Get flat 10% off on Wonderla Entry Tickets | Use coupon code "BTWONDER".
Indian Railways: ಕರ್ನಾಟಕ- ತಮಿಳುನಾಡಿನ ನಡುವೆ ರೈಲು ಸಂಚಾರ ರದ್ದು, ವಿವರಗಳು ಇಲ್ಲಿದೆ ನೋಡಿ!
Indian Railways: ತಮಿಳುನಾಡಿನಲ್ಲಿ ಮೈಚಾಂಗ್ ಚಂಡಮಾರುತದ ಪರಿಣಾಮವಾಗಿ, ಕರ್ನಾಟಕ ಮತ್ತು ತಮಿಳುನಾಡು ನಡುವೆ ಚಲಿಸುವ 20 ಕ್ಕೂ ಹೆಚ್ಚು ರೈಲುಗಳನ್ನು ನಿಲ್ಲಿಸಲಾಗಿದೆ.
ವಿಶೇಷವಾಗಿ ಮೈಸೂರು ಮತ್ತು ಬೆಂಗಳೂರಿನಿಂದ ಹೋಗುವ ಮತ್ತು ಬರುವ ರೈಲುಗಳು ಹೆಚ್ಚು ಪರಿಣಾಮ ಬೀರಿದ್ದರಿಂದ 26 ರೈಲುಗಳ ಓಡಾಟವನ್ನು ಬಹುತೇಕ ರದ್ದುಗೊಳಿಸಲಾಯಿತು ಮತ್ತು ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಯಿತು. ಆದರೆ ಈಗ ರದ್ದಾದ ರೈಲುಗಳ ಓಡಾಟ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.
ರದ್ದಾದ ರೈಲುಗಳನ್ನು ಹೇಗೆ ನಿರ್ವಹಿಸಬೇಕು ಮತ್ತು ಯಾವ ರೈಲುಗಳು ಎಲ್ಲಿಂದ ಎಲ್ಲಿಗೆ ಓಡುತ್ತವೆ ಎಂಬ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಕರ್ನಾಟಕ-ತಮಿಳುನಾಡು ನಡುವೆ ರೈಲು ರದ್ದತಿ, ವಿವರಗಳನ್ನು ಇಲ್ಲಿ ನೋಡಿ!
- ರೈಲು ಸಂಖ್ಯೆ: 20607 – ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ – ಮೈಸೂರು
- ರೈಲು ಸಂಖ್ಯೆ: 20608 – ಮೈಸೂರು – Dr. MGR ರೈಲ್ವೆ ನಿಲ್ದಾಣ (ಸೆಂಟ್ರಲ್)
- ರೈಲು ಸಂಖ್ಯೆ: 12007 – Dr. MGR ಚೆನ್ನೈ ಸೆಂಟ್ರಲ್ – ಮೈಸೂರು
- ರೈಲು ಸಂಖ್ಯೆ: 12008 – ಮೈಸೂರು- Dr. MGR ಚೆನ್ನೈ ಸೆಂಟ್ರಲ್
- ರೈಲು ಸಂಖ್ಯೆ: 22625 MGR ಚೆನ್ನೈ ಸೆಂಟ್ರಲ್ – KSR ಬೆಂಗಳೂರು,
- ರೈಲು ಸಂಖ್ಯೆ: 22626 KSR ಬೆಂಗಳೂರು – Dr. MGR ಚೆನ್ನೈ ಸೆಂಟ್ರಲ್,
- ರೈಲು ಸಂಖ್ಯೆ 12639 Dr. MGR ಚೆನ್ನೈ ಸೆಂಟ್ರಲ್- KSR ಬೆಂಗಳೂರು,
- ರೈಲು ಸಂಖ್ಯೆ 12640 KSR ಬೆಂಗಳೂರು – Dr. MGR ಚೆನ್ನೈ ಸೆಂಟ್ರಲ್,
- ರೈಲು ಸಂಖ್ಯೆ 12608 ಬೆಂಗಳೂರು – Dr. MGR ಚೆನ್ನೈ ಸೆಂಟ್ರಲ್ ರೈಲುಗಳು ರದ್ದುಗೊಂಡಿವೆ.
ಇದನ್ನೂ ಓದಿ; ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ, ಎಷ್ಟಿದೆ ನೋಡಿ!
ಚಂಡಮಾರುತದಿಂದಾಗಿ ಕಳೆದೆರಡು ದಿನಗಳಿಂದ ಚೆನ್ನೈ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ನೀರು ಸಂಗ್ರಹಗೊಂಡು ಪ್ರವಾಹ, ರಸ್ತೆಗಳು ನದಿಗಳಾಗುತ್ತವೆ.
Latest Trending
- ರಾಜ್ಯದಲ್ಲಿ ಮಳೆ ಮುನ್ಸೂಚನೆ! ಈ ಭಾಗಗಳಲ್ಲಿ ಮಳೆಯಾಗಲಿದೆ!
- Accident: ನಾಯಂಡಹಳ್ಳಿ ಬಳಿ ಕಾರು ಮತ್ತು ಬಸ್ ನಡುವೆ ಅಪಘಾತ: ಕಾರು ಮತ್ತು ಬಿಎಂಟಿಸಿ ಬಸ್ಗೆ ಬೆಂಕಿ,
- ಕರ್ನಾಟಕಕ್ಕೆ ಚೀನಾ ಮೂಲದ ಎಚ್9ಎನ್2 ವೈರಸ್ ಭೀತಿ!
- ನಮ್ಮ ಮೆಟ್ರೋಗೆ ಬಿಬಿಎಂಪಿ ಸೇವಾ ಶುಲ್ಕದ ಹೊರೆ: ಮೆಟ್ರೋ ಟಿಕೆಟ್ ದರ ಹೆಚ್ಚಳ ಸಾಧ್ಯತೆ!
Follow us on Instagram Bangalore Today Bangalore Today