Get flat 10% off on Wonderla Entry Tickets | Use coupon code "BTWONDER".
Bangalore-Chennai Highway: ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ 3ನೇ ಹಂತದ ಕಾಮಗಾರಿಗೆ 17 ಸಾವಿರ ಕೋಟಿ ಹೂಡಿಕೆ!
Bangalore-Chennai Highway: ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ನಿರ್ಮಾಣ ಕಾಮಗಾರಿಯು ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಮೂರು ಹಂತಗಳ ಪೈಕಿ ಎರಡು ಹಂತದ ಕಾಮಗಾರಿಗಳು ಪೂರ್ಣಗೊಂಡಿದ್ದು, ಮೂರನೇ ಹಂತಕ್ಕೆ ಅಂದರೆ ಗ್ರೀನ್ ಫೀಲ್ಡ್ ಕಾರಿಡಾರ್ಗೆ ಪ್ರಮುಖ ಮೂಲಸೌಕರ್ಯ ಕಲ್ಪಿಸಲು ಹೂಡಿಕೆ ಮಾಡಲಾಗುತ್ತಿದೆ.
ಬೆಂಗಳೂರು; ಬೆಂಗಳೂರು ಮತ್ತು ಚೆನ್ನೈ ನಡುವೆ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ 262 ಕಿಮೀ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ 3 ಹಂತಗಳಲ್ಲಿ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ, ಅಕ್ಟೋಬರ್ 2024 ರ ನಂತರ ಈ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಕೆಲಸವನ್ನು ಪೂರ್ಣಗೊಳಿಸುವುದು, ಮತ್ತು ಇದು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಒದಗಿಸುತ್ತದೆ ಎಂದು ವರದಿಯಾಗಿದೆ. ಈ ಹೆದ್ದಾರಿಯು ಬೆಂಗಳೂರು-ಚೆನ್ನೈ ನಡುವೆ ಗುಡಮಟ್ಟದ ಸಂಪರ್ಕ ಕಲ್ಪಿಸುವ ಮೂಲಕ ಪ್ರಮುಖ ಮೂಲ ಸೌಕರ್ಯ ಕಲ್ಪಿಸುವ ಹೂಡಿಕೆಯು ಇದಾಗಿದೆ.
ಇದನ್ನೂ ಓದಿ: ಹೆಲ್ಮೆಟ್ ಧರಿಸದೆ ವಾಹನ ಚಾಲನೆ! ಸ್ಕೂಟಿ ಪೆಪ್ ಗೆ 3.22 ಲಕ್ಷ ರೂ ದಂಡ ವಿಧಿಸಿದ ಪೊಲೀಸರು
3ನೇ ಹಂತದ ಕಾಮಗಾರಿಗೆ 17000 ಕೋಟಿ ರೂ.!
ಬೆಂಗಳೂರು ಚೆನ್ನೈ ಎಕ್ಸ್ಪ್ರೆಸ್ವೇಯ ಮೂರು ಹಂತಗಳ ಪೈಕಿ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಅಂತಿಮ ಹಂತ ತಲುಪಿದ್ದು, ಮೂರನೇ ಹಂತದಲ್ಲಿ ಗ್ರೀನ್ ಫೀಲ್ಡ್ ಕಾರಿಡಾರ್ ನಿರ್ಮಾಣಕ್ಕೆ 17,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪ್ರಮುಖ ಮೂಲಸೌಕರ್ಯ ಕಲ್ಪಿಸುವ ಹೂಡಿಕೆಯು ಇದಾಗಿದ್ದು, ಇದರ ನಿರ್ಮಾಣದ ಬಳಿಕ ಸಂಚಾರಕ್ಕೆ ಮುಕ್ತವಾಗುವ ಅವಕಾಶವನ್ನು ಕಲ್ಪಿಸುತ್ತದೆ ಆ ಮೂಲಕ ಪ್ರಸ್ತುತ 6 ರಿಂದ 7 ಗಂಟೆವರೆಗಿನ ಪ್ರಯಾಣ ದೂರ ಕಾಲಾವಧಿಯನ್ನು 2 ರಿಂದ 3 ಗಂಟೆಗೆ ಇಳಿಕೆಯಾಗಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಮಾರ್ಗಸೂಚಿಯನ್ನು ಅನುಮೋದಿಸಿದ್ದು ಇದನ್ನು ಜಾಗತಿಕ ಮಟ್ಟದ ಅಧ್ಯಯನಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ, ಆದ್ದರಿಂದ ಈ ಹೆದ್ದಾರಿಯು ಚಾಲಕರಿಗೆ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಸ್ಪಷ್ಟ ಗೋಚರತೆ ಮತ್ತು ಸರಿಯಾದ ಮಾರ್ಗದರ್ಶನವನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಸಾರಿಗೆ ಸಚಿವಾಲಯ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿಗಳು ಬಿಡುಗಡೆ, ಇಲ್ಲಿವೆ ನೋಡಿ, ತಪ್ಪದೆ ಓದಿ!
ಬೆಂಗಳೂರು ಚೆನ್ನೈ ಎಕ್ಸ್ಪ್ರೆಸ್ವೇ ಯಲ್ಲಿ ಸೂಚನಾ ಫಲಕ ಹಾಗೂ ವಿವಿಧ ಅವಶ್ಯಕತೆ ಸ್ಥಳಗಳಲ್ಲಿ ಹಾಗೂ ಸಂದರ್ಭಗಳಲ್ಲಿ ಬಹುಭಾಷಾ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ ಇದರಿಂದ ಇಂಗ್ಲಿಷ್ ಮಾತ್ರವಲ್ಲದೇ ಪ್ರಾದೇಶಿಕ ಭಾಷೆಗಳಲ್ಲೂ ವಾಹನ ಸವಾರರು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಇದರಿಂದ ಉತ್ತಮ ಸಂವಹನ ಹಾಗೂ ಅರಿವು ಮೂಡಿಸಲು ನೆರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು 2023 ರ ಜನವರಿಯಲ್ಲಿ ವೈಮಾನಿಕ ಸಮೀಕ್ಷೆಯ ಮೂಲಕ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ಕಾಮಗಾರಿಯನ್ನು ಪರಿಶೀಲಿಸಿದ್ದರು ಮತ್ತು ಈಗ ಈ ಮಾರ್ಗವು ಅಕ್ಟೋಬರ್ 2024 ರ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಸಿದ್ಧವಾಗಲಿದೆ ಎಂದು ವರದಿ ತಿಳಿಸಿದೆ.
Latest Trending
- ಕರ್ನಾಟಕಕ್ಕೆ KSRTC ಹೆಸರು ಬಳಕೆಗೆ ಮದ್ರಾಸ್ ಹೈಕೋರ್ಟ್ ನಿಂದ ಗ್ರೀನ್ ಸಿಗ್ನಲ್, ಕೇರಳ ರಾಜ್ಯ ಸಾರಿಗೆ ಸಲ್ಲಿಸಿದ ಅರ್ಜಿ ವಜಾ!
- ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇಗಿಂತ ಸರ್ವಿಸ್ ರಸ್ತೆಯಲ್ಲಿ ಅಪಘಾತಗಳು ಹೆಚ್ಚು!
- ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಸುಟ್ಟು ಭಸ್ಮ, ಪ್ರಯಾಣಿಕರು ಸೇಫ್
- ಯುವ ನಿಧಿ ಯೋಜನೆಗೆ ಅರ್ಜಿ ಆಹ್ವಾನ & ಭತ್ಯೆ ಹಣ ಖಾತೆಗೆ ವರ್ಗಾವಣೆ ಯಾವಾಗ ? ಇಲ್ಲಿದೆ ಸಂಪೂರ್ಣ ವಿವರ!
Follow us on Instagram Bangalore Today