Karnataka Rain Forecast: ರಾಜ್ಯದಲ್ಲಿ ಮಳೆ ಮುನ್ಸೂಚನೆ! ಈ ಭಾಗಗಳಲ್ಲಿ ಮಳೆಯಾಗಲಿದೆ

Karnataka Rain Forecast: ಇಂದು ತಮಿಳುನಾಡಿನಲ್ಲಿ ಭಾರಿ ಮಳೆ ಆಗುತ್ತಿದ್ದು ಇದರಿಂದ ಕರ್ನಾಟಕಕ್ಕೆ ಯಾವುದೇ ಪ್ರಭಾವ ಬೀರುವುದಿಲ್ಲ ಇಲ್ಲ ಎಂದು ಹವಾಮಾನ ಇಲಾಖೆ ವರದಿ ನೀಡಿದೆ, ಮತ್ತು ನಾಳೆ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಒಣ ಹವೆ ಇದ್ದು ಚಳಿಯ ವಾತಾವರಣವಿರುತ್ತದೆ ಎಂದು ಹವಮಾನ ಇಲಾಖೆ ವರದಿ ನೀಡಿದೆ.

Karnataka Rain Forecast

ಹವಮಾನ ಇಲಾಖೆಯ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದ್ದು ಕರಾವಳಿ ಉತ್ತರ ಪ್ರದೇಶಗಳಲ್ಲಿ ಒಣ ಹವೆ ಇದೆ ಎಂದು ತಿಳಿಸಿದ್ದಾರೆ ಹಾಗೂ ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶವಿದ್ದು 16.0 ಡಿ.ಸೇಂ ವಿಜಯಪುರದಲ್ಲಿ ದಾಖಲಾಗಿದೆ

ರಾಜ್ಯದಲ್ಲಿ ಮಳೆಯ ಮುನ್ಸೂಚನೆ! ಈ ಭಾಗಗಳಲ್ಲಿ ಮಳೆಯಾಗಲಿದೆ

ರಾಜ್ಯದಲ್ಲಿ ಇಂದು ಮತ್ತೆ ನಾಳೆ ಮಳೆಯಾಗುವ ಸಾಧ್ಯತೆಯಿದ್ದು ಅರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡು ದಕ್ಷಿಣ ಒಳನಾಡಿಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ತಜ್ಞ ಪ್ರಸಾದ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ; ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ, ಎಷ್ಟಿದೆ ನೋಡಿ!

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಹಗುರದಿಂದ ಸಾಧಾರಣ ಮಳೆಯಾಗಲಿದ್ದು ದಕ್ಷಿಣ ಒಳನಾಡಿಗೆ ಬೆಂಗಳೂರು ಗ್ರಾಮಾಂತರ ಬೆಂಗಳೂರು ಕೋಲಾರ ಹಾಸನ ಹಾಗೂ ಚಿಕ್ಕಮಂಗಳೂರು, ರಾಮನಗರ, ಮೈಸೂರು, ಮಂಡ್ಯ ಕೋಲಾರ ಶಿವಮೊಗ್ಗ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ

ಸಾಮಾನ್ಯವಾಗಿ ಮುಂದಿನ 24 ಗಂಟೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು ಮಳೆ ಆಗುವ ಸಾಧ್ಯತೆಗಳಿದೆ ಎಂದು ಹವಾಮಾನ ಇಲಾಖೆ ತಿಳಿಸುತ್ತದೆ ಹಾಗೂ ಗರಿಷ್ಠ ಉಷ್ಣಾಂಶ 24 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತದೆ ನಿಂದು ಹೇಳಿಕೆ ನೀಡಲಾಗಿದೆ.

Latest Trending

Follow us on Instagram Bangalore Today Bangalore Today

Bhagirathi H P
Bhagirathi H P
Articles: 45

Leave a Reply

Your email address will not be published. Required fields are marked *