Watermelon Benefits in Kannada: ಕಲ್ಲಂಗಡಿ ಹಣ್ಣಿನಲ್ಲಿ ಅಡಗಿರುವ ಆರೋಗ್ಯ ಪ್ರಯೋಜನಗಳು

Watermelon Benefits in Kannada: ಬೇಸಿಗೆ ಕಾಲದಲ್ಲಿ ಹೇರಳವಾಗಿ ದೊರೆಯುವ ಹಣ್ಣುಗಳಲ್ಲಿ ಕಲ್ಲಂಗಡಿಯೂ ಒಂದು, ಇದರಲ್ಲಿ ವಿಟಮಿನ್ ಎ, ಬಿ1, ಬಿ6, ಸಿ ಮತ್ತು ಪೊಟಾಶಿಯಂ, ಮೆಗ್ನೀಷಿಯಂ, ಬಯೋಟಿನ್ ನಂತಹ ಸಾಕಷ್ಟು ಪೋಷಕಾಂಶಗಳಿವೆ. ಬೇಸಿಗೆ ಕಾಲದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಲು ಕಲ್ಲಂಗಡಿ ಹಣ್ಣನ್ನು ತಿನ್ನುವುದು ಅಥವಾ ಜ್ಯೂಸ್ ರೂಪದಲ್ಲಿ ಕುಡಿಯುವುದು ಒಳ್ಳೆಯದು.

ಕಲ್ಲಂಗಡಿ ಸೇವನೆಯಿಂದ ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸಬಹುದು ಮತ್ತು ಕಲ್ಲಂಗಡಿಯಲ್ಲಿರುವ ಔಷಧೀಯ ಗುಣಗಳು ದೇಹದಿಂದ ತ್ಯಾಜ್ಯ ವಸ್ತುಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕಬಹುದು. ಇದನ್ನು ಸೇವಿಸುವುದರಿಂದ ದೇಹವು ಆಂತರಿಕವಾಗಿ ಶುದ್ಧವಾಗಿರುತ್ತದೆ ಮತ್ತು ಸೋಂಕುಗಳನ್ನು ತಡೆಯುತ್ತದೆ. ಹೀಗೆ ಹಲವಾರು ಪ್ರಮುಖ ಪ್ರಯೋಜನಗಳನ್ನು ಹೊಂದಿರುವ ಕಲ್ಲಂಗಡಿ ಇತರ ಉಪಯೋಗಗಳು ಈ ಕೆಳಗಿನಂತಿವೆ.

Watermelon Benefits in Kannada

 

ಚರ್ಮ ಕಪ್ಪಾಗುವಿಕೆಯನ್ನು ತಡೆಗಟ್ಟುತ್ತದೆ:

ಬೇಸಿಗೆಯ ಬಿಸಿಲಿಗೆ ತೆರೆದುಕೊಂಡವರ ತ್ವಚೆ ಸಹಜವಾಗಿಯೇ ಕಪ್ಪಾಗುತ್ತದೆ ಮತ್ತು ತ್ವಚೆಯ ಮೇಲಿನ ದದ್ದುಗಳ ಉರಿಯು ಕಾಣುತ್ತವೆ. ಇಂತಹ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು ಅದರಲ್ಲಿರುವ ಪೋಷಕಾಂಶಗಳು ಚರ್ಮದ ಸಮಸ್ಯೆಯನ್ನು ನಿವಾರಿಸುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ;

ಕಲ್ಲಂಗಡಿಯಲ್ಲಿ ನೀರು ಮತ್ತು ನಾರಿನಂಶ ಹೆಚ್ಚಿದ್ದು ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಇದರಲ್ಲಿರುವ ಫೈಬರ್ ಅಂಶವು ಮಲಬದ್ಧತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯ ಕಾಪಾಡುತ್ತದೆ;

ಕಲ್ಲಂಗಡಿ ಹಣ್ಣಿನಲ್ಲಿರುವ ಪೋಷಕಾಂಶಗಳು ಹೃದಯದ ಸಮಸ್ಯೆಗಳಿಗೆ ಉತ್ತಮ ಆಹಾರವಾಗಿದೆ. ಇದರ ಸೇವನೆಯಿಂದ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲಾಗುತ್ತದೆ. ಅಧ್ಯಯನಗಳ ಪ್ರಕಾರ, ಕಲ್ಲಂಗಡಿಯಲ್ಲಿರುವ ಲೈಕೋಪೀನ್ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಸಿಟ್ರುಲಿನ್ ಎಂಬ ಅಮೈನೋ ಆಮ್ಲವನ್ನು ಹೊಂದಿರುತ್ತದೆ. ಇದರ ಸೇವನೆಯು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಮಟ್ಟವನ್ನು ಹೆಚ್ಚಿಸುತ್ತದೆ.

ಉರಿಯೂತ ನಿವಾರಣೆ:

ಕಲ್ಲಂಗಡಿ ಲೊಕೊಪೆನ್, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಆಕ್ಸಿಡೇಟಿವ್ ಹಾನಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ; ದಿನಕ್ಕೆ ಒಂದು ಸೇಬು ತಿನ್ನುವುದರಿಂದ ಆಗುವ ಪ್ರಯೋಜನಗಳು

ಕ್ಯಾನ್ಸರ್ ತಡೆಗಟ್ಟುವಿಕೆ:

ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪೀನ್ ಮತ್ತು ಕ್ಯುಕುರ್ಬಿಟಾಸಿನ್ ಸೇರಿದಂತೆ ಅನೇಕ ರೀತಿಯ ಸಸ್ಯ ಸಂಯುಕ್ತಗಳಿವೆ, ಇದು ಕ್ಯಾನ್ಸರ್ ಅನ್ನು ತಡೆಯುತ್ತದೆ.

ನಿರ್ಜಲೀಕರಣ ತಡೆಯುತ್ತದೆ:

ಕಲ್ಲಂಗಡಿ ಹಣ್ಣಿನ ರಸವನ್ನು ಕುಡಿಯುವುದರಿಂದ ನಿರ್ಜಲೀಕರಣದಿಂದ ದೂರವಿಡಬಹುದು. ಇದು ದೇಹದ ಉಷ್ಣತೆಯನ್ನು ಸಮತೋಲನಗೊಳಿಸುತ್ತದೆ, ಜೀವಕೋಶಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಅಂಗಾಂಶಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು 92 ರಷ್ಟು ನೀರಿನ ಅಂಶವನ್ನು ಹೊಂದಿದೆ ಮತ್ತು ಕ್ಯಾಲೋರಿಗಳಲ್ಲಿ ತುಂಬಾ ಕಡಿಮೆಯಾಗಿದೆ. ದೇಹದ ತೂಕವನ್ನು ಕಡಿಮೆ ಮಾಡಲು ಕಲ್ಲಂಗಡಿ ಸಹಕಾರಿ.

ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ:

ಕಲ್ಲಂಗಡಿ ಹಣ್ಣಿನಲ್ಲಿರುವ ಲೈಕೋಪೀನ್ ಅಂಶವು ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಮತ್ತು ಇದರ ಸೇವನೆಯು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಕಣ್ಣಿನ ಸಮಸ್ಯೆಗೆ ಸಹ ಒಳ್ಳೆಯದು.

Reference

Medically Reviewed By

Amy Richter, MS, RD

 

Follow us on Instagram Bangalore Today

Bhagirathi H P
Bhagirathi H P
Articles: 46

Leave a Reply

Your email address will not be published. Required fields are marked *