Get flat 10% off on Wonderla Entry Tickets | Use coupon code "BTWONDER".
Bangalore Cantonment: ಬೆಂಗಳೂರಿನ ಕಾಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ವಿಶ್ವ ದರ್ಜೆಯ ಸೌಕರ್ಯ; 2025ರ ಅಕ್ಟೋಬರ್ ವೇಳೆಗೆ ಕಾಮಗಾರಿ ಪೂರ್ಣ!
Bangalore Cantonment Railway Station: ಬೆಂಗಳೂರಿನ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾದಂತಹ ಕಾಂಟೋನ್ಮೆಂಟ್ ರೈಲ್ವೆ ನಿಲ್ದಾಣಕ್ಕೆ ವಿಶ್ವ ದರ್ಜೆಯ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದ್ದು 2025ರ ಅಕ್ಟೋಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಈ ನಿಟ್ಟಿನಲ್ಲಿ ಕಾಮಗಾರಿಯು ಅತ್ಯಂತ ಬರದಿಂದ ಸಾಗುತ್ತಿದೆ.
Bangalore: ಬೆಂಗಳೂರಿನ ಕಾಂಟೊನ್ಮೆಂಟ್ ರೈಲ್ವೆ ನಿಲ್ದಾಣದ ಕಾಮಗಾರಿಯು ಶೇಕಡಾ 15ರಷ್ಟು ಪೂರ್ಣಗೊಂಡಿದ್ದು 2025ರ ವೇಳೆಗೆ ಪೂರ್ಣಗೊಳ್ಳಲಿದೆ ಬೆಂಗಳೂರಿನಿಂದ ಇತರ ಜಿಲ್ಲೆ ಮತ್ತು ಅಂತರ ರಾಜ್ಯಗಳಿಗೆ ರೈಲು ಸೇವೆಯನ್ನು ಕಲ್ಪಿಸುವುದರ ಜೊತೆಗೆ ಉಪನಗರ ರೈಲುಗಳ ಸೇವೆಯನ್ನು ಸಹ ಈ ರೈಲು ನಿಲ್ದಾಣವು ಒದಗಿಸುತ್ತದೆ. ಹಾಗಾಗಿ ನೈರುತ್ಯ ರೈಲ್ವೆ ವಿಭಾಗದಲ್ಲಿ ಬರುವಂತಹ ಅತ್ಯಂತ ಹಳೆಯ ರೈಲು ನಿಲ್ದಾಣವು ಕಂಟ್ರೋಲ್ಮೆಂಟ್ ರೈಲು ನಿಲ್ದಾಣವಾಗಿದೆ.
ಈ ನಿಲ್ದಾಣಕ್ಕೆ ಅತ್ಯಧುನಿಕ ತಂತ್ರಜ್ಞಾನದ ಸ್ಪರ್ಶ ನೀಡುವ ಮೂಲಕ 2025ರ ವೇಳೆಗೆ ವಿಶ್ವ ದರ್ಜೆಯ ಸೌಲಭ್ಯವನ್ನು ಕಲ್ಪಿಸುವ ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು 480 ಕೋಟಿ ರೂ ವೆಚ್ಚದಲ್ಲಿ ನವೀಕರಣ ಯೋಜನೆಯನ್ನು ಈಗಾಗಲೇ ರೂಪಿಸಿದೆ.
ಇದನ್ನೂ ಓದಿ: ಶಿವರಾಮ ಕಾರಂತ ಬಡಾವಣೆಯ ಸೈಟ್ ಹಂಚಿಕೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ; ಕಾರಣ ಇಲ್ಲಿದೆ ನೋಡಿ!
ಈ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಯೋಜನೆಯು ನಗರದ ಮೂಲಭೂತ ಸೌಕರ್ಯ ಹೆಚ್ಚಿಸುವುದರ ಮೂಲಕ ನಗರದ ಸಾರಿಗೆ ಸೌಲಭ್ಯ ಕಲ್ಪಿಸುವುದರ ಗುರಿಯನ್ನು ಹೊಂದಿದೆ ಹಾಗೂ ಈ ನಿರ್ಧಾರದ ಮೂಲಕ ರೈಲ್ವೇ ನಿಲ್ದಾಣದ ಪಾರಂಪರಿಕ ಶೈಲಿಯನ್ನು ಉಳಿಸಿಕೊಂಡು ನವೀನ ರೂಪವನ್ನು ನೀಡುವ ಗುರಿಯನ್ನು ಹೊಂದಿದ್ದು ನಿಲ್ದಾಣವು ಮುಂದಿನ ವರ್ಷದಲ್ಲಿ ಪ್ರಯಾಣಿಕರಿಗೆ ವಿಶ್ವ ದರ್ಜೆಯ ಸೌಲಭ್ಯದೊಂದಿಗೆ ಬಳಕೆಗೆ ಲಭ್ಯವಾಗುತ್ತದೆ.
ಮೊದಲನೆಯ ಹಂತದ ಕಾಮಗಾರಿಗೆ 35 ಕೋಟಿ ರೂ ವೆಚ್ಚ!
ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಅಭಿವೃದ್ಧಿ ಯೋಜನೆಗೆ 2020ರ ಜೂನ್ 20ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಚಾಲನೆಯನ್ನು ನೀಡಿದ್ದರು ಹಾಗೂ 2025ರ ವರೆಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಪೂರ್ಣಗೊಂಡಿದೆ. ಹಾಗೂ 35 ಕೋಟಿ ರೂಪಾಯಿಗಳು ಆರ್ಥಿಕ ವೆಚ್ಚ ತಗಲಿದೆ ಎಂದು ತಿಳಿದುಬಂದಿದೆ ಹಾಗೂ 25,000 ಚದರಡಿ ವಿಸ್ತೀರ್ಣದ ನಿಲ್ದಾಣಕ್ಕೆ ಹೆಚ್ಚುವರಿಯಾಗಿ 75,000 ಅಡಿ ಜಾಗ ಸೇರಿಸಿ ಒಟ್ಟು ಒಂದು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ವಿಶ್ವಾದರ್ಜೆ ಪ್ರಾಯಾಣಿಕ ಸೌಕರ್ಯವನ್ನು ಕಲ್ಪಿಸುವ ರೈಲ್ವೆ ನಿಲ್ದಾಣದ ಕಾಮಗಾರಿ ನಡೆಯುತ್ತಿದೆ.
ಈ ರೈಲ್ವೆ ನಿಲ್ದಾಣದಲ್ಲಿ ಪ್ರಮುಖವಾಗಿ ವಸಂತನಗರ ಭಾಗಕ್ಕೆ ಮುಖ್ಯ ಪ್ರವೇಶ ದ್ವಾರವನ್ನು ನಿರ್ಮಿಸಲಾಗುತ್ತಿದೆ ಹಾಗೂ ಮಿಲ್ಲರ್ಸ್ ರಸ್ತೆಗೆ ಎರಡನೇ ಪ್ರವೇಶ ದ್ವಾರವನ್ನು ನಿರ್ಮಿಸುವ ಮೂಲಕ ಎರಡು ಬದಿಗಳಲ್ಲಿಯೂ ಟಿಕೆಟ್ ಕೌಂಟರ್ ತೆರೆದು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಅವಕಾಶವನ್ನು ಕಲ್ಪಿಸಲಾಗುವುದು ತಿಳಿದು ಬಂದಿದೆ.
2000 ವಾಹನಗಳನ್ನು ನಿಲುಗಡೆ ಮಾಡಬಹುದಾದಷ್ಟು ಬೃಹತ್ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣ!
ಬೆಂಗಳೂರಿನ ಪ್ರಮುಖ ರೈಲು ನಿಲ್ದಾಣಗಳ ಪೈಕಿ ಒಂದಾಗಿರುವ ಅಂತಹ ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ ಬೃಹತ್ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಆ ಮೂಲಕ ಬೈಕ್ ಮತ್ತು ಕಾರುಗಳು ಒಳಗೊಂಡಂತೆ 2 ಸಾವಿರ ವಾಹನಗಳನ್ನು ನಿಲುಗಡೆ ಮಾಡಲಾಗುವಷ್ಟು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಪ್ರತಿನಿತ್ಯ ನೂರಕ್ಕೂ ಹೆಚ್ಚು ರೈಲುಗಳ ಮೂಲಕ ಸಂಚರಿಸುವ 50,000ಕ್ಕೂ ಹೆಚ್ಚು ಪ್ರಯಾಣಿಕರಿಗೆ ವಾಹನಗಳ ಪಾರ್ಕಿಂಗ್ ಮಾಡಲು ಪ್ರಯೋಜನವಾಗಲಿದೆ.
ನಿಲ್ದಾಣದ ಕಾಮಗಾರಿಗೆ ಮತ್ತಷ್ಟು ವೇಗವನ್ನು ನೀಡಲಾಗಿದ್ದು ಈಗಾಗಲೇ 24 ಮೀಟರ್ ರಸ್ತೆ ಕಾಮಗಾರಿಯ ಪೈಕಿ 20 ಮೀಟರ್ ಕಾಮಗಾರಿ ಪೂರ್ಣವಾಗಿದೆ ಹಾಗೂ ರೈಲ್ವೆ ನಿಲ್ದಾಣದ ದಕ್ಷಿಣ ಭಾಗದಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದ ಅಡಿಪಾಯದ ಕೆಲಸ ಅರ್ಧದಷ್ಟು ಮುಗಿದಿದೆ ಹಾಗೂ ಮುಂದಿನ ದಿನಗಳಲ್ಲಿ ಸಿಎ ಓ ಕಾಂಪ್ಲೆಕ್ಸ್ ಮತ್ತು 4 ಕಾಲ್ನಡಿಗೆ ಸೇತುವೆಗಳ ನಿರ್ಮಾಣಕ್ಕೆ ಅಡಿಪಾಯ ಪೂರ್ಣವಾಗಲಿದ್ದು ಎರಡನೆಯ ಹಂತದ ಕಾಮಗಾರಿ ಆರಂಭಿಸಲಾಗುವುದು ಎಂದು ಇಂಜಿನಿಯರ್ ಒಬ್ಬರು ತಿಳಿಸಿದ್ದಾರೆ.
Latest Trending
- ಬೆಂಗಳೂರಿನ ಪೀಣ್ಯ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿಷೇಧ; ಕಾರಣ ಇಲ್ಲಿದೆ
- ಶಿವರಾಮ ಕಾರಂತ ಬಡಾವಣೆಯ 10,000 ನಿವೇಶನಗಳನ್ನು ಮಾರಾಟ ಮಾಡಲು ಬಿಡಿಎ ಸಿದ್ಧತೆ; ದರ ಎಷ್ಟಿದೆ? ಅರ್ಜಿ ಆಹ್ವಾನ ಯಾವಾಗ?
- ಅನ್ನಭಾಗ್ಯ ಯೋಜನೆ ಶೇ. 82ರಷ್ಟು ಫಲಾನುಭವಿಗಳು ನಗದು ಬದಲು ಅಕ್ಕಿಗೆ ಬೇಡಿಕೆ
Follow us on Instagram Bangalore Today