Kaatera Trailer Review: ಕಾಟೇರ ಟ್ರೈಲರ್ ಬಿಡುಗಡೆ! ಹೇಗಿದೆ ಝಲಕ್ ಇಲ್ಲಿದೆ ನೋಡಿ!

Kaatera Trailer Review: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ D56 ಅಂದರೆ ಬಹು ನಿರೀಕ್ಷಿತ ಸಿನಿಮಾ ಎಂದೇ ಹೇಳಬಹುದಾದ ಕಾಟೇರ ಸಿನಿಮಾ ಡಿಸೆಂಬರ್ 29 ರಂದು ಕರ್ನಾಟಕದಾದ್ಯಂತ ತೆರೆಗೆ ಬರಲಿದ್ದು, ಇದೀಗ ಡಿಸೆಂಬರ್ 16 ರಂದು ಟ್ರೈಲರ್ ಬಿಡುಗಡೆಯಾಗಿದೆ, ಬಹಳ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳು ಕೊನೆಗೂ ಕಾಟೇರ ಚಿತ್ರದ ಟ್ರೇಲರ್‌ನ ಝಲಕ್ ಪಡೆದರು. ಡಿಸೆಂಬರ್ 16 ರಂದು ಬಿಡುಗಡೆಯಾದ ಕಾಟೇರ ಚಿತ್ರದ ಟ್ರೇಲರ್ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ, ಹೌದು ಕೇವಲ 15 ಗಂಟೆಗಳಲ್ಲಿ 5 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

Kaatera Trailer Review

ಕಾಟೇರ ಸಿನಿಮಾದ ಟ್ರೈಲರ್ ನಲ್ಲಿ ದರ್ಶನ್ ರವರು ಕಂಬಾರನ ಪಾತ್ರದಲ್ಲಿ ಬಣ್ಣ ಹಚ್ಚಿದ್ದು ಈ ಚಿತ್ರವು ಗ್ರಾಮೀಣ ಕರ್ನಾಟಕದ ಭಾಗದ ಸೊಬಗನ್ನು ಹೊಂದಿದ್ದು ನಿರಂಕುಶ ಅಧಿಕಾರಿಗಳು ಮತ್ತು ಭೂ ಮಾಲೀಕರ ವಿರುದ್ಧ ದರ್ಶನ್ ರವರು ಹೇಗೆ ಕಂಬಾರನ ಪಾತ್ರದಲ್ಲಿ ಧರ್ಮಯುದ್ಧವನ್ನು ನಡೆಸುತ್ತಾರೆ ಎಂಬುದರ ವಿಷಯದ ಆಧಾರವಾಗಿ ಸಿನಿಮಾ ಕೇಂದ್ರೀಕೃತವಾಗಿದೆ.

ಇದನ್ನೂ ಓದಿ: ಭಾರತೀಯ ಮಾರುಕಟ್ಟೆಗೆ ಬರಲಿದೆ 50 MP ಕ್ಯಾಮೆರಾದೊಂದಿಗೆ Honor ನ Honor 90 GT ಸ್ಮಾರ್ಟ್‌ಫೋನ್, ಏನಿದರ ವಿಶೇಷತೆಗಳು? ಇಲ್ಲಿದೆ ನೋಡಿ

ಕಾಟೇರ ಸಿನಿಮಾದ ಸೆಟ್ಟಿಂಗ್ 1974ರ ಕಾಲಾವಧಿಗೆ ಅನುಗುಣವಾಗಿ ನಿರ್ಮಾಣವಾಗಿದ್ದು ಸಿನಿಮಾಟೋಗ್ರಾಫಿ ವೇಷಭೂಷಣ ಹಾಗೂ ಮೇಕಿಂಗ್ ಕೂಡ ಉತ್ತಮವಾಗಿ ಮೂಡಿಬಂದಿದ್ದು ದರ್ಶನ್ ನಟನೆಯ ತರುಣ್ ಸುಧೀರ್ ನಿರ್ದೇಶನದ ಈ    ಕಾಟೇರ ಚಿತ್ರವು ವಿಭಿನ್ನ ಪ್ರಯತ್ನ ಇಂದೇ ಹೇಳಬಹುದು ಹಾಗಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಸಾಧ್ಯತೆ ಕಂಡು ಬಂದಿದೆ.

ಕಾಟೇರವು ಮೂಲತಃ ನೈಜ ಘಟನೆ ಯಿಂದ ಸ್ಫೂರ್ತಿಯನ್ನು ಪಡೆದಿದೆ ಎಂದು ತರುಣ್ ಸುಧೀರ್ ರವರು ಈ ಹಿಂದೆ ತಿಳಿಸಿದರು ಹಾಗಾಗಿ ಈ ಒಂದು ಕುಂಬಾರನ ಪಾತ್ರಕ್ಕಾಗಿ ದರ್ಶನ್ ರವರು ಹೆಚ್ಚಾಗಿ ಶ್ರಮಿಸಿದ್ದು ತಮ್ಮ ದೇಹದ ತೂಕವನ್ನು ಇಳಿಸಲು ಕಸರತ್ತನ್ನು ಮಾಡಿದ್ದಾರೆ ಹಾಗೂ ಆಕರ್ಷಣೆಯನ್ನು ಹೆಚ್ಚಿಸಿದ್ದಾರೆ ಹಾಗಾಗಿ ದರ್ಶನ್ ರವರ ಕಾಟೇರ ಸಿನಿಮಾ ಡಿಸೆಂಬರ್ 29ಕ್ಕೆ ಅಂದರೆ 2023ರ ವರ್ಷಾಂತ್ಯಕ್ಕೆ ಬಿಡುಗಡೆಯಾಗಲಿದ್ದು ಅಭಿಮಾನಿಗಳ ನಿರೀಕ್ಷೆಯನ್ನು ತುಂಬಲು ಕಾಟೇರ ಚಿತ್ರ ತಂಡ ಸಿದ್ಧತೆಯನ್ನು ಮಾಡಿಕೊಂಡಿದೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *