Get flat 10% off on Wonderla Entry Tickets | Use coupon code "BTWONDER".
Kaatera Movie Review: “ಕಾಟೇರ” ಪಂಚಿಂಗ್ ಡೈಲಾಗ್ ಹಾಗೂ ಆಕ್ಷನ್ ಮೂಲಕ ದರ್ಶನ್ ಅಬ್ಬರ
Kaatera Movie Review: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಲನಚಿತ್ರ ವೃತ್ತಿ ಜೀವನದ ತಮ್ಮ 56ನೇ ಚಿತ್ರವಾದಂತಹ ಕಾಟೇರ ತರುಣ್ ಸುಧೀರ್ ರವರ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಹಲವಾರು ಪ್ರಯೋಗಗಳು ಹಾಗೂ ಸಾಮಾಜಿಕ ಸಂದೇಶವನ್ನು ನೀಡುವಂತಹ ಒಂದು ಚಿತ್ರವಾಗಿದೆ ಬನ್ನಿ ಈ ಚಿತ್ರ ಹೇಗಿದೆ ಮತ್ತು ಇನ್ನಿತರೆ ವಿಚಾರಗಳನ್ನು ಚರ್ಚೆ ಮಾಡೋಣ.
ಚಿತ್ರ: ಕಾಟೇರ. ನಿರ್ಮಾಣ: ರಾಕ್ಲೈನ್ ವೆಂಕಟೇಶ್. ನಿರ್ದೇಶನ: ತರುಣ್ ಸುಧೀರ್. ಪಾತ್ರವರ್ಗ: ದರ್ಶನ್, ಆರಾಧನಾ ರಾಮ್, ಜಗಪತಿ ಬಾಬು, ಅವಿನಾಶ್, ಶ್ರುತಿ, ಕುಮಾರ್ ಗೋವಿಂದ್, ಅಚ್ಯುತ್ ಕುಮಾರ್, ವೈಜನಾಥ ಬೀರಾದಾರ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ದರ್ಶನ್ ಅಭಿನಯದ ಬಹು ನಿರೀಕ್ಷಿತ ವರ್ಷಾಂತ್ಯದ ಸಿನಿಮಾ ಕನ್ನಡ ಸಿನಿಮಾ ಎಂದು ಹೇಳಬಹುದಾದಂತಹ ಕಾಟೇರ ಸಿನಿಮಾವು ಡಿಸೆಂಬರ್ 20ರಂದು ಬಿಡುಗಡೆಯಾಗಿದೆ ಇದನ್ನು ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಈ ಒಂದು ಸಿನಿಮಾಗೆ ತರುಣ್ ಸುಧೀರ್ ರವರು ಆಕ್ಷನ್ ಕಟ್ ಹೇಳಿದ್ದು ಈ ಹಿಂದೆ ರಾಬರ್ಟ್ ಸಿನಿಮಾಗೆ ನಿರ್ದೇಶಕರಾಗಿ ದರ್ಶನ್ ಅವರಿಂದ ವಿಭಿನ್ನ ಶೈಲಿಯ ಪ್ರಯತ್ನಗಳನ್ನು ಮಾಡುವ ಮೂಲಕ ಯಶಸ್ವಿಯನ್ನು ಕಂಡಿದ್ದರು ಇದೇ ನಿರೀಕ್ಷೆಯಲ್ಲಿ ಮೂಡಿಬಂದಿರುವಂತಹ ಸಿನಿಮಾ ವಿಭಿನ್ನ ಶೈಲಿಯಲ್ಲಿ ಮೂಡಿಬಂದಿದ್ದು ಅಭಿಮಾನಿಗಳಿಗೆ ಹೊಸ ವರ್ಷದ ಗಿಫ್ಟ್ ಕಾಟೇರ ಚಿತ್ರ ತಂಡ ನೀಡಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಭಾರತದ ಎತ್ತರದ ವೀಕ್ಷಣಾ ಗೋಪುರ!
ಕಾಟೇರ ಕಥೆ:
ಚಿತ್ರದ ಆರಂಭದಲ್ಲಿ 107 ಜನರ ಪಂಜರ ಕಾಣಿಸುತ್ತದೆ. ಪೊಲೀಸರು ತನಿಖೆ ನಡೆಸಿದಾಗ 15 ವರ್ಷಗಳ ಹಿಂದಿನ ಕಥೆಯೊಂದು ತೆರೆದುಕೊಳ್ಳುತ್ತದೆ. ಆ 107 ಜನರ ಸಾವಿಗೆ ಯಾರು ಹೊಣೆ ಎಂಬ ಪ್ರಶ್ನೆಗೆ ಫ್ಲಾಶ್ ಬ್ಯಾಕ್ ನಲ್ಲಿ ಉತ್ತರ ಸಿಗಲಿದೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಈ ಚಿತ್ರವು ರೈತರಿಗಾಗಿ, ತನ್ನ ಪ್ರಿಯತಮೆಗಾಗಿ, ತನ್ನ ಕುಟುಂಬಕ್ಕಾಗಿ, ಊರಿನ ಜನರಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ನಾಯಕ ಕಾಟೇರನ ಕಥೆಯನ್ನು ಹೇಳುತ್ತದೆ.
ಕಾಟೇರ ಸಿನಿಮಾವು ಸಾಮಾಜಿಕ ಸಂದೇಶವನ್ನು ರವಾನಿಸುವಂತಹ ಚಿತ್ರವಾಗಿದೆ, ಇದರಲ್ಲಿ ರೈತ ವರ್ಗಕ್ಕೆ ಆದಂತಹ ಅನ್ಯಾಯ ಹಾಗೂ ಮೇಲು ಕೇಳು ಎಂಬ ಭೇದಭಾವ ಮುಂತಾದವುಗಳನ್ನು ಹೆಚ್ಚು ಒತ್ತನ್ನು ನೀಡಿ ತೋರಿಸಲಾಗಿದೆ.
ಕಾಟೇರದಲ್ಲಿ ಹಲವಾರು ತಾರೆಯರ ದಂಡು!
ಕಾಟೇರ ಸಿನಿಮಾದಲ್ಲಿ ದರ್ಶನ್ ಮಾತ್ರ ಮಿಂಚಿಲ್ಲ. ಈ ಚಿತ್ರದಲ್ಲಿ ಹಲವು ಪಾತ್ರಗಳು ಹೈಲೈಟ್ ಆಗಿವೆ. ವೈಜನಾಥ ಬಿರಾದಾರ, ಅವಿನಾಶ, ಕುಮಾರ ಗೋವಿಂದ್, ಶ್ರುತಿ ಸೇರಿದಂತೆ ಅನೇಕ ಕಲಾವಿದರು ಕಥೆಯಲ್ಲಿ ಪಾತ್ರ ನಿರ್ವಹಿಸಿದ್ದಾರೆ.
ಈ ಎಲ್ಲ ಕಲಾವಿದರಿಂದಾಗಿ ಸಿನಿಮಾದ ಹೊಳಪು ಹೆಚ್ಚಿದೆ. ಖಳನಾಯಕನಾಗಿ ಜಗಪತಿ ಬಾಬು ಎಂದಿನಂತೆ ಅದ್ಭುತ. ಬಾಲನಟ ರೋಹಿತ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ಅಚ್ಯುತ್ ಕುಮಾರ್ ಕೂಡ ಗಮನ ಸೆಳೆಯುತ್ತಾರೆ.
ಹೇಗಿದೆ ಮಾಲಾಶ್ರೀರವರ ಪುತ್ರಿ ಆರಾಧನಾ ರವರ ನಟನೆ ?
ಇದೇ ಮೊದಲ ಬಾರಿಗೆ ಮಾಲಾಶ್ರೀರವರ ಪುತ್ರಿ ಆರಾಧನಾ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಟೇರ ಚಲನಚಿತ್ರದ ಮೂಲಕ ಕಾಲಿಟ್ಟಿದ್ದು ದರ್ಶನ್ ಗೆ ಜೋಡಿಯಾಗಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಉತ್ತಮ ರೀತಿಯಲ್ಲಿ ನಟಿಸಿದ್ದಾರೆ, ಹಿರಿಯ ಕಲಾವಿದರ ಎದುರು ತಮ್ಮ ಕಲೆಯನ್ನು ವಿಶ್ವಾಸದಿಂದ ವ್ಯಕ್ತಪಡಿಸಿದ್ದಾರೆ ಆ ಮೂಲಕ ತಮ್ಮ ವಯಸ್ಸಿಗೆ ಹೊಂದಾಣಿಕೆ ಆಗುವಂತಹ ನಟನೆ ಆರಾಧನೆ ರವರು ಮಾಡಿದ್ದಾರೆ.
ಹರಿಕೃಷ್ಣ ಅವರ ಸಂಗೀತಕ್ಕೆ ‘ಕಟೇರ’ ಸಿನಿಮಾ ನಿರೀಕ್ಷಿತ ಶಕ್ತಿ ಸಿಗಲಿಲ್ಲ, ಸಿನಿಮಾದ ಅವಧಿ 3 ಗಂಟೆ ಮೀರಿದೆ. ಇದು ಕೆಲವು ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತದೆ.
ಕಾಟೇರ ಸಿನಿಮಾದಲ್ಲಿ ದರ್ಶನ್ ರವರ ನಟನೆಯೂ ಅತ್ಯುತ್ತಮವಾಗಿ ಮೂಡಿ ಬಂದಿದ್ದು ಯುವಕ ಹಾಗೂ ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ದರ್ಶನ್ ರವರು ಬಣ್ಣ ಹಚ್ಚಿದ್ದು ನಿಯಮಿತವಾದ ಪಂಚಿಂಗ್ ಡೈಲಾಗ್ ಹಾಗೂ ಆಕ್ಷನ್ ಸೀನ್ ಗಳಲ್ಲಿ ಉತ್ತಮ ನಟನೆಯನ್ನು ಮಾಡಿರುವಂತಹ ದರ್ಶನ್ ರವರು ಅಭಿಮಾನಿಗಳಿಗೆ ಕೊಡುಗೆಯನ್ನು ನೀಡಿದ್ದಾರೆ.
ಕೆಲವೊಮ್ಮೆ ಶಾಂತ ಸ್ವಭಾವದಿಂದ ಆಕರ್ಷಿತರಾಗುತ್ತಾರೆ. ಇನ್ನೂ ಕೆಲವೊಮ್ಮೆ ಅಬ್ಬರಿಸುತ್ತಾ ಇಷ್ಟವಾಗುತ್ತಾರೆ.
ನಿರ್ದೇಶಕರು ರೆಟ್ರೋ ಅವಧಿಯ ಕಥೆಯನ್ನು ತುಂಬಾ ನೈಜವಾಗಿ ಮಾಡಲು ಪ್ರಯತ್ನಿಸಿದ್ದಾರೆ. ಸಿನಿಮಾಟೋಗ್ರಾಫರ್ ಸುಧಾಕರ್ ಎಸ್.ರಾಜ್ ಅವರ ಕಾರ್ಯ ಶ್ಲಾಘನೀಯ.
Latest Trending
- ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ!, ಇಂದಿನ ಚಿನ್ನ & ಬೆಳ್ಳಿ ದರ ಹೇಗಿದೆ ನೋಡಿ!
- ಹೆಲ್ಮೆಟ್ ಧರಿಸದೆ ವಾಹನ ಚಾಲನೆ! ಸ್ಕೂಟಿ ಪೆಪ್ ಗೆ 3.22 ಲಕ್ಷ ರೂ ದಂಡ ವಿಧಿಸಿದ ಪೊಲೀಸರು
- ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿಗಳು ಬಿಡುಗಡೆ, ಇಲ್ಲಿವೆ ನೋಡಿ, ತಪ್ಪದೆ ಓದಿ!
Follow us on Instagram Bangalore Today