Pineapple Benefits in Kannada: ಅನಾನಸ್ ಸೇವಿಸುವುದರಿಂದ ಆಗುವ ಪ್ರಯೋಜನಗಳು!

Pineapple Benefits in Kannada: ವಿವಿಧ ಹಣ್ಣುಗಳ ಸೇವನೆಯು ದೇಹಕ್ಕೆ ಅತಿ ಮುಖ್ಯ ವಿಟಮಿನ್ ಗಳ ಹೆಚ್ಚಾಗಿರುವ ಹಣ್ಣುಗಳು ಪಚನ ಕ್ರಿಯೆಯನ್ನು ಸರಳಗೊಳಿಸುತ್ತದೆ ಹಾಗೂ ಚರ್ಮದ ಬಣ್ಣಗಳನ್ನು ಬಿಳಿ ಗೊಳಿಸುವುದು ಹಾಗೂ ವಯಸ್ಸಾಗುವಿಕೆಯನ್ನು ಕಡಿಮೆಗೊಳಿಸುವ ಶಕ್ತಿ ಹಣ್ಣುಗಳಲ್ಲಿ ಅಡಗಿರುತ್ತದೆ ಯಾವ ಹಣ್ಣಿನ ಸೇವನೆ ಯಾವ ಸಂದರ್ಭದಲ್ಲಿ ಉತ್ತಮ ಎಂದು ತಿಳಿದುಕೊಂಡರೆ ಆಯಾ ಹಣ್ಣುಗಳ ಪ್ರಯೋಜನವನ್ನು ಸೂಕ್ತ ರೀತಿಯಲ್ಲಿ ಪಡೆದುಕೊಳ್ಳಬಹುದಾಗಿದೆ.

ಅನಾನಸ್ ಉಷ್ಣವಲಯದ ಹಣ್ಣು ಎಂದು ಹೇಳಲಾಗುತ್ತದೆ ಇದು ಸೌತ್ ಅಮೆರಿಕದಲ್ಲಿ ಮೊದಲು ಹುಟ್ಟಿದ ಹಣ್ಣಾಗಿದೆ ಇದನ್ನು ಮೊದಲು ವಿಲಕ್ಷಣ ಹಣ್ಣು ಎಂದು ಪರಿಗಣಿಸಲಾಗಿತ್ತು ಯುರೋಪಿನ ಪರಿಶೋಧಕರು ಈ ಹಣ್ಣನ್ನು ಮೊದಲು ಪೈನಾಪಲ್ ಎಂದು ಕರೆದಿದ್ದರು.

ಪೌಷ್ಟಿಕ ತಜ್ಞರ ಪ್ರಕಾರ ಒಂದು ಕಪ್ ಅನಾನಸ್ 79 ಮೀ ಗ್ರಾಂ ವಿಟಮಿನ್ ಸಿ ಯನ್ನು ಹೊಂದಿರುತ್ತದೆ. ಈ ಹಣ್ಣಿನಲ್ಲಿ ಜೀರೋ ಪರ್ಸೆಂಟ್ ಕೊಲೆಸ್ಟ್ರಾಲ್ ವಿಟಮಿನ್ ಎ ಬಿ ಸಿ ಪೊಟಾಸಿಯಂ ಮ್ಯಾಂಗನೀಸ್ ಸತು ಹಾಗೂ ದೇಹಕ್ಕೆ ಅಗತ್ಯವಾದ ಖನಿಜಾಂಶಗಳಿದ್ದು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ ಈ ಹಣ್ಣಿನ ಇನ್ನಿತರ ಉಪಯೋಗಗಳೆಂದರೆ.

Pineapple Benefits in Kannada

ಅನಾನಸ್ ಸೇವಿಸುವುದರಿಂದ ಆಗುವ ಅನುಕೂಲಗಳು!

ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು:

ವಿಟಮಿನ್ ಸಿ ಜೊತೆಗೆ ಅನಾನಸ್ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ಮ್ಯಾಂಗನೀಸ್ ಇರುವ ಕಾರಣ, ಇದು ಮೂಳೆಯ ಬಲವನ್ನು ಹೆಚ್ಚಿಸುತ್ತದೆ ಮತ್ತು ಸಂಬಂಧಿತ ನರಗಳಿಗೆ ಹಾನಿಯಾಗದಂತೆ ತಡೆಯುತ್ತದೆ.

ಕಣ್ಣಿನ ಆರೋಗ್ಯ ಕಾಪಾಡುತ್ತದೆ:

ಅನಾನಸ್ ಹಣ್ಣಿನಲ್ಲಿ ಅಂಟಿಆಕ್ಸಿಡೆಂಟ್ಸ್ ಮತ್ತು ವಿಟಮಿನ್ ಸಿ ಇದ್ದು ಇದು ಮ್ಯಾಕ್ಯುಲರ್ ಡಿ ಜನರೇಷನ್ ಎಂಬ ಕಣ್ಣಿನ ಸಮಸ್ಯೆಯನ್ನು ತಡೆಯುತ್ತದೆ ಮತ್ತು ಇದರಲ್ಲಿ ಬೀಟಾ ಕ್ಯಾರೋಟಿನ್ ಇದೆ ಮತ್ತು ಅನಾನಸ್ ಅನ್ನು ಪ್ರತಿದಿನ ಸೇವಿಸುವುದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ; ಪ್ರತಿನಿತ್ಯ ಕಿವಿ ಹಣ್ಣನ್ನು ಸೇವಿಸುವುದರಿಂದ ಆಗುವ ಅನುಕೂಲಗಳು!

ರಕ್ತದೊತ್ತಡ ಕಡಿಮೆ ಮಾಡುತ್ತದೆ:

ಅನಾನಸ್ ಹಣ್ಣಿನಲ್ಲಿ ಸಾಕಷ್ಟು ಪೊಟ್ಯಾಸಿಯಮ್ ಇದ್ದು ಇದು ನೈಸರ್ಗಿಕವಾಗಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ರಕ್ತನಾಳಗಳ ಮೇಲೆ ಹೆಚ್ಚಿನ ಒತ್ತಡವನ್ನು ತಡೆಯುತ್ತದೆ. ಅನಾನಸ್ ಸಹ ವಾಯುರೋಗದ ವಿರುದ್ಧ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ

ಅಸ್ತಮಾವನ್ನು ತಡೆಗಟ್ಟುತ್ತದೆ:

ಅನಾನಸ್ ನಲ್ಲಿರುವ ಬೀಟಾ ಕೆರೋಟಿನ್ ಅಂಶ ಅಸ್ತಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಅನಾನಸ್ ದೇಹದಲ್ಲಿರುವ ಕಲ್ಮಶವನ್ನು ಹೊರಹಾಕಿ ಆರೋಗ್ಯವನ್ನು ಕಾಪಾಡುತ್ತದೆ.

ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ:

ಅನಾನಸ್ ನಲ್ಲಿ ಇರುವ ಬ್ರೋ ಮೆಲಿನ್ ಅಂಶವು ಕ್ಯಾನ್ಸರ್ ಸೆಲ್ ಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಬ್ರೆಸ್ಟ್ ಕ್ಯಾನ್ಸರ್ ಮತ್ತು ಚರ್ಮದ ಕ್ಯಾನ್ಸರ್ ಗ್ಯಾಸ್ಟಿಕ್ ಸಮಸ್ಯೆ,ಕೊಲನ್ ಮತ್ತು ಪಿತ್ತ ರಸನಾಳದ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಹೃದಯದ ಆರೋಗ್ಯ ಕಾಪಾಡುತ್ತದೆ:

ಅನಾನಸ್ ನಲ್ಲಿ ಕಂಡುಬರುವ ಬ್ರೋಮೇಲೈನ್ ಅಂಶ ಹೃದಯದ ಆರೋಗ್ಯಕ್ಕೆ ತುಂಬಾ ಸಹಕಾರಿ ಎಂದು ಹೇಳುತ್ತಾರೆ ಏಕೆಂದರೆ ಈ ಅಂಶವು ರಕ್ತದ ಒತ್ತಡ ಹೆಚ್ಚಾಗದಂತೆ ನೋಡಿಕೊಳ್ಳುವುದರ ಜೊತೆಗೆ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ ಹೃದಯ ರಕ್ತನಾಳದ ಸಮಸ್ಯೆಗಳನ್ನು ಉಂಟಾಗದಂತೆ ನೋಡಿಕೊಳ್ಳುತ್ತದೆ.

ಇದನ್ನೂ ಓದಿ; ಕಲ್ಲಂಗಡಿ ಹಣ್ಣಿನಲ್ಲಿ ಅಡಗಿರುವ ಆರೋಗ್ಯ ಪ್ರಯೋಜನಗಳು

ಉತ್ತಮ ಜೀರ್ಣಶಕ್ತಿ:

ಅನಾನಸ್ ಹಣ್ಣಿನಲ್ಲಿ ಅಮೈನೋ ಆಮ್ಲಗಳು ಮತ್ತು ಸಣ್ಣ ಪ್ರಮಾಣದ ಪೆಪ್ಟೈಡ್ ಅಂಶಗಳು ಕಂಡುಬರುತ್ತವೆ, ಆದ್ದರಿಂದ ಇದು ಜೀರ್ಣಕಾರಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತುಂಬಾ ಉಪಯುಕ್ತವಾಗಿದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ರಕ್ಷಿಸುತ್ತದೆ ಮತ್ತು ನಾವು ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳುವ ಮೂಲಕ ಮಲಬದ್ಧತೆಯನ್ನು ತಡೆಯುತ್ತದೆ.

ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ:

ಅನಾನಸ್ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಇದರಲ್ಲಿನ ಉತ್ಕರ್ಷಣ ನಿರೋಧಕ ಅಂಶವು ಯಾವುದೇ ರೋಗಗಳಿಂದ ನಿಮ್ಮನ್ನು ರಕ್ಷಿಸುವ ಶಕ್ತಿಯನ್ನು ಹೊಂದಿದೆ ವಿಟಮಿನ್ ಸಿ ಕೂದಲು ದಪ್ಪವಾಗಿ ಮತ್ತು ರೇಷ್ಮೆಯಂತೆ ಕಾಣುವಂತೆ ಅನಾನಸ್ ಮಾಡುತ್ತದೆ

ತೂಕ ನಷ್ಟ:

ಅನಾನಸ್ ಒಂದು ಅದ್ಭುತವಾದ ತೂಕ ನಷ್ಟ ಆಹಾರವಾಗಿದೆ, ಅನಾನಸ್ ನಲ್ಲಿ ಹೆಚ್ಚಿನ ಪೋಷಕಾಂಶಗಳು ಹಾಗೂ ಕಡಿಮೆ ಕ್ಯಾಲೋರಿಗಳಿವೆ ಇದರಿಂದ ತೂಕ ನಷ್ಟಕ್ಕೆ ಇದು ಸೂಕ್ತವಾಗಿದೆ.

Reference

Medically Reviewed By

Amy Richter, MS, RD

Latest Trending

Follow us on Instagram Bangalore Today

Bhagirathi H P
Bhagirathi H P
Articles: 45

Leave a Reply

Your email address will not be published. Required fields are marked *