Bangalore Metro Pink Line: ಡೇರಿ ಸರ್ಕಲ್- ನಾಗವಾರ ಪಿಂಕ್ ಮಾರ್ಗದ ಮೆಟ್ರೋ ಸುರಂಗ ಕಾಮಗಾರಿ ಶೇ. 90ರಷ್ಟು ಪೂರ್ಣ!

Bangalore Metro Pink Line tunnel work: ಬೆಂಗಳೂರಿನ ನಮ್ಮ ಮೆಟ್ರೋನ ಗುಲಾಬಿ ಮಾರ್ಗದ ಸುರಂಗ ಕಾಮಗಾರಿಯು ತ್ವರಿತ ಗತಿಯಲ್ಲಿ ನಡೆಯುತ್ತಿದ್ದು BMRCLಗೆ ಸವಾಲ್ ಆಗಿದ್ದಂತಹ ಈ ಸುರಂಗ ಕೊರೆಯುವ ಕಾಮಗಾರಿಯು ಬಹುತೇಕ ಶೇಕಡ 90ರಷ್ಟು ಪೂರ್ಣಗೊಂಡಿದ್ದು 2024 ವೇಳೆಗೆ ಸಿವಿಲ್ ಕಾಮಗಾರಿ ಸಹ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.

Bangalore Metro Pink Line

Bengaluru, Dec 15: ನಮ್ಮ ಮೆಟ್ರೋನ ಗುಲಾಬಿ ಮಾರ್ಗದ ಸುರಂಗ ಕಾಮಗಾರಿಗೆ ವೇಗ ಹೆಚ್ಚಾಗಿದ್ದು ಬಹುತೇಕ ಶೇ 90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ, ಈಗಾಗಲೇ ಗುಲಾಬಿ ಮಾರ್ಗದ ಸುರಂಗ ಕಾಮಗಾರಿಯಲ್ಲಿ ಡೇರಿ ಸರ್ಕಲ್ ನಿಂದ ನಾಗವಾರದವರೆಗಿನ 13km ಉದ್ದದ 9 ಟಿಬಿಎಂ ಗಳ ಪೈಕಿ 7 ಟಿಬಿಎಂ ಗಳ ಕಾಮಗಾರಿಯು ಪೂರ್ಣಗೊಂಡಿದೆ.

ಇದನ್ನೂ ಓದಿ: ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ ಸುಟ್ಟು ಭಸ್ಮ, ಪ್ರಯಾಣಿಕರು ಸೇಫ್

2024ರ ಅಂತ್ಯದ ವೇಳೆಗೆ ಸಿವಿಲ್ ಕಾಮಗಾರಿ ಒಳಗೊಂಡಂತೆ ಪ್ರಾಥಮಿಕ ಹಂತದ ಕಾಮಗಾರಿಗಳು ಮುಕ್ತಾಯಗೊಳ್ಳುವ ನೀರಿಕ್ಷೆ ಇದೆ, ಅದಾದ ಬಳಿಕ ಟ್ರ್ಯಾಕ್ ಅಳವಡಿಕೆ, ವಿದ್ಯುತ್ ಸಂಪರ್ಕ, ಸೀಕ್ವೆಲ್ ವ್ಯವಸ್ಥೆ ಸೇರಿದಂತೆ ಎಲ್ಲಾ ಕಾರ್ಯಗಳು ಮುಗಿಯಲು ಕನಿಷ್ಠ ಎರಡು ವರ್ಷ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ ಅದರ ಬಳಿಕ ಲೋಕಾರ್ಪಣೆ ಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ದೇಶದಲ್ಲಿ ಅತಿ ದೊಡ್ಡ ಮೆಟ್ರೋ ಸುರಂಗ ಮಾರ್ಗ ಡೈರಿ ಸರ್ಕಲ್ ನಿಂದ ನಾಗವಾರದ ನಡುವೆ ನಿರ್ಮಾಣ!

ಬಿಎಂಆರ್‌ಸಿಎಲ್ 11,500 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ನಮ್ಮ ಮೆಟ್ರೋನ ಗುಲಾಬಿ ಮಾರ್ಗದ ಭಾಗವಾಗಿ ನಿರ್ಮಿಸುತ್ತಿರುವಂತಹ ಮೆಟ್ರೋ ಸುರಂಗ ಮಾರ್ಗವು ದೇಶದಲ್ಲಿ ಅತಿ ದೊಡ್ಡದಾದ ಮೆಟ್ರೋ ಸುರಂಗ ಮಾರ್ಗವಾಗಿದೆ, ಇದು ಸುಮಾರು ಒಟ್ಟು ಉದ್ದ 13.9 ಕಿಲೋಮೀಟರ್ ಉದ್ದದ ಈ ಸುರಂಗ ಮಾರ್ಗವು ಡೇರಿ ಸರ್ಕಲ್ ನಿಂದ ನಾಗವಾರದವರೆ ನಿರ್ಮಿಸಲಾಗುತ್ತಿದೆ.

ಶೇಕಡ 90ರಷ್ಟು ಸುರಂಗ ಕಾಮಗಾರಿ ಪೂರ್ಣ!

ಬೆಂಗಳೂರು ಮೆಟ್ರೋನ ಮಹತ್ತರ ಯೋಜನೆಯ ಭಾಗವಾಗಿರುವಂತಹ ಗುಲಾಬಿ ಮಾರ್ಗದ 13.9 ಕಿಲೋಮೀಟರ್ ಉದ್ದದ ಸುರಂಗ ಮಾರ್ಗ ಕಾಮಗಾರಿಯು ಶೇಕಡ 90ರಷ್ಟು ಮುಕ್ತಾಯಗೊಂಡಿದೆ 20,922 ಮೀಟರ್ ಸುರಂಗ ಮಾರ್ಗದ ಕಾಮಗಾರಿಯ ಪೈಕಿ ಈಗಾಗಲೇ 18,832 ಮೀಟರ್ ಕಾಮಗಾರಿ ಪೂರ್ಣಗೊಂಡಿದೆ, ಹಾಗೂ ಭದ್ರ ಮತ್ತು ತುಂಗಾ ಟಿಬಿಎಮ್‌ನ ಕೆಲಸ ಬಾಕಿ ಉಳಿದಿದೆ.

ರುದ್ರ ಟಿಬಿಎಂ ರಾರಯಂಪ್ ಡೈರಿ ವೃತ್ತದಿಂದ ಲಕ್ಕಸಂದ್ರ ಮತ್ತು ನ್ಯಾಷನಲ್ ಮಿಲಿಟರಿ ಶಾಲೆಯಿಂದ ಶಿವಾಜಿನಗರದವರೆಗೆ 2.೭ ಕಿಲೋಮೀಟರ್ ಉದ್ದದ ಮಾರ್ಗವನ್ನು ಕೊರೆದಿದೆ ‘ಅವನಿ’ ಮತ್ತು ಲವಿ 7 ಕಿಮೀ ಉದ್ದದ ಸುರಂಗವನ್ನು ಕೊರೆದಿದೆ ಅದೇ ಮಾರ್ಗದಲ್ಲಿ ‘ವರದಾ” ರಾಷ್ಟ್ರೀಯ ಮಿಲಿಟರಿ ಶಾಲೆ ಮತ್ತು ಲ್ಯಾಂಗ್‌ ಫೋರ್ಡ್‌ ಟೌನ್‌ವರೆಗೆ 594 ಮೀಟರ್ ಉದ್ದದ ಸುರಂಗದ ಕೆಲಸವನ್ನು ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು- ಮೈಸೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ, ಈ ಓಡಾಡಲಿದೆ ಪ್ರತಿ 10 ನಿಮಿಷಕ್ಕೊಂದು ರೈಲು!

‘ಊರ್ಜಾ’ ಎರಡು ಡ್ರೈವ್‌ಗಳಲ್ಲಿ ಕೆಲಸ ಮಾಡುತ್ತಿರುವ ದಂಡು ರೈಲು ನಿಲ್ದಾಣದಿಂದ ಶಿವಾಜಿನಗರ ಮತ್ತು ದಂಡು ರೈಲು ನಿಲ್ದಾಣ – ಶಾದಿ ಮಹಲ್ ಶಾಫ್ಟ್ ಸ್ಟೇಷನ್‌ಗೆ ಭೂಗತ ಮಾರ್ಗವನ್ನು ಅಗೆದಿದ್ದಾರೆ. ಇದೇ ಮಾರ್ಗದಲ್ಲಿ ‘ವಿಂಧ್ಯಾ’ ಟಿಬಿಎಂ ನಿಂದ ಶಿವಾಜಿನಗರಕ್ಕೆ ಮತ್ತು ಕಂಟೋನ್ಮೆಂಟ್‌ನಿಂದ ಶಾದಿ ಮಹಲ್ ಶಾಫ್ಟ್‌ಗೆ ಸುರಂಗ ಮಾರ್ಗ ನಿರ್ಮಿಸಲಾಗಿದೆ. ವಾಮಿಕಾ ಟಿಬಿಎಂ ಸೌತ್ ರೇಯಾಂಪ್‌ನಿಂದ ಲಾಂಗ್‌ಫೋರ್ಡ್ ಟೌನ್ ಸ್ಟೇಷನ್‌ಗೆ ಸುರಂಗ ಮಾರ್ಗವನ್ನು ನಿರ್ಮಿಸಿದ್ದಾರೆ. ಈ ಭೂಗತ ಮಾರ್ಗ ನಿರ್ಮಾಣಕ್ಕಾಗಿ 650 ಕ್ಕೂ ಹೆಚ್ಚು ಎಂಜಿನಿಯರ್‌ಗಳು ಮತ್ತು ಸಿವಿಲ್ ಸಿಬ್ಬಂದಿ ಪ್ರತಿದಿನ ಶ್ರಮಿಸುತ್ತಿದ್ದಾರೆ.

ಭದ್ರಾ ಟಿಬಿಎಂ ವೆಂಕಟೇಶ್ವರಪುರ-ಕೆ.ಜಿ.ಗ್ರಾಮ ಶೇ.10ರಷ್ಟು ಕಾಮಗಾರಿ ಬಾಕಿ ಉಳಿದಿದ್ದು, ಕೆ.ಜಿ.ಹಳ್ಳಿ ಜತೆಗೆ- ನಾಗವಾರ 935 ಮೀಟರ್ ಕಾಮಗಾರಿ ಬಾಕಿ (ದಕ್ಷಿಣ ಭಾಗ). ತುಂಗಾ ಟಿಬಿಎಂ ಕೆಜಿ ಹಳ್ಳಿ – ನಾಗವಾರ (ಉತ್ತರ ಭಾಗ) ನಡುವೆ 939 ಮೀಟರ್ ಕಾಮಗಾರಿ ಬಾಕಿ ಇದೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *