Get flat 10% off on Wonderla Entry Tickets | Use coupon code "BTWONDER".
Deepavali Firecrackers: ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ : ಇಲ್ಲಿದೆ ಮಾಹಿತಿ
Deepavali Firecrackers: ಬೆಳಕಿನ ಹಬ್ಬಕ್ಕೆ ಬಿಬಿಎಂಪಿ ಕೊಡುಗೆಯ ಬದಲು ಪಟಾಕಿ ಬಳಕೆ ನಿರ್ಬಂಧದ ಶಾಕ್ ಗೆ ಬೆಂಗಳೂರಿನ ಜನತೆ ಬೆಚ್ಚಿಬಿದ್ದಿದ್ದಾರೆ. ಹೌದು, ಈ ದೀಪಗಳ ಹಬ್ಬಕ್ಕೆ ಬಿಬಿಎಂಪಿ ವತಿಯಿಂದ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ, ಅಕ್ರಮ ಪಟಾಕಿ ಸಾಗಾಟ, ಹಸಿರು ಪಟಾಕಿ ಕಡ್ಡಾಯ ಬಳಕೆ ಇತ್ಯಾದಿ ಕ್ರಮಗಳನ್ನು ಒಳಗೊಂಡಿದೆ.
Bangalore, November, 10: ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದ ಅತ್ತಿಬೆಲೆ ಪಟಾಕಿ ಅಂಗಡಿ ಅಗ್ನಿ ದುರಂತದ ನಂತರ ಬೃಹತ್ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಈ ಬಾರಿಯ ದೀಪಾವಳಿ ಹಬ್ಬಕ್ಕೆ ಹಲವು ಷರತ್ತುಗಳನ್ನು ಜಾರಿಗೊಳಿಸಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಈ ಬಾರಿಯ ದೀಪಾವಳಿಗೆ ಬಿಬಿಎಂಪಿಯಿಂದ ಹಲವು ಕಡ್ಡಾಯ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಅವುಗಳಲ್ಲಿ ಹಸಿರು ಪಟಾಕಿ ಸಿಡಿಸುವುದು, ಪಟಾಕಿ ಮಾರಾಟಕ್ಕೆ ಐದು ದಿನ ಮಾತ್ರ ಅವಕಾಶ, ಪಟಾಕಿ ಅಕ್ರಮ ಸಾಗಣೆ ತಡೆಯಲು ತಪಾಸಣಾ ಕೇಂದ್ರಗಳನ್ನು ನಿರ್ಮಿಸಲಾಗಿದೆ.
ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಮತ್ತು ಸಿಡಿಲು ಸಿಡಿಸಲು ಅನುಮತಿ!
ಈ ಬಾರಿ ದೀಪಾವಳಿ ಹಬ್ಬಕ್ಕೆ ಬಿಬಿಎಂಪಿ 62 ಮೈದಾನಗಳ ಪೈಕಿ 267 ವ್ಯಾಪಾರಸ್ಥರಿಗೆ ಮಾತ್ರ ಪಟಾಕಿ ಮಾರಾಟ ಮಾಡಲು ಅನುಮತಿ ನೀಡಿದ್ದು, ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದೆ.
ರಾತ್ರಿ ವೇಳೆ ಪಟಾಕಿ ಮಾರಾಟ ಮಾಡಬಾರದು, ಅಂಗಡಿಗಳಲ್ಲಿ ಅಗ್ನಿಶಾಮಕ ಯಂತ್ರಗಳನ್ನು ಹೊಂದಿರಬೇಕು ಎಂಬುದೂ ಸೇರಿದಂತೆ 15 ಕಟ್ಟುನಿಟ್ಟಿನ ಷರತ್ತುಗಳನ್ನು ಪಾಲಿಸುವಂತೆ ಪರವಾನಗಿದಾರರಿಗೆ ಪೊಲೀಸರು ಸೂಚಿಸಿದ್ದಾರೆ.
ಇದನ್ನೂ ಓದಿ; ದೀಪಾವಳಿ ಪ್ರಯುಕ್ತ ಉದ್ಯೋಗಿಗಳಿಗೆ ಉಚಿತ ಕಾರು ಕೊಡುಗೆ
ಶುಕ್ರವಾರದಿಂದ ಮುಂದಿನ 5 ದಿನಗಳ ಕಾಲ ಮಾರಾಟಕ್ಕೆ ಅವಕಾಶ!
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪಟಾಕಿ ಅಂಗಡಿ ಅನಾಹುತದ ಬಳಿಕ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ನಗರಾಭಿವೃದ್ಧಿ ಪ್ರಾಧಿಕಾರ ಶುಕ್ರವಾರದಿಂದ ಮುಂದಿನ ಐದು ದಿನಗಳ ಕಾಲ ಪಟಾಕಿ ಮಾರಾಟಕ್ಕೆ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿದ್ದು, ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ವ್ಯಾಪಾರಿಗಳಿ ಪರವಾನಿಗೆಯನ್ನು ರದ್ದುಪಡಿಸಿ ಕಾನೂನು ಕ್ರಮ ಜರುಗಿಸಲಾಗುವುದು.
ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ!
ಈ ಬಾರಿ ನಗರದಲ್ಲಿ ಪಟಾಕಿ ಸಿಡಿಸಿ ಹಬ್ಬವನ್ನು ಸಂಭ್ರಮಿಸುವಂತಹ ಪಟಾಕಿ ಪ್ರಿಯರಿಗೆ ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿ ಬಿಬಿಎಂಪಿ ಶಾಕ್ ನೀಡಿದೆ, ಈ ಕುರಿತು ಬಿಬಿಎಂಪಿ 10 ಗಂಟೆಯ ಬಳಿಕ ಪಟಾಕಿ ಸಿಡಿಸುವುದರಿಂದ ಇತರರಿಗೆ ತೊಂದರೆ ಆಗಬಹುದು ಹಾಗಾಗಿ ಈ ಒಂದು ನಿಯಮವನ್ನು ಜಾರಿಗೊಳಿಸಲಾಗಿದೆ.
ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಾಣ!
ರಾಜ್ಯ ರಾಜ್ಯಧಾನಿ ಬೆಂಗಳೂರಿಗೆ ಅಕ್ರಮವಾಗಿ ತಮಿಳುನಾಡಿನ ಈಸೂರು ಸೇರಿದಂತೆ ಇತರೆ ಭಾಗಗಳಿಂದ ಅಕ್ರಮ ಪಟಾಕಿ ಸಾಗಾಣಿಕೆಯಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಇದೀಗ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.
ಪ್ರಮುಖವಾಗಿ ಅತ್ತಿಬೆಲೆ, ಕೆ.ಆರ್.ಪುರ, ಯಲಹಂಕ, ಮೈಸೂರು ರಸ್ತೆ ಮತ್ತಿತರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಸಿಬ್ಬಂದಿಯನ್ನು ನೇಮಿಸಲಾಗಿದೆ. ಸರಕು ಸಾಗಣೆ ವಾಹನ ಸೇರಿದಂತೆ ಇತರೆ ವಾಹನಗಳ ತಪಾಸಣೆಗೆ ಸೂಚನೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಬಂಧನೆಗಳು ಏನು?
- ಹಸಿರು ಪಟಾಕಿಗಳನ್ನು ಮಾತ್ರ ಮಾರುವುದು. ಪ್ಯಾಕೆಟ್ ಮೇಲೆ ಹಸಿರು ಪಟಾಕಿ ಚಿಹ್ನೆ, ಕ್ಯೂಆರ್ ಕೋಡ್ ಕಡ್ಡಾಯ
- ಮಳಿಗೆಗಳ ವಿಸ್ತೀರ್ಣ 10*10 ಅಡಿ ಸೀಮಿತ.
- ಹೆಚ್ಚಿನ ಪ್ರಮಾಣದಲ್ಲಿ ಪಟಾಕಿಗಳನ್ನು ದಾಸ್ತಾನು ಮಾಡುವ ಹಾಗಿಲ್ಲ,
- ಸಾಧ್ಯವಾದಷ್ಟು ಅಗ್ನಿಶಾಮಕ ಉಪಕರಣಗಳನ್ನು ಬಳಸಿ ಅಂಗಡಿ ನಿರ್ಮಿಸಬೇಕು
- ಅಂಗಡಿಯ ಮುಂಭಾಗ ಮತ್ತು ಹಿಂಭಾಗಕ್ಕೆ ಪ್ರವೇಶವಿರಬೇಕು.
- ಪ್ರತಿ ಮಾರಾಟ ಮಳಿಗೆಗೆ ಮೂರು ಮೀಟರ್ ಅಂತರ ಕಡ್ಡಾಯವಾಗಿದೆ.
- ಪರವಾನಗಿ ಪತ್ರ ಮಳಿಗೆಯಲ್ಲಿಪ್ರದರ್ಶಿಸಬೇಕು.
- ಪರವಾನಗಿದಾರರು ಅಂಗಡಿಯಲ್ಲಿ ಹಾಜರಿರಬೇಕು.
- ವಿದೇಶಿ ನಿರ್ಮಿತ ಪಟಾಕಿ ಮಾರಾಟಕ್ಕೆ ನಿಷೇಧ.
- ಅಂಗಡಿಯ ಬಳಿ ಧೂಮಪಾನ ಮಾಡುವಂತಿಲ್ಲ
- ಹಗಲಿನ ವೇಳೆಯಲ್ಲಿ ಮಾತ್ರ ಮಾರಾಟವನ್ನು ಅನುಮತಿಸಲಾಗಿದೆ
- ರಾತ್ರಿ ವೇಳೆ ಅಂಗಡಿಯಲ್ಲಿ ಯಾರೂ ಮಲಗದಂತೆ ಎಚ್ಚರಿಕೆ ವಹಿಸಬೇಕು
- ವಿದ್ಯುತ್ ವೈರಿಂಗ್ ಮತ್ತು ಫಿಟ್ಟಿಂಗ್ ವ್ಯವಸ್ಥೆ ಮಾಡಬೇಕು
- ಪರವಾನಗಿ ನೀಡಿದ ದಿನಾಂಕ ಮತ್ತು ಸ್ಥಳದಲ್ಲಿ ಮಾತ್ರ ಮಾರಾಟವನ್ನು ಅನುಮತಿಸಲಾಗಿದೆ
- 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಾರಾಟ ಮಾಡಲಾಗುವುದಿಲ್ಲ.
Latest Trending
- ಗೃಹಲಕ್ಷ್ಮಿ ಯೋಜನೆ 8 ಲಕ್ಷ ಮಹಿಳಾ ಖಾತೆಗಳಿಗೆ 15 ದಿನಗಳಲ್ಲಿ ಜಮೆ
- 7೦ ಸಾವಿರ ಕೊಹ್ಲಿ ಮುಖವಾಡ ಹಂಚಿಕೆ, ಇಂದು ಮೈದಾನ ಕೊಹ್ಲಿ ಮಯಾ.
- ಮೆಟ್ರೋ ಕಾಮಗಾರಿ ಆಮೆ ವೇಗ 2024 ರ ವೇಳೆಗೆ ಮತ್ತಷ್ಟು ಟ್ರಾಫಿಕ್ ಹೆಚ್ಚಳ!
Follow us on Instagram Bangalore Today