Kambala in Bangalore: ಬೆಂಗಳೂರಿನಲ್ಲಿ ಮೊದಲ ಬಾರಿ ಕಂಬಳ ಕ್ರೀಡೆ! ಇಲ್ಲಿದೆ ವಿವರ

Kambala in Bangalore: ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೆ ನವೆಂಬರ್ 25 ಮತ್ತು 26 ರಂದು ನಡೆಯಲಿರುವ ”ಬೆಂಗಳೂರು ಕಂಬಳ ನಮ್ಮ ಕಂಬಳ” ಕಾರ್ಯಕ್ರಮಕ್ಕೆ ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ರೈ ನೇತೃತ್ವದಲ್ಲಿ ಜರುಗಲಿದ್ದು 7 ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್ ಕುಮಾರ್ ರೈ, ಬೆಂಗಳೂರು ಕಂಬಳ ಕಾರ್ಯಕ್ರಮ ಅನುಷ್ಠಾನಗೊಳಿಸುವುದಾಗಿ ಘೋಷಿಸಿದರು.

Kambala in Bangalore

Image Credits: Drishti IAS

Bangalore, November 03; ಕಂಬಳ ಕರಾವಳಿ ಕರ್ನಾಟಕದ ಜನಪದ ಕ್ರೀಡೆಯಾಗಿದ್ದು, ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಈ ಕ್ರೀಡೆಯನ್ನು ಹೆಚ್ಚಾಗಿ ಆಡುತ್ತಿರುವುದನ್ನು ನಾವು ಗಮನಿಸಬಹುದು, ಇದೀಗ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಂಬಳ ಕ್ರೀಡೆಯು ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಇದೆ ನವೆಂಬರ್ 25 ಮತ್ತು 26 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ; ಲಸಿಕೆ ಇಲ್ಲದ ಝಿಕಾ ವೈರಸ್ ಗೆ ಕರ್ನಾಟಕದಲ್ಲಿ ಕಟ್ಟೆಚ್ಚರ! ಮುಂಜಾನೆಯ ಸೊಳ್ಳೆಯಿಂದ ಹುಷಾರ್.

ಬೆಂಗಳೂರಿನಲ್ಲಿ ಮೊದಲ ಬಾರಿ ಕಂಬಳ ಕ್ರೀಡೆ!

ಇದೇ ಮೊದಲ ಬಾರಿಗೆ ಕರ್ನಾಟಕದ ಕರಾವಳಿ ಜಾನಪದ ಕ್ರೀಡೆಯಾದಂತಹ ಕಂಬಳ ಕ್ರೀಡೆಯನ್ನು ಬೆಂಗಳೂರಿನ ಅರಮನೆ ಮೈದಾನದ ಆವರಣದ್ದಲ್ಲಿ ಆಯೋಜಿಸಲಾಗಿದ್ದು, ಈ ಒಂದು ಕ್ರೀಡೆಗೆ ಹಲವಾರು ಪ್ರಮುಖ ಗಣ್ಯರನ್ನು ಆಮಂತ್ರಿಸಲಾಗಿದೆ, ಹಾಗೂ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಯೋಜನೆಯನ್ನು ರೂಪಿಸಲಾಗಿದೆ.

ಬೆಂಗಳೂರಿನಲ್ಲಿ  ಪ್ರಥಮ ಬಾರಿಗೆ ಕರ್ನಾಟಕದ ಜಾನಪದ ಕ್ರೀಡೆಯಾದ ಕಂಬಳ ಕ್ರೀಡೆಯನ್ನು ಅಂದರೆ ಕೋಣಗಳ ಓಟದ ಸ್ಪರ್ಧೆ ಅನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಈ ಸ್ಪರ್ಧೆಯು 155 ಮೀಟರ್ ಉದ್ದದ ಓಟದ ಟ್ರ್ಯಾಕ್ ಅನ್ನು ಹೊಂದಿರುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

8 ಲಕ್ಷ ಪ್ರೇಕ್ಷಕರು ಕಂಬಳ ವೀಕ್ಷಿಸುವ ನಿರೀಕ್ಷೆ ಇದೆ!

ಬೆಂಗಳೂರಿನ ಅರೆಮನೆ ಮೈದಾನದಲ್ಲಿ ಆಯೋಜಿಸಿರುವ ಕಂಬಳ ಸ್ಪರ್ಧೆಗೆ ಈಗಾಗಲೇ ಸ್ಪರ್ಧೆಗೆ ಟ್ರ್ಯಾಕ್ ಗಳನ್ನು ಸಿದ್ಧಪಡಿಸುವ ಕಾರ್ಯ ಆರಂಭವಾಗಿದ್ದು, ಈ ಒಂದು ಕಂಬಳ ಕ್ರೀಡೆಯಲ್ಲಿ ಸುಮಾರು 125 ಜೋಡಿ ಎಮ್ಮೆಗಳು ಭಾಗವಹಿಸಲಿವೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

ಆದ್ದರಿಂದ ರಾಜ್ಯದ ವಿವಿಧೆಡೆಯಿಂದ 8 ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಂಬಳ ಕ್ರೀಡೆಯನ್ನು ವೀಕ್ಷಿಸಿ ಈ ಜಾನಪದ ಕ್ರೀಡೆಯ ಸೊಬಗನ್ನು ಸವಿಯುವ ನಿರೀಕ್ಷೆ ಇದೆ. ಕಂಬಳದಲ್ಲಿ ಭಾಗವಹಿಸುವ ಕೋಣಗಳನ್ನು ಕರಾವಳಿ ಭಾಗದಿಂದ ಬೆಂಗಳೂರಿಗೆ ಸಾಗಿಸಲು ಪ್ರತಿ ಮಾಲೀಕರಿಗೆ 50,000 ನೀಡಲಾಗುತ್ತದೆ.

ಇದನ್ನೂ ಓದಿ; ನೇಪಾಳದಲ್ಲಿ ಭೂಕಂಪ ಸಂಕಷ್ಟ ಸಾವಿನ ಲೆಕ್ಕ 128ಕ್ಕೆ ಏರಿಕೆ

ಕಂಬಳಕ್ಕೆ ಕ್ರಿಕೆಟ್, ಬಾಲಿವುಡ್ ತಾರೆಯರಿಗೆ ಆಹ್ವಾನ!

ಬೆಂಗಳೂರು ಕಂಬಳ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಕೆಎಲ್ ರಾಹುಲ್, ಸುನೀಲ್ ಶೆಟ್ಟಿ ಸೇರಿದಂತೆ ಗಣ್ಯರನ್ನು ಆಹ್ವಾನಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಐಶ್ವರ್ಯಾ ರೈ ರಜನಿಕಾಂತ್ ಅವರನ್ನೂ ಆಹ್ವಾನಿಸುವ ಸಾಧ್ಯತೆ ಇದೆ.

Latest Trending

Follow us on Instagram Bangalore Today

Bhagirathi H P
Bhagirathi H P
Articles: 45

Leave a Reply

Your email address will not be published. Required fields are marked *