Get flat 10% off on Wonderla Entry Tickets | Use coupon code "BTWONDER".
Public School In Karnataka: ರಾಜ್ಯದಲ್ಲಿ ಹೊಸ 2 ಸಾವಿರ ಪಬ್ಲಿಕ್ ಶಾಲೆ ನಿರ್ಮಾಣ, ಬಿಬಿಎಂಪಿ ಶಾಲೆಗಳನ್ನು ಇನ್ನುಮುಂದೆ ಶಿಕ್ಷಣ ಇಲಾಖೆ ನಡೆಸಲಿದೆ
Public School In Karnataka: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಿನ್ನೆ ನಡೆದ ಸಭೆಯಲ್ಲಿ ಶಿಕ್ಷಣ ಇಲಾಖೆಯಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಶಾಲೆಗಳ ನಿರ್ವಹಣೆ ಮತ್ತು ರಾಜ್ಯದಲ್ಲಿ 2,000 ಹೊಸ ಸಾರ್ವಜನಿಕ ಶಾಲೆಗಳ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು.
ಬೆಂಗಳೂರು: ಬೆಂಗಳೂರಿನ ಆಂಧ್ರಹಳ್ಳಿ ಶಾಲೆಯ ಮಕ್ಕಳಿಂದ ಶೌಚಾಲಯ ಸ್ವಚ್ಛ ಮಾಡಿಸುವ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಶಿಕ್ಷಣ ಇಲಾಖೆಯೊಂದಿಗೆ ನಿನ್ನೆ ದಿಢೀರ್ ಸಭೆ ನಡೆಸಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಪ್ರಮುಖವಾಗಿ ಮೂರ್ನಾಲ್ಕು ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಬಿಬಿಎಂಪಿ ವ್ಯಾಪ್ತಿಗೆ ಬರುವ ಶಾಲೆಗಳ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ವಹಿಸಿಕೊಳ್ಳಲಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೋವಿಡ್ ಗೆ 2 ಬಲಿ, ಪ್ರತಿದಿನ 1500 ಕೋವಿಡ್ ಟೆಸ್ಟ್ ನಡೆಸಲು ಬಿಬಿಎಂಪಿ ನಿರ್ಧಾರ!
ಬಿಬಿಎಂಪಿ ವ್ಯಾಪ್ತಿಯ ಎಲ್ಲ ಶಾಲೆಗಳನ್ನು ಬಿಬಿಎಂಪಿಯೇ ನಿರ್ವಹಿಸುತ್ತದೆ ಆದರೆ ಶಿಕ್ಷಣದ ಸಮಸ್ಯೆಯನ್ನು & ನಿರ್ಣಯಗಳನ್ನು ಶಿಕ್ಷಣ ಇಲಾಖೆಯೇ ನಿರ್ವಹಿಸುತ್ತದೆ ಎಂದ ಅವರು, ಈ ಎಲ್ಲಾ ಶಾಲೆಗಳನ್ನು ಖಾಸಗಿ ಶಾಲೆಗಳ ಮಾದರಿಯಲ್ಲಿ ನಡೆಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ 2 ಸಾವಿರ ಹೊಸ ಸರಕಾರಿ ಶಾಲೆಗಳ ನಿರ್ಮಾಣ!
ರಾಜ್ಯದಲ್ಲಿ ಒಟ್ಟು 2000 ಸರ್ಕಾರಿ ಶಾಲೆಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದ್ದು, 1900 ಕೋಟಿ ಸಿಆರ್ಎಸ್ ನಿಧಿಯಲ್ಲಿ ಬಾಕಿ ಹಣ ಉಳಿದಿದ್ದು, ಅದರ ಸಹಾಯದಿಂದ ಸರ್ಕಾರಿ ಶಾಲೆಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು. ಶಿಕ್ಷಣ ಸಂಸ್ಥೆಗಳು ಒಂದೊಂದು ಶಾಲೆಯನ್ನು ದತ್ತು ತೆಗೆದುಕೊಳ್ಳಬೇಕು. ಶಾಲೆಗಳನ್ನು ದತ್ತು ಪಡೆದು ಹಣ ನೀಡಬೇಕು. ಆದರೆ ಆ ಶಾಲೆಗಳನ್ನೂ ಸರ್ಕಾರಿ ವ್ಯವಸ್ಥೆಯಲ್ಲಿ ನಡೆಸಲಾಗುವುದು, ಉಚಿತ ಶಿಕ್ಷಣ ನೀಡಲಾಗುವುದು, ಸಾರಿಗೆ ವೆಚ್ಚವನ್ನು ಮಾತ್ರ ಸರ್ಕಾರವೇ ಭರಿಸಲಿದೆ.
Latest Trending
- ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ!, ಇಂದಿನ ಚಿನ್ನ & ಬೆಳ್ಳಿ ದರ ಹೇಗಿದೆ ನೋಡಿ!
- ಹೆಲ್ಮೆಟ್ ಧರಿಸದೆ ವಾಹನ ಚಾಲನೆ! ಸ್ಕೂಟಿ ಪೆಪ್ ಗೆ 3.22 ಲಕ್ಷ ರೂ ದಂಡ ವಿಧಿಸಿದ ಪೊಲೀಸರು
- ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿಗಳು ಬಿಡುಗಡೆ, ಇಲ್ಲಿವೆ ನೋಡಿ, ತಪ್ಪದೆ ಓದಿ!
Follow us on Instagram Bangalore Today