Nandi Hills Bangalore; ನಂದಿ ಹಿಲ್ಸ್ ಗೆ ಬರಲಿದೆ ರೋಪ್ ವೇ; ಶೀಘ್ರದಲ್ಲೇ ಕಾಮಗಾರಿ ಆರಂಭ

Nandi Hills Bangalore:ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ನಂದಿ ಬೆಟ್ಟವು ಭೂಮಿಯ ಮೇಲಿನ ಸ್ವರ್ಗ ಎಂದರೆ ತಪ್ಪಾಗಲಾರದು ಏಕೆಂದರೆ ಈ ನಂದಿ ಬೆಟ್ಟದ ಆಕರ್ಷಣೆಯು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಮತ್ತು ಅದರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಈಗಾಗಲೇ ರೋಪ್‌ವೇ ನಿರ್ಮಿಸಲು ನಿರ್ಧರಿಸಿದೆ.

ಖಾಸಗಿ ಮತ್ತು ಸಾರ್ವಜನಿಕ ಕಂಪನಿಗಳ ಸಹಯೋಗದೊಂದಿಗೆ ಸುಮಾರು 3 ಕಿಮೀ ಉದ್ದದ ರೋಪ್ ವೇ ಕಾಮಗಾರಿ ಅಭಿವೃದ್ಧಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಡೈನಾಮಿಕ್ಸ್ ರೋಪ್‌ವೇ ಪ್ರೈವೇಟ್ ಲಿಮಿಟೆಡ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.

Nandi Hills Bangalore

Bangalore, October 28: ಬೆಂಗಳೂರು ಹೊರವಲಯದಲ್ಲಿರುವ ಚಿಕ್ಕಬಳ್ಳಾಪುರ ವ್ಯಾಪ್ತಿಗೆ ಬರುವ ನಂದಿ ಬೆಟ್ಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ನಂದಿ ಬೆಟ್ಟವನ್ನು ಅಭಿವೃದ್ಧಿಪಡಿಸುವ ಅಂಗವಾಗಿ ನೂತನ ರೋಪ್‌ವೇ ಸೇವೆ ಆರಂಭಿಸಲು ನಿರ್ಧರಿಸಿದೆ, ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.

ಇದನ್ನೂ ಓದಿ; ರ‍್ಯಾಪಿಡೋದಿಂದ ‘ಆಟೋ ಪ್ಲಸ್’ ಸೇವೆ, ಬುಕಿಂಗ್ ಕ್ಯಾನ್ಸಲ್ ಸಮಸ್ಯೆಗೆ ಗುಡ್ ಬೈ

ನಂದಿ ಬೆಟ್ಟದಲ್ಲಿ ರೋಪ್ ವೇ ನಿರ್ಮಿಸಲು ಈಗಾಗಲೇ ಸರ್ಕಾರವು ತೀರ್ಮಾನ ಕೈಗೊಂಡಿದ್ದು ಅದರ ಕಾಮಗಾರಿಯು ಕೆಲವು ತಾಂತ್ರಿಕ ದೋಷಗಳ ಕಾರಣದಿಂದಾಗಿ ವಿಳಂಬವಾಗುತ್ತಿದೆ, ಆ ಕಾರಣಕ್ಕೆ ಇಂದು ಸ್ಥಳ ಪರಿಶೀಲನೆ ನಡೆಸಿದ ಎಂ.ಸಿ.ಸುಧಾಕರ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನಂದಿಗಿರಿಧಾಮದ ಎಲ್ಲಾ ಆಸ್ತಿಗಳನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಇತ್ತೀಚೆಗೆ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಅಧ್ಯಕ್ಷತೆಯಲ್ಲಿ ತೋಟಗಾರಿಕೆ ಇಲಾಖೆ ಸಮಿತಿಯ ಒಡೆತನಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ 9 ಎಕರೆ ಜಮೀನು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರಕ್ಕೆ ಸೇರಿದ 7 ಜಮೀನನ್ನು ಎಕ್ಕರೆ ಜಮೀನನ್ನು ಹಸ್ತಾಂತರ ಮಾಡುವಂತೆ ತಿಳಿಸಲಾಗಿದೆ.

ಹಾಗೂ ಈ ಯೋಜನೆಯ ಕುರಿತು ರೈತರೊಂದಿಗೆ ಈಗಾಗಲೇ ಮಾತುಕತೆಯನ್ನು ನಡೆಸಲಾಗಿದ್ದು ಮುಂದಿನ ಹದಿನೆಂಟು ತಿಂಗಳ ಒಳಗೆ ಈ ಒಂದು ಯೋಜನೆಯ ಕಾಮಗರಿಯ ಪೂರ್ಣಗೊಳ್ಳಲಿ ಎಂದು ಅಂದಾಜಿಸಲಾಗಿದೆ ಹಾಗೂ ಕಾಮಗಾರಿಯೋ ಪೂರ್ಣಗೊಂಡ ಬಳಿಕ ಮುಂದಿನ 30 ವರ್ಷಗಳ ಕಾಲ ಬಂಡವಾಳ ಹೂಡುವ ರೋಪ್ ವೇ ನಿರ್ಮಾಣ ಸಂಸ್ಥೆಗೇ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿದೆ.

3 ಕಿ.ಮೀ ಉದ್ದದ ರೋಪ್ ವೇ ನಿರ್ಮಾಣ!

ಈ ಯೋಜನೆಯಡಿಯಲ್ಲಿ, ಪ್ರತಿ ಕೇಬಲ್ ಕಾರ್‌ನಲ್ಲಿ ಆರು ಜನರು ಕುಳಿತುಕೊಳ್ಳುವ ಸಾಮರ್ಥ್ಯದ 50 ಕೇಬಲ್ ಕಾರ್‌ಗಳೊಂದಿಗೆ ಒಟ್ಟು 3 ಕಿಲೋಮೀಟರ್ ಉದ್ದದ ರೋಪ್‌ವೇ ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ ಇದರಿಂದ ಪ್ರತಿ ವಾರ ಸುಮಾರು 20,000 ವಾಹನಗಳು ನಂದಿ ಬೆಟ್ಟಕ್ಕೆ ಬರುವ ನಿರೀಕ್ಷೆಯಿದೆ.

ಇದರಿಂದ, ಸ್ಥಳದಿಂದ ಪ್ರವಾಸಿಗರನ್ನು ಕರೆದೊಯ್ಯುವ ಅನುಕೂಲಗಳ ಜೊತೆಗೆ, ಅಸಂಖ್ಯಾತ ಪ್ರವಾಸಿಗರು ರೋಪ್ ವೇ ಬಳಸುವ ತಮ್ಮ ಕನಸನ್ನು ನಂದಿ ಹಿಲ್ಸ್ ನಲ್ಲಿ ಪೂರ್ಣ ಗೊಳಿಸಬಹುದಾಗಿದೆ, ಕನ್ನಡ ಚಲನಚಿತ್ರದ ಹೆಸರಾಂತ ನಟ ಶಂಕರ್ ನಾಗ್ ರವರ ಕನಸಿನ ಕೂಸಾಗಿದ್ದಂತಹ ರೋಪ್ ವೇ ಯನ್ನು ಪಂಚಗಿರಿ ಗ್ರಾಮದಲ್ಲಿ ನಿರ್ಮಿಸಬೇಕೆಂಬ ಯೋಜನೆ ಮುಂದಿನ  ಮುಂದಿನ 18 ತಿಂಗಳುಗಳಲ್ಲಿ  ನನಸಾಗಲಿದೆ.

ಈ ಯೋಜನೆಯನ್ನು 93.40 ಕೋಟಿ ವೆಚ್ಚದಲ್ಲಿ ಅಂದಾಜಿಸಲಾಗಿದ್ದು ಪ್ರಸ್ತುತ ಈ ವೆಚ್ಚವನ್ನು 115 ಕೋಟಿಗೆ ಹೆಚ್ಚಿಸಲಾಗಿದೆ ಮೊದಲು ಅಂದಾಜಿಸಲಾದ ವೆಚ್ಚಕ್ಕೆ ಅದರ ಜೊತೆಯಲ್ಲೇ ಕಾಮಗಾರಿಯನ್ನು ಹಲವಾರು ವಿಷಯಗಳನ್ನು ಸೇರ್ಪಡೆ ಮಾಡಲಾಗಿದೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *