Get flat 10% off on Wonderla Entry Tickets | Use coupon code "BTWONDER".
Karunada Sambhrama 2023: GKGS ಟ್ರಸ್ಟ್ ವತಿಯಿಂದ 12ನೇ ಕರುನಾಡ ಸಂಭ್ರಮಕ್ಕೆ ಕ್ಷಣಗಣನೆ, ರಮೇಶ್ ಅರವಿಂದ್ ಅವರಿಗೆ ಕನ್ನಡ ಕಲಾ ಭೂಷಣ ಪ್ರಶಸ್ತಿ
Karunada Sambhrama 2023: ಪ್ರತಿ ವರ್ಷ ಜಿಕೆಜಿಎಸ್ ಟ್ರಸ್ಟ್ ವತಿಯಿಂದ ಅದ್ದೂರಿಯಾಗಿ ಆಚರಿಸಲ್ಪಡುವ ಕರುನಾಡ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ, ಹಾಗೂ ಕನ್ನಡ ಕಲಾಭೂಷಣ ಪ್ರಶಸ್ತಿಗೆ ರಮೇಶ್ ಅರವಿಂದ್ ರವರು ಆಯ್ಕೆಯಾಗಿದ್ದು ಈ ಬಾರಿಯ ಕಾರ್ಯಕ್ರಮವು 12ನೇ ವರ್ಷಕ್ಕೆ ಕಾಲಿಟ್ಟಿದೆ, ಮತ್ತಷ್ಟು ವಿವರ ಇಲ್ಲಿದೆ ನೋಡಿ!
Bengaluru, Dec 11: ಬೆಂಗಳೂರಿನ ಶ್ರೀನಿವಾಸನಗರದಲ್ಲಿರುವ ಕೆಂಪೇಗೌಡ ಆಟದ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಜೆಕೆಜಿಎಸ್ ಟ್ರಸ್ಟ್ ಆಯೋಜಿಸಿರುವ ಕರುನಾಡ ಸಂಭ್ರಮ ಇದೀಗ 12ನೇ ವರ್ಷಕ್ಕೆ ಕಾಲಿಟ್ಟಿದೆ. ಡಿ.14ರಿಂದ 17ರವರೆಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಅದ್ಧೂರಿ ವೇದಿಕೆ ಸಿದ್ಧಗೊಳ್ಳುತ್ತಿದ್ದು, ಕ್ಷಣಗಣನೆ ಆರಂಭವಾಗಿದೆ.
ಇದನ್ನೂ ಓದಿ: 2022ರಲ್ಲಿ ಮಹಿಳೆಯರ ಮೇಲಿನ ಆಸಿಡ್ ದಾಳಿಯಲ್ಲಿ ಬೆಂಗಳೂರಿಗೆ ಅಗ್ರ ಸ್ಥಾನ: ಆತಂಕ ಸೃಷ್ಟಿಸಿದ NCRB ವರದಿ
ಡಿಸೆಂಬರ್ 14 ರಿಂದ 17 ರವರೆಗೆ ಅದ್ದೂರಿ ಕರುನಾಡ ಆಚರಣೆಗೆ ವೇದಿಕೆ ಸಜ್ಜಾಗಿದೆ.ಈ ವಾರ್ಷಿಕ ಕಾರ್ಯಕ್ರಮವು ಈಗ 12 ನೇ ವರ್ಷಕ್ಕೆ ಕಾಲಿಟ್ಟಿದೆ.
ಬೆಂಗಳೂರಿನ ಶ್ರೀನಿವಾಸನಗರದ ಕೆಂಪೇಗೌಡ ಆಟದ ಮೈದಾನದಲ್ಲಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ರಾಜ್ ಇವೆಂಟ್ಸ್ ವಹಿಸಿಕೊಂಡಿದೆ. ಕಾರ್ಯಕ್ರಮದಲ್ಲಿ ಪ್ರತಿ ವರ್ಷದಂತೆ ಕನ್ನಡ ಕಲಾ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಬಾರಿ ರಮೇಶ್ ಅರವಿಂದ್ ಅವರಿಗೆ ಕನ್ನಡ ಕಲಾ ಭೂಷಣ ಪ್ರಶಸ್ತಿ ನೀಡಲಾಗುವುದು.
ಕಾರ್ಯಕ್ರಮದಲ್ಲಿ ಚಂದನವನದ ತಾರೆಯರ ಸಮಾಗಮ, ಸ್ಟಾರ್ ಗಾಯಕರಿಂದ ಗಾಯನ, ನಟ-ನಟಿಯರಿಂದ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿಯೂ ಈ ಸಂಭ್ರಮ ಮತ್ತಷ್ಟು ರಂಗೇರಲಿದೆ. ಕಾರ್ಯಕ್ರಮದಲ್ಲಿ ಗುರುಕಿರಣ್, ರಾಜೇಶ್ ಕೃಷ್ಣನ್, ನವೀನ್ ಸಜ್ಜು ಅವರ ಗಾಯನ ಕಾರ್ಯಕ್ರಮದ ಸಂಭ್ರಮವನ್ನು ಹೆಚ್ಚಿಸಲಿದೆ. ರಮೇಶ್ ಅರವಿಂದ್, ನೀನಾಸಂ ಸತೀಶ್, ಅಜಯ್ ರಾವ್, ವಿಜಯ್ ರಾಘವೇಂದ್ರ, ಚಿಕ್ಕಣ್ಣ ಸೇರಿದಂತೆ ಕನ್ನಡದ ಹಲವು ತಾರೆಯರು ಕರುನಾಡ ಸಂಭ್ರಮಕ್ಕೆ ಆಗಮಿಸಲಿದ್ದಾರೆ.
Latest Trending
- ಬಿಬಿಎಂಪಿ ₹2,300 ಕೋಟಿಯ ಶುಲ್ಕ ಮರುಪಾವತಿ ಸಂಕಷ್ಟದಿಂದ ಪಾರಾಗಲು, ಲೈಸೆನ್ಸ್ ಶುಲ್ಕ ವಸೂಲಿ ಅಸ್ತ್ರ!
- ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಟೆಕ್ಕಿಗೆ ಲೈಂಗಿಕ ದೌರ್ಜನ್ಯ ! ಆರೋಪಿ ಅರೆಸ್ಟ್
- ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸುವ ‘ಫಾರ್ಮ್ ಗಾರ್ಡ್’ ಉಪಕರಣ
- ನಮ್ಮ ಮೆಟ್ರೋಗೆ ಬಿಬಿಎಂಪಿ ಸೇವಾ ಶುಲ್ಕದ ಹೊರೆ: ಮೆಟ್ರೋ ಟಿಕೆಟ್ ದರ ಹೆಚ್ಚಳ ಸಾಧ್ಯತೆ!
Follow us on Instagram Bangalore Today Bangalore Today