Get flat 10% off on Wonderla Entry Tickets | Use coupon code "BTWONDER".
Pharmaceutical Company: ದೀಪಾವಳಿ ಪ್ರಯುಕ್ತ ಉದ್ಯೋಗಿಗಳಿಗೆ ಉಚಿತ ಕಾರು ಕೊಡುಗೆ
Parmaceutical company: ಹಬ್ಬ ಹರಿದಿನಗಳಲ್ಲಿ ಯಾವುದೇ ಕಂಪನಿಯು ತಮ್ಮ ಉದ್ಯೋಗಿಗಳಿಗೆ ಸಂಬಳವನ್ನು ಹೆಚ್ಚಿಸುವುದು, ಬೋನಸ್ ಅಥವಾ ಸಣ್ಣ ಉಡುಗೊರೆಗಳನ್ನು ನೀಡುವುದು ವಾಡಿಕೆ, ಆದರೆ ಹರಿಯಾಣದ ಪಂಚಕುಲದಲ್ಲಿರುವ (Pharmaceutical Company) ಫಾರ್ಮಾಸ್ಯುಟಿಕಲ್ ಕಂಪನಿಯೊಂದು ದೀಪಾವಳಿಯ ಸಂದರ್ಭದಲ್ಲಿ ಕಾರುಗಳನ್ನು ಉಡುಗೊರೆಯಾಗಿ ನೀಡಿ ಉದ್ಯೋಗಿಗಳಿಗೆ ಅಚ್ಚರಿಯನ್ನು ಮೂಡಿಸಿದೆ.
Image Credits: The New Indian Express
Diwali: ವರ್ಷದಲ್ಲಿ ಅನೇಕ ಹಬ್ಬಗಳಿವೆ ಆದರೆ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವಿಶೇಷವಾಗಿ ದೀಪಾವಳಿ ಹಬ್ಬದ ಸಮಯದಲ್ಲಿ ಉಡುಗೊರೆಗಳನ್ನು ನೀಡುವುದು ವಿಶೇಷವಾಗಿದೆ, ಔಷಧಗಳ ಸಂಶೋಧನೆ ಮತ್ತು ಉತ್ಪಾದನೆಯಲ್ಲಿ ಹಣ ಹೂಡುವ ಹರಿಯಾಣ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿಯು ಈ ದೀಪಾವಳಿಗೆ ತನ್ನ ಉದ್ಯೋಗಿಗಳಿಗೆ ಬಂಪರ್ ಉಡುಗೊರೆಯನ್ನು ನೀಡಿದೆ.
ಹೌದು, ಈ ಬಾರಿ ಕಂಪನಿಯು ತನ್ನ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಕಾರನ್ನು ಉಡುಗೊರೆಯಾಗಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಹೆಚ್ಚು ಮೆಚ್ಚುಗೆ ಪಡೆದಿದೆ.
ಇದನ್ನೂ ಓದಿ; 7೦ ಸಾವಿರ ಕೊಹ್ಲಿ ಮುಖವಾಡ ಹಂಚಿಕೆ, ಇಂದು ಮೈದಾನ ಕೊಹ್ಲಿ ಮಯಾ.
ಕಾರು ಓಡಿಸಲು ಗೊತ್ತಿಲ್ಲ, ಆದರೂ ಸಿಕ್ತು ಉಚಿತ ಕಾರ್!
ಹರಿಯಾಣ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿಯ ನಿರ್ದೇಶಕರಾಗಿರುವಂತಹ ಎಂ ಕೆ ಬಾಡಿಯ ರವರು 12 ಮಂದಿ ಉತ್ತಮ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಕಾರನ್ನು ನೀಡಲಾಗುತ್ತಿದೆ, ಅಲ್ಲದೆ ಪಡೆಯುತ್ತಿರುವಂತಹ 12 ಮಂದಿಗಳ ಪೈಕಿ ಅರ್ಧದಷ್ಟು ಮಂದಿಗೆ ಕಾರು ಡ್ರೈವಿಂಗ್ ಬರುವುದಿಲ್ಲ ಆದರೂ ಕಂಪನಿಯು ಅವರಿಗೆ ಉಚಿತ ಕಾರ್ ದೀಪಾವಳಿಯ ಪ್ರಯುಕ್ತ ಕೊಡುಗೆಯಾಗಿ ನೀಡುತ್ತಿರುವುದು ಉತ್ತಮ ಯೋಜನೆಯಾಗಿದೆ.
ಉದ್ಯೋಗಿಗಳೇ ನಮ್ಮ ಸೆಲೆಬ್ರಿಟಿಗಳು!
ಉದ್ಯೋಗಿಗಳಿಗೆ ಕಾರನ್ನು ಉಡುಗೊರೆಯಾಗಿ ನೀಡಿದ ನಂತರ ಮಾತನಾಡಿದ ಸಂಸ್ಥೆಯ ನಿರ್ದೇಶಕ ಎಂ.ಕೆ.ಭಾಟಿಯಾ, ಉದ್ಯೋಗಿಗಳನ್ನು ತಮ್ಮ ಸೆಲೆಬ್ರಿಟಿಗಳು ಎಂದು ಕರೆದರು, ಹೌದು, ಕಂಪನಿಯ ಯಶಸ್ಸಿಗೆ ಶ್ರಮಿಸಿದ ಉದ್ಯೋಗಿಗಳು ನಮ್ಮ ನಿಜವಾದ ಸೆಲೆಬ್ರಿಟಿಗಳು, ಉದ್ಯೋಗಿಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಮತ್ತು ನಿಷ್ಠೆಯಿಂದಾಗಿ ಕಂಪನಿಯ ಯಶಸ್ಸು ನೋಡಲು ಸಾಧ್ಯವಾಯಿತು. ಕಂಪನಿಯು ಪ್ರಾರಂಭಿಸಿದ ದಿನಗಳಿಂದ ನಮ್ಮ ಜೊತೆಗೆ ಇದ್ದು ಕಂಪನಿಯ ಯಶಸ್ವಿಗೆ ಕೈಜೋಡಿಸಿದಂತಹ ಉದ್ಯೋಗಿಗಳು ಕೂಡ ಈ ಒಂದು ಯಶಸ್ಸಿಗೆ ಕಾರಣಕರ್ತರು ಎಂದು ಅವರು ಹೇಳಿದ್ದಾರೆ.
ಆಫೀಸ್ ಬಾಯ್ ಗು ಸಿಕ್ತು ಉಚಿತ ಕಾರ್!
ತನ್ನ ಕಂಪನಿಯಲ್ಲಿ ಯಾವುದೇ ಮಟ್ಟದಲ್ಲಿ ಕೆಲಸ ಮಾಡುವ ವ್ಯಕ್ತಿ ತನ್ನ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯಬಹುದು ಎಂಬುದಕ್ಕೆ ಕಂಪನಿಯು ಆಫೀಸ್ ಬಾಯ್ಗೆ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಮಾದರಿಯಾಗಿದೆ.
Latest Trending
- ಬೆಂಗಳೂರಿನಲ್ಲಿ ಮೊದಲ ಬಾರಿ ಕಂಬಳ ಕ್ರೀಡೆ! ಇಲ್ಲಿದೆ ವಿವರ
- ನೇಪಾಳದಲ್ಲಿ ಭೂಕಂಪ ಸಂಕಷ್ಟ ಸಾವಿನ ಲೆಕ್ಕ 128ಕ್ಕೆ ಏರಿಕೆ
- “ಯಾವುದೇ ಕಾರನ್ನು ಆಯ್ಕೆಮಾಡಿ, ಅದನ್ನು ನಿಮಗೆ ಉಚಿತವಾಗಿ ಕೊಡುತ್ತೇನೆ “: ಆನಂದ್ ಮಹೀಂದ್ರ
Follow us on Instagram Bangalore Today