Virat Kohli: ವಿರಾಟ್ ಕೊಹ್ಲಿ ಮಾರ್ಚ್ 2024 ರವರೆಗೆ ವೈಟ್ ಬಾಲ್ ಕ್ರಿಕೆಟ್ ಆಡುವುದಿಲ್ಲ! ಕಾರಣ ಇಲ್ಲಿದೆ

Virat Kohli: ಭಾರತ ಆತಿಥ್ಯ ವಹಿಸಿದ್ದಂತಹ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಬಳಿಕ ವಿರಾಮದಲ್ಲಿರುವ ಭಾರತ ತಂಡದ ದಿಗ್ಗಜ ಆಟಗಾರ, ಕ್ರಿಕೆಟ್ ಲೋಕದ ಚಕ್ರವರ್ತಿ ಎಂದೇ ಖ್ಯಾತರಾಗಿರುವ ವಿರಾಟ್ ಕೊಹ್ಲಿ ಮುಂದಿನ ಮಾರ್ಚ್ 2024, ವರೆಗೂ ವೈಟ್ ಬಾಲ್ ಕ್ರಿಕೆಟ್ ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಕಾರಣ ಇಲ್ಲಿದೆ ನೋಡಿ.

ವಿರಾಟ್ ಕೊಹ್ಲಿ ತಮ್ಮ 23 ನೇ ವಯಸ್ಸಿನಲ್ಲಿ 2011 ರಲ್ಲಿ ತಮ್ಮ ODI ವಿಶ್ವಕಪ್‌ಗೆ ಪಾದಾರ್ಪಣೆ ಮಾಡಿದರು ಮತ್ತು ತಮ್ಮ ಅದ್ಭುತ ಪ್ರದರ್ಶನದಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಯನ್ನು ಗಳಿಸಿದರು ಮತ್ತು ಭಾರತ ಆತಿಥ್ಯ ವಹಿಸಿದ್ದ ICC ODI ವಿಶ್ವಕಪ್‌ನ 13 ನೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಅತ್ಯುನ್ನತ ಆಟಗಾರರಾಗಿ ಹೊರಹೊಮ್ಮಿದ್ದಾರೆ. 2003 ರ ಆವೃತ್ತಿಯಲ್ಲಿ ತೆಂಡೂಲ್ಕರ್ 673 ರನ್ ಗಳಿಸಿದ್ದರು ಆದರೆ ವಿರಾಟ್ ಕೊಹ್ಲಿ 2023 ರ ಏಕದಿನ ವಿಶ್ವಕಪ್ ಆವೃತ್ತಿಯಲ್ಲಿ 11 ಪಂದ್ಯಗಳಿಂದ 765 ರನ್ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

Virat Kohli

ಏಕದಿನ ಮತ್ತು ಟಿ20 ಕ್ರಿಕೆಟ್‌ನಿಂದ ದೂರವೇಕೆ?

ಭಾರತದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಈಗಾಗಲೇ ವಿಶ್ವಕಪ್ ನಂತರ ವಿಶ್ರಾಂತಿಯಲ್ಲಿದ್ದಾರೆ ಮತ್ತು ಈ ಕಾರಣದಿಂದಾಗಿ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾಗವಹಿಸಲಿಲ್ಲ. ಮುಂದಿನ ಮಾರ್ಚ್ 2024 ರವರೆಗೆ ವೈಟ್ ಬಾಲ್ ಕ್ರಿಕೆಟ್ ಆಡುವುದಿಲ್ಲ ಎಂದು ವಿರಾಟ್ ಕೊಹ್ಲಿ ಬಿಸಿಸಿಐಗೆ ತಿಳಿಸಿದ್ದಾರೆ, ಹೀಗಾಗಿ ಸ್ವಲ್ಪ ಸಮಯದವರೆಗೆ ವೈಟ್ ಬಾಲ್ ಕ್ರಿಕೆಟ್ ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಇದಕ್ಕೆ ಕಾರಣ ಏನೆಂದರೆ, 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 13ನೇ ಆವೃತ್ತಿಯ ಹತ್ತು ಪಂದ್ಯಗಳಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಬ್ಯಾಟಿಂಗ್ ವೈಫಲ್ಯದಿಂದ ಆಸ್ಟ್ರೇಲಿಯಾ ತಂಡದ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೋಲನ್ನು ಅನುಭವಿಸುವುದರ ಮೂಲಕ ರನ್ನರ್ ಅಪ್ ಆಗಿ ಭಾರತ ತಂಡ ಹೊರಹೊಮ್ಮಿತು.

ಇದರಿಂದ ಭಾರತ ತಂಡದ ಆಟಗಾರರು ಮಾತ್ರವಲ್ಲದೆ ಇಡೀ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬೇಸರಗೊಂಡಿದ್ದಾರೆ ಮತ್ತು ಈ ಒಂದು ಸನ್ನಿವೇಶದಿಂದ ಸೋಲಿನ ನೋವಿನಿಂದ ಇನ್ನೂ ಹೊರಬರದ ವಿರಾಟ್ ಕೊಹ್ಲಿ ವೈಟ್ ಬಾಲ್ ಕ್ರಿಕೆಟ್‌ನಿಂದ ಸ್ವಲ್ಪ ಸಮಯದವರೆಗೆ ದೂರ ಉಳಿಯಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ; ನ. 29 ರಂದು ಚಿನ್ನ & ಬೆಳ್ಳಿ ದರ ಎಷ್ಟಿದೆ ನೋಡಿ!

ಬಿಳಿ ಜರ್ಸಿ ಮಾತ್ರ ಧರಿಸಲು ನಿರ್ಧಾರ!

ವಿರಾಟ್ ಕೊಹ್ಲಿ ಈಗಾಗಲೇ ಮಾರ್ಚ್ 2024 ರವರೆಗೆ ವೈಟ್ ಬಾಲ್ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಿದ್ದಾರೆ ಆದರೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಇದೆ, ಹೌದು ವಿರಾಟ್ ಕೊಹ್ಲಿ ವೈಟ್ ಬಾಲ್ ಕ್ರಿಕೆಟ್‌ನಿಂದ ಮಾತ್ರ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ವಿರಾಟ್ ಲಭ್ಯವಿದ್ದಾರೆ ಡಿಸೆಂಬರ್ 26 ರಿಂದ ಜನವರಿ 7 ರವರೆಗೆ ಎರಡು ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಆಡಲಿದ್ದಾರೆ.

ಐಪಿಎಲ್ 2024 ಮಾರ್ಚ್ ಅಂತ್ಯದ ವೇಳೆಗೆ ಪ್ರಾರಂಭವಾಗುವ ಸಾಧ್ಯತೆಯಿದೆ ಮತ್ತು ವಿರಾಟ್ ಕೊಹ್ಲಿ ಪ್ರಸ್ತುತ ಯುನೈಟೆಡ್ ಕಿಂಗ್‌ಡಂನಲ್ಲಿ ತಮ್ಮ ಕುಟುಂಬದೊಂದಿಗೆ ಬಿಡುವಿನ ವೇಳೆಯನ್ನು ಕಳೆಯುತ್ತಿರುವುದರಿಂದ ಮತ್ತೆ ಐಪಿಎಲ್ ನಲ್ಲಿ ವೈಟ್ ಬಾಲ್ ಕ್ರಿಕೆಟ್ ಅನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ವಿರಾಟ್ ಕೊಹ್ಲಿ ವಿರಾಮದ ನಂತರ ಮತ್ತೊಮ್ಮೆ ಭಾರತ ತಂಡದಲ್ಲಿ ನೀಲಿ ಜೆರ್ಸಿ ಧರಿಸಿ 2024 ರ ಟಿ 20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಕಣಕ್ಕೆ ಇಳಿಯಬೇಕು ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *