪ್ಪದೆ ಓದಿ!
- ಕರ್ನಾಟಕಕ್ಕೆ KSRTC ಹೆಸರು ಬಳಕೆಗೆ ಮದ್ರಾಸ್ ಹೈಕೋರ್ಟ್ ನಿಂದ ಗ್ರೀನ್ ಸಿಗ್ನಲ್, ಕೇರಳ ರಾಜ್ಯ ಸಾರಿಗೆ ಸಲ್ಲಿಸಿದ ಅರ್ಜಿ ವಜಾ!
Follow us on Instagram Bangalore Today