Get flat 10% off on Wonderla Entry Tickets | Use coupon code "BTWONDER".
Train Canceled: ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ರೈಲುಗಳು ನಾಳೆಯಿಂದ ರದ್ದು, ಕಾರಣ ಇಲ್ಲಿದೆ ನೋಡಿ!
Train Canceled: ನೈರುತ್ಯ ರೈಲ್ವೆಯು ನಾಳೆಯಿಂದ ಅಂದರೆ ಡಿಸೆಂಬರ್ 14 ರಿಂದ 22 ರವರೆಗೆ ಬೆಂಗಳೂರು ಮತ್ತು ಮಂಗಳೂರು ನಡುವೆ ದಿನ ನಿತ್ಯ ಕಾರ್ಯನಿರ್ವಹಿಸುವ ಹಲವಾರು ರೈಲುಗಳನ್ನು ರದ್ದುಗೊಳಿಸುವುದಾಗಿ ತಿಳಿಸಿದೆ. ಕಾರಣ ಇಲ್ಲಿದೆ ನೋಡಿ!
ಬೆಂಗಳೂರು ಮತ್ತು ಮಂಗಳೂರು ರೈಲು ಮಾರ್ಗದ ನಡುವಿನ ಹಲವಾರು ರೈಲುಗಳನ್ನು ರದ್ದುಗೊಳಿಸಿದಾಗಿ ನೈರುತ್ಯ ರೈಲ್ವೆಯು ಈಗಾಗಲೇ ತಿಳಿಸಲಾಗಿದ್ದು ಈ ಮಾರ್ಗಗಳ ಮಧ್ಯೆ ಹಾಸನ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಯಾರ್ಡ್ ಮರು ನಿರ್ಮಾಣಕ್ಕೆ ಅನುಕೂಲವಾಗುವಂತೆ ಈ ಒಂದು ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಮೈಸೂರಿನ KSRTC ಬಸ್ ನಿಲ್ದಾಣವನ್ನು ಬೇರೆ ಕಡೆಗೆ ಸ್ಥಳಾಂತರ ಸಾಧ್ಯತೆ!
ಈ ಕುರಿತು ಡಿಸೆಂಬರ್ 11ರಂದು ಪ್ರಿನ್ಸಿಪಲ್ ಚೀಫ್ ಆಪರೇಷನ್ ಮ್ಯಾನೇಜರ್, SWR ಅವರ ಅಧಿಸೂಚನೆಯಂತೆ ಡಿಸೆಂಬರ್ 14 ರಿಂದ 18 ರವರೆಗೆ ಪೂರ್ವ ಇಂಟರ್ಲಾಕಿಂಗ್ ಮತ್ತು ಡಿಸೆಂಬರ್ 19 ರಿಂದ 22 ರವರೆಗೆ ಹಾಸನದ ಯಾಡ್ ನಲ್ಲಿ ನಾನ್ ಇಂಟರ್ಲಾಕಿಂಗೆ ರೈಲ್ವೆ ಸಚಿವಾಲಯ ಈಗಾಗಲೇ ಅನುಮೋದನೆಯನ್ನು ನೀಡಿದೆ.
ರೈಲ್ವೆ ಕಾಮಗಾರಿಯ ಭಾಗವಾಗಿ ಡಿಸೆಂಬರ್ 14 ರಿಂದ 18 ವರೆಗೆ ಲೈನ್ ಬ್ಲಾಕ್ ಸಿಗ್ನಲ್ ಮತ್ತು ದೂರ ಸಂಪರ್ಕ ಬ್ಲಾಕ್ ಮುಂತಾದ ಕಾಮಗಾರಿಗಳು ಮದ್ಯಾಹ್ನ 2 ರಿಂದ ಸಂಜೆ 6 ಗಂಟೆ ವರೆಗೆ ಮತ್ತು ಸಂಜೆ 6 ರಿಂದ 8ರ ವರೆಗೆ ಜಾರಿಯಲ್ಲಿರುತ್ತದೆ, ಹಾಗಾಗಿ ಈ ಸಮಯದಲ್ಲಿ ಹಾಸನದಲ್ಲಿ ಯಾವುದೇ ರೈಲು ಮಾರ್ಗಗಳು ರೈಲು ಕಾರ್ಯಾಚರಣೆಗೆ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮತ್ತೆ ಇಳಿಕೆ ಕಂಡ ಚಿನ್ನ, ಇಂದಿನ ಚಿನ್ನದ ದರ ಎಷ್ಟಿದೆ ನೋಡಿ!
ಹಾಗೂ ಕಾಮಗಾರಿಯ ಮುಂದುವರಿದ ಭಾಗವಾಗಿ ಡಿಸೆಂಬರ್ 19 ರಿಂದ 22 ರವರೆಗೆ ಇಂಜಿನಿಯರಿಂಗ್ ಕೆಲಸಕ್ಕಾಗಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ರೈಲ್ವೆ ಟ್ರಾಫಿಕ್ ಬ್ಲಾಕ್ ಅನ್ನೋ ವಿಧಿಸಲಾಗುವುದು ಮತ್ತು ಈ ಅವಧಿಯಲ್ಲಿ ಯಾವುದೇ ರೈಲುಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ವರದಿಯಾಗಿದೆ.
ರದ್ದುಗೊಂಡ ರೈಲುಗಳು
- ಬೆಂಗಳೂರು-ಕಣ್ಣೂರು-ಬೆಂಗಳೂರು ಪಂಚಗಂಗಾ ಎಕ್ಸ್ಪ್ರೆಸ್ (ರಾತ್ರಿಯ ಸೇವೆಗಳು) – ಡಿಸೆಂಬರ್ 16 ರಿಂದ ಡಿಸೆಂಬರ್ 20 ರವರೆಗೆ ರದ್ದು.
- ಬೆಂಗಳೂರು-ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್ಪ್ರೆಸ್ (ರಾತ್ರಿಯ ಸೇವೆಗಳು) – ಡಿಸೆಂಬರ್ 16 ರಿಂದ ಡಿಸೆಂಬರ್ 20 ರವರೆಗೆ ರದ್ದು.
- ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ತ್ರಿ-ಸಾಪ್ತಾಹಿಕ ಎಕ್ಸ್ಪ್ರೆಸ್ – ಡಿಸೆಂಬರ್ 14, 17, 19 ಮತ್ತು 21 ರಂದು ರದ್ದು.
- ಯಶವಂತಪುರ-ಕಾರವಾರ ತ್ರಿ-ಸಾಪ್ತಾಹಿಕ ಎಕ್ಸ್ಪ್ರೆಸ್ – ಡಿಸೆಂಬರ್ 13, 15, 18, 20 ಮತ್ತು 22 ರಂದು ರದ್ದು.
- ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್ಪ್ರೆಸ್ (ರೈಲು ಸಂಖ್ಯೆ. 16539) – ಡಿಸೆಂಬರ್ 16 ರಂದು ರದ್ದು.
- ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16540) – ಡಿಸೆಂಬರ್ 17 ರಂದು ರದ್ದು
Latest Trending
- ಯುವ ನಿಧಿ ಯೋಜನೆಗೆ ಅರ್ಜಿ ಆಹ್ವಾನ & ಭತ್ಯೆ ಹಣ ಖಾತೆಗೆ ವರ್ಗಾವಣೆ ಯಾವಾಗ ? ಇಲ್ಲಿದೆ ಸಂಪೂರ್ಣ ವಿವರ!
- ಬೆಂಗಳೂರು-ಮೈಸೂರು 4 ಹಳಿ ರೈಲು ಮಾರ್ಗಕ್ಕೆ ನೈಋತ್ಯ ರೈಲ್ವೆ ಯಿಂದ ಅಂತಿಮ ಸಮೀಕ್ಷೆ
- ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸುವ ‘ಫಾರ್ಮ್ ಗಾರ್ಡ್’ ಉಪಕರಣ
- ನಮ್ಮ ಮೆಟ್ರೋಗೆ ಬಿಬಿಎಂಪಿ ಸೇವಾ ಶುಲ್ಕದ ಹೊರೆ: ಮೆಟ್ರೋ ಟಿಕೆಟ್ ದರ ಹೆಚ್ಚಳ ಸಾಧ್ಯತೆ!
Follow us on Instagram Bangalore Today