Virat Kohli: ಹುಟ್ಟುಹಬ್ಬದಂದು ಶತಕದ ಉಡುಗೊರೆ ಕೊಟ್ಟ ಕ್ರಿಕೆಟ್ ಸಾಮ್ರಾಟ ವಿರಾಟ್ ಕೊಹ್ಲಿ

Virat Kohli 49th ODI Century: ವಿರಾಟ್ ಕೊಹ್ಲಿ ತಮ್ಮ ಹುಟ್ಟುಹಬ್ಬದ ದಿನವಾದ ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 49ನೇ ಶತಕ ಸಿಡಿಸುವ ಮೂಲಕ ”ಏಕದಿನ ಕ್ರಿಕೆಟ್‌” ನಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ತಮ್ಮ ಅಭಿಮಾನಿಗಳಿಗೆ 35 ನೇ ಹುಟ್ಟುಹಬ್ಬದ ಉಡುಗೊರೆಯನ್ನು ನೀಡಿದರು.

Virat Kohli

ಇಂದಿನ ಪಂದ್ಯದಲ್ಲಿ 49ನೇ ಏಕದಿನ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಈ ಹಿಂದೆ ಭವಿಷ್ಯ ನುಡಿದ ಹಾಗೆ ವಿರಾಟ್ ಕೊಹ್ಲಿ ಇದೀಗ ನಿಜವಾಗಿಸಿದ್ದಾರೆ , ಹೀಗಾಗಿ ಸಚಿನ್ ತೆಂಡೂಲ್ಕರ್ ಆಸೆ ಜೀವಂತವಾಗಿದೆ.

ಇದನ್ನೂ ಓದಿ; 7೦ ಸಾವಿರ ಕೊಹ್ಲಿ ಮುಖವಾಡ ಹಂಚಿಕೆ, ಇಂದು ಮೈದಾನ ಕೊಹ್ಲಿ ಮಯಾ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ!

ಇಂದು ಕೋಲ್ಕತ್ತಾದ ಈಡೆನ್ ಗಾರ್ಡನ್‌ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಉತ್ತಮ ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ ಮತ್ತು ಗಿಲ್ 62 ರನ್ ಗಳಿಸಿ ಆಟವಾಡಿದರು. ರೋಹಿತ್ ಶರ್ಮಾ 24 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 6 ಬೌಂಡರಿ ಸೇರಿದಂತೆ 40 ರನ್ ಗಳಿಸಿದರು, ನಂತರ ರಬಾಡಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ತೆರಳಿದರು.

ಭಾರತಕ್ಕೆ ವಿರಾಟ್ ಶತಕದ ಆಸರೆ!

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಕೆಟ್ ಪತನದ ನಂತರ ಬಿಕ್ಕಟ್ಟಿಗೆ ಸಿಲುಕಿದ ಭಾರತ ತಂಡವನ್ನು ವಿರಾಟ್ ಕೊಹ್ಲಿ, ಪಂದ್ಯದ ಕೊನೆಯವರೆಗೂ ನಿಂತು ಆಸರೆಯಾದರು, ವಿರಾಟ್ ಕೊಹ್ಲಿ ಮತ್ತು ಗಿಲ್ ನಡುವೆ 21 ರನ್‌ಗಳ ಆಟವಿತ್ತು, ನಂತರ ಶುಭಮನ್ ಗಿಲ್ ಕೇಶವ್ ಮಹಾರಾಜ್ ಗೆ ವಿಕೆಟ್ನೀಡಿದರು, ನಂತರ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಐಯ್ಯರ್ ಜೊತೆಯಾಟ ಮುಂದುವರೆದು, ಐಯ್ಯರ್ ಔಟ್ ಆದರೂ ಹೀಗೆ ವಿರಾಟ್ ಕೊಹ್ಲಿ ಅವರು 121 ಎಸೆತಗಳಲ್ಲಿ 10 ಬೌಂಡರಿ ಒಳಗೊಂಡಂತೆ 101 ರನ್ ಕಲೆ ಹಾಕಿದ್ದಾರೆ, 50 ಓವರ್ ಗೆ ಭಾರತವು 5 ವಿಕೆಟ್ ನಷ್ಟಕ್ಕೆ 326 ರನ್ ಕಲೆಹಾಕಿದೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *