Get flat 10% off on Wonderla Entry Tickets | Use coupon code "BTWONDER".
Leelavathi death: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ರವರು 85ನೇ ವಯಸ್ಸಿನಲ್ಲಿ ವಿಧಿವಶ!
Leelavathi Death: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ರವರು 85ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ, ಕಳೆದ ಒಂದು ತಿಂಗಳಿನಿಂದ ವಯೋಸಹಜ ಅನಾರೋಗ್ಯಕೀಡಾಗಿದಂತಹ ಲೀಲಾವತಿ ರವರನ್ನು ಡಿಸೆಂಬರ್ 8 ಇಂದು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಇಹಲೋಕವನ್ನು ತ್ಯಜಿಸಿದ್ದಾರೆ.
ವಯೋಸಹಜ ಅನಾರೋಗ್ಯದ ಕಾರಣದಿಂದ ಹಿರಿಯ ನಟಿ ಲೀಲಾವತಿಯವರು ಕಳೆದ ಒಂದು ತಿಂಗಳಿನಿಂದ ಬಳಲುತ್ತಿದ್ದರು, ಇಂದು ಸಂಜೆ ವೇಳೆಗೆ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.
ಇದನ್ನೂ ಓದಿ: ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಟೆಕ್ಕಿಗೆ ಲೈಂಗಿಕ ದೌರ್ಜನ್ಯ ! ಆರೋಪಿ ಅರೆಸ್ಟ್
ಲೀಲಾವತಿ ರವರ ನಿಧನದ ವಿಚಾರ ತಿಳಿಯುತ್ತಿದ್ದಂತೆ ಕನ್ನಡದ ಹಲವಾರು ಚಿತ್ರರಂಗದ ಹಲವಾರು ನಟರು ಕಂಬನಿ ಮಿಡಿದಿದ್ದಾರೆ, ಚಿತ್ರರಂಗದ ನಟರು ಸಂತಾಪವನ್ನು ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ಸಿನಿಮಾಗಳ ಕೊಡುಗೆಯನ್ನು ನೀಡಿರುವಂತಹ ಲೀಲಾವತಿಯವರು ಸಂತಾ ತುಕಾರಾಂ, ಮತ್ತು ಇನ್ನಿತರೆ ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ ಹಾಗೂ ಅಭಿಮಾನಿಗಳ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಲೀಲಾವತಿ ರವರು ಮೂಲತಃ ಬೆಳ್ತಂಗಡಿ ರವರಾಗಿದ್ದು 1958 ರಲ್ಲಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು ಮಾಂಗಲ್ಯ ಯೋಗ ಎಂಬ ಸಿನಿಮಾ ಮೂಲಕ ಚಲನಚಿತ್ರ ಲೋಕಕ್ಕೆ ಕಾಲಿಟ್ಟ ಲೀಲಾವತಿಯವರು ಕನ್ನಡ, ತೆಲುಗು, ತಮಿಳು, ತುಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ, ಹಾಗೂ ಅಂತಿಮವಾಗಿ ವಿನೋದ್ ರಾಜ್ ರವರ “ಯಾರದು” ಚಿತ್ರದ ಬಳಿಕ ನಟನೆ ಯಿಂದ ದೂರ ಉಳಿದರು.
ಹಿರಿಯ ಕಲಾವಿದೆ ಲೀಲಾವತಿಯವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯರವರು ಸಂತಾಪವನ್ನು ಸೂಚಿಸಿದ್ದಾರೆ ‘ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಅಗಲಿಕೆ ಸುದ್ದಿ ನೋವನ್ನುಂಟು ಮಾಡಿದೆ ಕಳೆದ ವಾರವಷ್ಟೇ ಅನಾರೋಗ್ಯ ಕೀಡಾದ ವಿಚಾರ ತಿಳಿದು ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಪುತ್ರ ವಿನೋದ್ ರಾಜ್ ಅವರೊಂದಿಗೆ ಮಾತನಾಡಿ ಬಂದಿದ್ದೆ, ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
Latest Trending
- ಚಿನ್ನದ ದರದಲ್ಲಿ ಮತ್ತೆ ಏರಿಕೆ! ಇಂದಿನ ದರ ಎಷ್ಟಿದೆ ನೋಡಿ!
- ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸುವ ‘ಫಾರ್ಮ್ ಗಾರ್ಡ್’ ಉಪಕರಣ
- ನಮ್ಮ ಮೆಟ್ರೋಗೆ ಬಿಬಿಎಂಪಿ ಸೇವಾ ಶುಲ್ಕದ ಹೊರೆ: ಮೆಟ್ರೋ ಟಿಕೆಟ್ ದರ ಹೆಚ್ಚಳ ಸಾಧ್ಯತೆ!
Follow us on Instagram Bangalore Today Bangalore Today